ನವದೆಹಲಿ: ಅಧಿವೇಶನವನ್ನು ಫಲಪ್ರದವಾಗಿಸಲು ಸಂಸದರೆಲ್ಲರೂ ಮುಕ್ತ ಮನಸ್ಸಿನಿಂದ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಸುವಂತೆ ಸಂಸದರಿಗೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದರು.
ಸಂಸತ್ತಿನ ಮುಂಗಾರು ಅಧಿವೇಶನ ಪ್ರಾರಂಭವಾಗುವ ಮುನ್ನ ಮಾತನಾಡಿದ ಅವರು, ಸಂಸತ್ತಿನಲ್ಲಿ ಮುಕ್ತ ಮನಸ್ಸಿನಿಂದ ಸಂವಾದ ನಡೆಯಬೇಕು. ಅಗತ್ಯಬಿದ್ದರೆ ಚರ್ಚೆಯಾಗಬೇಕು. ಹಾಗೂ ಸದನದ ಘನತೆಯನ್ನು ಎತ್ತಿಹಿಡಿಯಲು ಎಲ್ಲಾ ಸಂಸದರು ಶ್ರಮಿಸಬೇಕು. ಈ ಅಧಿವೇಶನವನ್ನು ಸಾಧ್ಯವಾದಷ್ಟು ಎಲ್ಲಾ ಸಂಸದರು ಆಲೋಚಿಸಿ ವಿಷಯಗಳನ್ನು ಚರ್ಚಿಸಬೇಕು ಎಂದು ಎಂದು ತಿಳಿಸಿದರು.
Advertisement
Speaking at the start of Monsoon Session of Parliament. https://t.co/IvcDcLfWLK
— Narendra Modi (@narendramodi) July 18, 2022
ಈ ಅವಧಿಯು ಬಹಳ ಮಹತ್ವದ್ದಾಗಿದ್ದು, ಇದು ಆಜಾದಿ ಕಾ ಅಮೃತ ಮಹೋತ್ಸವದ ಅವಧಿಯಾಗಿದೆ. ಆಗಸ್ಟ್ 15 ಮತ್ತು ಮುಂಬರುವ 25 ವರ್ಷಗಳಿಗೆ ವಿಶೇಷ ಮಹತ್ವವಿದೆ. ರಾಷ್ಟ್ರವು 100 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸುತ್ತದೆ. ಇದು ಸಂಕಲ್ಪ ಮಾಡುವ ಸಮಯವಾಗಿದೆ. ನಮ್ಮ ಪ್ರಯಾಣವನ್ನು ನಿರ್ಧರಿಸಿ ಎಂದರು. ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆಗೆ ಬಿಜೆಪಿ ತಾಲೀಮು ನಡೆಸಿದ್ದು ಯಾಕೆ?
Advertisement
Advertisement
ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಡಲು ಅನೇಕರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ. ಹಾಗೇ ಅನೇಕರು ಜೈಲಿನಲ್ಲೇ ತಮ್ಮ ಜೀವನವನ್ನು ಕಳೆದರು. ಅವರೆಲ್ಲರನ್ನು ನೆನಪಿಸಿಕೊಂಡು, ಅವರ ಕನಸುಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವಂತೆ ತಿಳಿಸಿದರು. ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆ- ಮತ ಚಲಾಯಿಸಿದ ಪ್ರಧಾನಿ ಮೋದಿ
Advertisement
ಸಂಸತ್ತಿನ ಮುಂಗಾರು ಅಧಿವೇಶನ ಇಂದಿನಿಂದ ಆರಂಭವಾಗಿದ್ದು, ಆಗಸ್ಟ್ 12ರವರೆಗೆ ನಡೆಯಲಿದೆ. ಈ ಅವಧಿಯಲ್ಲಿ 18 ಅಧಿವೇಶನಗಳು ನಡೆಯಲಿವೆ. ರಾಷ್ಟ್ರಪತಿ ಚುನಾವಣೆ ಮತ್ತು ಉಪರಾಷ್ಟ್ರಪತಿ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಈ ಅಧಿವೇಶನ ಮಹತ್ವ ಪಡೆದಿದೆ.