ಪಾಟ್ನಾ: ಪ್ರಧಾನಿ ನರೆಂದ್ರ ಮೋದಿಯವರು (Narendra Modi) ಇಲ್ಲಿನ ಚುನಾವಣಾ ಪ್ರಚಾರದ ಎರಡನೇ ದಿನವಾದ ಇಂದು (ಮೇ 13) ಗುರುದ್ವಾರ ಪಾಟ್ನಾ ಸಾಹಿಬ್‍ಗೆ (Takhat Sri Harimandir Ji Patna Sahib) ಭೇಟಿ ನೀಡಿದರು.
ಸಾಂಪ್ರದಾಯಿಕ ಕುರ್ತಾ, ಕೇಸರಿ ಸಿಖ್ ಪೇಟ ಧರಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ಗುರುದ್ವಾರಕ್ಕೆ ಬಂದಿದ್ದ ಭಕ್ತರಿಗೆ ವಿಶೇಷ ಪ್ರಸಾದ ತಯಾರಿಸಿ, ಬಡಿಸಿದ್ದಾರೆ. ನಂತರ ಗುರುದ್ವಾರದಲ್ಲಿ `ಕರಃ ಪ್ರಸಾದ’ವನ್ನು ತೆಗೆದುಕೊಂಡರು. ಈ ವೇಳೆ ಡಿಜಿಟಲ್ ಪಾವತಿ ವಿಧಾನ ಬಳಸಿ ಹಣ ಸಂದಾಯ ಮಾಡಿದರು. ಇದನ್ನೂ ಓದಿ: ಕಿಡ್ನಾಪ್ ಪ್ರಕರಣದಲ್ಲಿ FIR ಮುನ್ನವೇ ಸತೀಶ್ ಬಾಬು ವಶಕ್ಕೆ- ಸಾರಾ ಮಹೇಶ್ ಹೊಸ ಬಾಂಬ್
ಮೋದಿ ರೋಡ್ ಶೋ: ಇಂದು (ಮೆ.13) ಹಾಜಿಪುರ, ಮುಜಾಫರ್‍ಪುರ ಮತ್ತು ಸರನ್‍ನಲ್ಲಿ ಎನ್‍ಡಿಎ ಅಭ್ಯರ್ಥಿಗಳ ಪರ ಚುನಾವಣಾ ರ‍್ಯಾಲಿ ನಡೆಸಿ ಮೋದಿ ಮಾತನಾಡಲಿದ್ದಾರೆ.
ಪಾಟ್ನಾ ಸಾಹಿಬ್ ವಿಶೇಷವೇನು?: ತಖತ್ ಶ್ರೀ ಪಾಟ್ನಾ ಸಾಹಿಬ್‍ನ್ನು ತಖತ್ ಶ್ರೀ ಹರಿಮಂದಿರ್ ಜಿ, ಪಾಟ್ನಾ ಸಾಹಿಬ್ ಎಂದು ಸಹ ಕರೆಯುತ್ತಾರೆ. ಇದು ಪಾಟ್ನದಲ್ಲಿರುವ ಸಿಖ್ಖರ ಐದು ತಖತ್‍ಗಳಲ್ಲಿ ಒಂದಾಗಿದೆ. ಗುರು ಗೋಬಿಂದ್ ಸಿಂಗ್ ಅವರ ಜನ್ಮಸ್ಥಳವನ್ನು ಗುರುತಿಸಲು 18 ನೇ ಶತಮಾನದಲ್ಲಿ ಮಹಾರಾಜ ರಂಜಿತ್ ಸಿಂಗ್ ಈ ತಖತ್ ನಿರ್ಮಿಸಿದ.
ಹತ್ತನೇ ಸಿಖ್ ಗುರುವಾದ ಗುರು ಗೋಬಿಂದ್ ಸಿಂಗ್ ಅವರು 1666 ರಲ್ಲಿ ಪಾಟ್ನಾದಲ್ಲಿ ಜನಿಸಿದರು. ಅವರು ಆನಂದಪುರ ಸಾಹಿಬ್‍ಗೆ ತೆರಳುವ ಮೊದಲು ಕೆಲವು ವರ್ಷಗಳ ಕಾಲ ಇಲ್ಲಿಯೇ ಕಳೆದಿದ್ದರು. ಇದನ್ನೂ ಓದಿ: Exclusive: ಕರ್ನಾಟಕದಲ್ಲಿ ‘ಆಪರೇಷನ್ ನಾಥ’ ಸುಳಿವು ಕೊಟ್ಟ ಏಕನಾಥ ಶಿಂಧೆ!