ಮೈಸೂರು: ಎರಡು ದಿನಗಳ ರಾಜ್ಯ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಂದು ಸಂಜೆ ನಾಡದೇವವತೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಪ್ರಧಾನಿ ಮೋದಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೇರಿದಂತೆ ಹಲವರು ಸಾಥ್ ನೀಡಿದರು.
Advertisement
ಸುತ್ತೂರು ಮಠದಲ್ಲಿನ ಕಾರ್ಯಕ್ರಮ ಮುಗಿಸಿದ ಮೋದಿ ನೇರವಾಗಿ ಚಾಮುಂಡಿ ಬೆಟ್ಟಕ್ಕೆ ತೆರಳುತ್ತಿದ್ದಂತೆ ಮೋದಿ ಅವರನ್ನು ನೋಡಲು ಮಾರ್ಗದುದ್ದಕ್ಕೂ ಜನ ಕಾದು ಕುಳಿತಿದ್ದರು. ಎಲ್ಲರತ್ತ ಕೈ ಬೀಸುತ್ತಾ ತೆರಳಿದ ಮೋದಿ ಚಾಮುಂಡೇಶ್ವರಿ ದೇಗುಲ ಪ್ರವೇಶಿಸಿದರು.
Advertisement
ಚಾಮುಂಡೇಶ್ವರಿ ದೇಗುಲ ಪ್ರೇವಶ ದ್ವಾರದಲ್ಲಿರುವ ಗಣಪತಿಗೆ ಪೂಜೆ ಸಲ್ಲಿಸಿದ ಮೋದಿ ಒಳ ಪ್ರವೇಶಿಸಿದರು. ಈ ವೇಳೆ ಅರ್ಚಕರು ಶಾಲು ಹೊದಿಸಿ ಪ್ರಧಾನಿಯನ್ನು ಸ್ವಾಗತಿಸಿದರು. ನಾಡದೇವತೆಗೆ ಪಾರ್ಥನೆ ಸಲ್ಲಿಸಿದ ಮೋದಿ ಕುಂಕುಮಾರ್ಚನೆ ಪೂಜೆ ನೆರವೇರಿಸಿದರು. ದೇವಸ್ಥಾನದ ಗರ್ಭಗುಡಿ ಎದುರು ಕುಳಿತು ಪೂಜೆ ನೆರವೇರಿಸಿದರು. ಇದೇ ವೇಳೆ ಮೋದಿ ನಾಡದೇವತೆ ಎದರು ಸಂಕಲ್ಪ ಮಾಡಿದರು. ಬಳಿಕ ಗರ್ಭಗುಡಿಗೆ ಸುತ್ತು ಹಾಕಿದ ಮೋದಿ, ಚಾಮುಂಡಿ ತಾಯಿ ಪಾದಕ್ಕೆ ನಮಸ್ಕರಿಸಿದರು. ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿ ಹೊರಬಂದ ಮೋದಿ ದೇಗುಲಕ್ಕೆ ಕಾಣಿಕೆ ಹಾಕಿದರು.
Advertisement
Advertisement
ಬಾಂಬ್ ನಿಷ್ಕ್ರಿಯ ದಳ ಪರಿಶೀಲನೆ: ಬಾಂಬ್ ನಿಷ್ಕ್ರಿಯದಳ, ಶ್ವಾನದಳದಿಂದ ದೇವಸ್ಥಾನದ ಸುತ್ತ ಹಾಗೂ ರಸ್ತೆ ಅಕ್ಕಪ್ಕದಲ್ಲಿ ಪರಿಶೀಲನೆ ನಡೆಸಲಾಗಿತ್ತು. ಸಂಸದ ಪ್ರತಾಪ್‌ಸಿಂಹ ನೇತೃತ್ವದಲ್ಲಿ ಅಂಗಡಿ ಮುಂಗಟ್ಟುಗಳ ಬಳಿಯೂ ತಪಾಸಣೆ ನಡೆಸಲಾಗಿತ್ತು.
ಹಬ್ಬದ ವಾತಾವರಣ: ಪ್ರಧಾನಿ ಭೇಟಿ ನೀಡುತ್ತಿರುವ ಹಿನ್ನೆಲೆ ಚಾಮುಂಡಿ ಬೆಟ್ಟದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ತಾಯಿ ಚಾಮುಂಡೇಶ್ವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ತಾಯಿ ಚಾಮುಂಡೇಶ್ವರಿಗೆ ಕೆಂಪು, ಬೀಳಿ ಹಾಗೂ ಚಿನ್ನದ ಬಣ್ಣದಿಂದ ಕೂಡಿದ್ದ ಸೀರೆಯಲ್ಲಿ ಅಲಂಕರಿಸಲಾಗಿತ್ತು.