ನವದೆಹಲಿ: ಆಜಾದ್ ಕಿ ಅಮೃತ ಮಹೋತ್ಸವ ಆಚರಿಸುತ್ತಿರುವ ಹಿನ್ನೆಲೆ ದೇಶದ ಜನತೆ ಆಗಸ್ಟ್ 13 ರಿಂದ 15ರವರೆಗೆ ತ್ರಿವರ್ಣ ಧ್ವಜವನ್ನು ನಿಮ್ಮ ಮನೆಮುಂದೆ ಹಾರಿಸಿ ಅಥವಾ ಪ್ರದರ್ಶಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಟ್ವಿಟ್ಟರ್ ಮೂಲಕ ಕರೆ ನೀಡಿದ್ದಾರೆ.
Advertisement
ಈ ವರ್ಷ ದೇಶದ ಜನತೆ ಆಚರಿಸುವ ಸ್ವಾತಂತ್ರ್ಯೋತ್ಸವ ವಿಶೇಷವಾಗಿದ್ದು, ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಆಜಾದ್ ಕಿ ಅಮೃತ ಮಹೋತ್ಸವ ಎಂದು ವರ್ಷವಿಡೀ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದರ ಭಾಗವಾಗಿ ನರೇಂದ್ರ ಮೋದಿ ದೇಶದ ಜನತೆಯಲ್ಲಿ ವಿಶೇಷ ಮನವಿ ಮಾಡಿಕೊಂಡಿದ್ದಾರೆ. ಪ್ರತಿ ಮನೆಯಲ್ಲಿ ತಿರಂಗ ಅಭಿಯಾನವನ್ನು ಬಲಪಡಿಸೋಣ. ಆಗಸ್ಟ್ 13 ರಿಂದ 15ರವರೆಗೆ ತ್ರಿವರ್ಣ ಧ್ವಜವನ್ನು ನಿಮ್ಮ ಮನೆಯಲ್ಲಿ ಹಾರಿಸಿ ಅಥವಾ ಪ್ರದರ್ಶಿಸಿ, ಈ ಅಭಿಯಾನ ರಾಷ್ಟ್ರಧ್ವಜದ ಮೇಲೆ ಭಾರತೀಯರ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ. ಇದನ್ನೂ ಓದಿ: ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್ – ಫೈನಲ್‍ಗೆ ಲಗ್ಗೆ ಇಟ್ಟ ಎಲ್ದೋಸ್ ಪಾಲ್, ರೋಹಿತ್ ಯಾದವ್
Advertisement
This year, when we are marking Azadi Ka Amrit Mahotsav, let us strengthen the Har Ghar Tiranga Movement. Hoist the Tricolour or display it in your homes between 13th and 15th August. This movement will deepen our connect with the national flag. https://t.co/w36PqW4YV3
— Narendra Modi (@narendramodi) July 22, 2022
Advertisement
ಜುಲೈ 22 ಇತಿಹಾಸದಲ್ಲಿ ವಿಶೇಷ ದಿನ:
ಇಂದು ದೇಶದ ಇತಿಹಾಸದಲ್ಲಿ ವಿಶೇಷ ದಿನ. 1947ರಲ್ಲಿ ಇದೇ ದಿನ ನಮ್ಮ ರಾಷ್ಟ್ರಧ್ವಜವನ್ನು ಅನಾವರಣಗೊಳಿಸಲಾಗಿತ್ತು. ನಮ್ಮ ತ್ರಿವರ್ಣಧ್ವಜದ ಜೊತೆ ಸಹಯೋಗ ಹೊಂದಿದ ಸಮಿತಿಯ ವಿವರ ಈ ರೀತಿ ಇದೆ. ಪಂಡಿತ್ ಜವಹರಲಾಲ್ ನೆಹರೂ ಅವರು ಅನಾವರಣಗೊಳಿಸಿದ ತ್ರಿವರ್ಣಧ್ವಜ ಹಲವು ಆಸಕ್ತಿಕರ ವಿಷಯಗಳೊಂದಿಗೆ ರಾಜಾಜಿಸುತ್ತಿದೆ. ನಾವು ವಸಾಹತುಶಾಹಿ ಆಡಳಿತದ ವಿರುದ್ಧ ಹೋರಾಡುತ್ತಿದ್ದಾಗ ಮುಕ್ತ ಭಾರತಕ್ಕಾಗಿ ಧ್ವಜದ ಕನಸು ಕಂಡಂತಹ ಮಹಾನುಭಾವರ ಧೈರ್ಯ ಮತ್ತು ಪ್ರಯತ್ನಗಳನ್ನು ಇಂದು ನೆನಪಿಸಿಕೊಳ್ಳುತ್ತೇವೆ. ಅವರ ಕನಸಿನ ಭಾರತವನ್ನು ನಿರ್ಮಿಸಲು ನಾವು ಮುಂದಾಗೋಣ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆ – ಕರ್ನಾಟಕದ 4 ಮತಗಳು ತಿರಸ್ಕೃತ