ನವದೆಹಲಿ: ಇಂದು ನಡೆದ ರಾಜ್ಯಸಭೆಯ 250ನೇ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಶರದ್ ಪವಾರ್ ನೇತೃತ್ವದ ನ್ಯಾಷನಲ್ ಕಾಂಗ್ರೆಸ್ ಪಕ್ಷ(ಎನ್‍ಸಿಪಿ)ವನ್ನು ಹಾಡಿ ಹೊಗಳಿದ್ದಾರೆ.
ಎನ್‍ಸಿಪಿ ಹಾಗೂ ಬಿಜೆಡಿ(ನವೀನ್ ಪಟ್ನಾಯಕ್ ಅವರ ಬಿಜು ಜನತಾ ದಳ) ಎರಡೂ ಪಕ್ಷಗಳನ್ನು ನಾನು ಪ್ರಶಂಸಿಸಲು ಬಯಸುತ್ತೇನೆ ಎನ್ನುತ್ತಲೇ ಪ್ರಧಾನಿ ಮೋದಿ ರಾಜ್ಯಸಭೆಯ ಕಲಾಪದಲ್ಲಿ ಚರ್ಚೆಯನ್ನು ಆರಂಭಿಸಿದರು.
Advertisement
ಈ ಎರಡೂ ಪಕ್ಷಗಳು ಸಂಸತ್ತಿನ ನಿಯಮಗಳನ್ನು ಅತ್ಯದ್ಭುತವಾಗಿ ಪಾಲಿಸಿವೆ. ಅವರು ಎಂದೂ ಸದನದ ಬಾವಿಗೆ ಇಳಿದು ಪ್ರತಿಭಟಿಸಿಲ್ಲ. ಆದರೂ ಅವರು ತಮ್ಮ ಅಭಿಪ್ರಾಯಗಳನ್ನು ತುಂಬಾ ಪರಿಣಾಮಕಾರಿಯಾಗಿ ತಿಳಿಸಿದ್ದಾರೆ. ನಮ್ಮ ಪಕ್ಷವೂ ಸೇರಿದಂತೆ ಪ್ರತಿ ರಾಜಕೀಯ ಪಕ್ಷವೂ ಅವರಿಂದ ಶಿಸ್ತನ್ನು ಕಲಿಯಬೇಕು ಎಂದು ಮೋದಿ ಹೇಳಿದರು.
Advertisement
PM Modi in Rajya Sabha: Today I want to appreciate two parties, NCP and BJD. These parties have strictly adhered to parliamentary norms. They have never gone into the well. Yet, they have raised their points very effectively. Other parties including mine can learn from them. pic.twitter.com/TXvUUOWJin
— ANI (@ANI) November 18, 2019
Advertisement
ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ಎದುರಾಗಿರುವುದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿಯವರು ಈ ಹೇಳಿಕೆ ನೀಡಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.
Advertisement
ಅಲ್ಲದೆ ಶಿವಸೇನೆ, ಎನ್‍ಸಿಪಿ ಹಾಗೂ ಕಾಂಗ್ರೆಸ್ ಮಹಾ ಮೈತ್ರಿ ಮಾಡಿಕೊಳ್ಳಲು ಪ್ರಯತ್ನಿಸುತ್ತಿರುವ ಬೆನ್ನಲ್ಲೇ ಈ ಪ್ರಧಾನಿ ಮೋದಿ ಎನ್‍ಸಿಯಪಿಯನ್ನು ಪ್ರಶಂಸಿಸಿದ್ದಾರೆ. ಬಿಜೆಪಿಯ ಅತ್ಯಂತ ಹಳೇಯ ಮಿತ್ರ ಶಿವಸೇನೆ ಮಹಾರಾಷ್ಟ್ರದಲ್ಲಿ ಅಧಿಕಾರ ಹಂಚಿಕೆಯಲ್ಲಿ ಒಡಕು ಮೂಡಿದ ನಂತರ ಇದೀಗ ಪರಸ್ಪರ ವಿರೋಧಿಗಳಾಗಿವೆ.
ಮುಖ್ಯಮಂತ್ರಿ ಹುದ್ದೆಗೆ ಪಟ್ಟು ಹಿಡಿದು 50:50 ಅಧಿಕಾರ ನೀಡದ ಹೊರತು ಸರ್ಕಾರ ರಚನೆ ಅಸಾಧ್ಯ ಎಂದು ಶಿವಸೇನೆ ಹೇಳಿತ್ತು. ಹೀಗಾಗಿ ಸರ್ಕಾರ ರಚಿಸುವ ಪ್ರಯತ್ನದಿಂದ ಬಿಜೆಪಿ ಹಿಂದೆ ಸರಿದಿದೆ. ಇದೆಲ್ಲದರ ನಂತರ ಇದೀಗ ಪ್ರಧಾನಿ ನರೇಂದ್ರ ಮೋದಿಯವರ ಎನ್‍ಸಿಪಿ ಕುರಿತ ಹೇಳಿಕೆ ಅಚ್ಚರಿ ಮೂಡಿಸಿದೆ.
ಮಹಾರಾಷ್ಟ್ರದ ಒಟ್ಟು 228 ವಿಧಾನಸಭೆ ಕ್ಷೇತ್ರಗಳ ಪೈಕಿ ಶಿವಸೇನೆ 56 ಸ್ಥಾನಗಳಲ್ಲಿ ಜಯಗಳಿಸಿದೆ. ರಾಜ್ಯದಲ್ಲಿ ಮೈತ್ರಿ ಮುರಿದು ಬಿದ್ದ ನಂತರ ಕೇಂದ್ರ ಸರ್ಕಾರದಲ್ಲಿ ಸಚಿವ ಸ್ಥಾನ ಪಡೆದಿದ್ದ ಒಬ್ಬ ಸಚಿವರನ್ನು ಸಹ ರಾಜೀನಾಮೆ ಕೊಡಿಸಿತು. ನಂತರ ಸರ್ಕಾರ ರಚನೆಗೆ ಎನ್‍ಸಿಪಿ ಹಾಗೂ ಕಾಂಗ್ರೆಸ್ ಜೊತೆ ಶಿವಸೇನೆ ಮಾತುಕತೆ ಆರಂಭಿಸಿತು. ಮೂವರೂ ಸೇರಿ ಮಹಾಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಲು ಮೂರು ಪಕ್ಷಗಳ ನಾಯಕರು ಇದೀಗ ಕಸರತ್ತು ನಡೆಸುತ್ತಿದ್ದಾರೆ.
ಮಹಾ ಮೈತ್ರಿಯನ್ನು ಸ್ಥಗಿತಗೊಳಿಸುವಂತೆ ಕೇಂದ್ರ ಸರ್ಕಾರ ಶರದ್ ಪವಾರ್ ಮೇಲೆ ಒತ್ತಡ ಹೇರಿದೆ ಎಂದು ಎನ್‍ಸಿಪಿಯಲ್ಲಿ ಹಲವರು ನಂಬಿದ್ದಾರೆ. ಎನ್‍ಸಿಪಿಯ ನಾಯಕರಾದ ಅಜಿತ್ ಪವಾರ್ ಹಾಗೂ ಪ್ರಫುಲ್ ಪಟೇಲ್ ವಿರುದ್ಧ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿದೆ. ಹೀಗಾಗಿ ಶರದ್ ಪವಾರ್ ಅವರು ಒತ್ತಡಕ್ಕೆ ಸಿಲುಕಿದ್ದಾರೆ.