ಲಕ್ನೋ: ಬಿಜೆಪಿಯವರಿಗೆ ಮುಸ್ಲಿಂ ಹೆಣ್ಣುಮಕ್ಕಳ ಬಗ್ಗೆ ಗೌರವವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ರಾಜ್ಯದಲ್ಲಿ ಹಿಜಬ್ ಹಾಗೂ ಕೇಸರಿ ಶಾಲು ಸಂಘರ್ಷ ಭುಗಿಲೆದ್ದಿದೆ. ಈ ಮಧ್ಯೆ ಉತ್ತರ ಪ್ರದೇಶದಲ್ಲಿ ಚುನಾವಣೆ ಪ್ರಚಾರ ನಡೆಸುತ್ತಿರುವ ಮೋದಿ ಅವರು ಹಿಜಬ್ ಕುರಿತಂತೆ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ರಾಜ್ಯದ ಶಾಂತಿಗೆ ಭಂಗ ತರುವ ಕೆಲಸವಾಗದಿರಲಿ: ಬೊಮ್ಮಾಯಿ
ವಿಪಕ್ಷ ನಾಯಕರು ಜನರ ಹಾದಿಯನ್ನು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ಅವರಿಗೆ ಮುಸ್ಲಿಂ ಮಹಿಳೆಯರ ಮೇಲೆ ಗೌರವವಿದೆ. ಮುಸ್ಲಿಂ ಮಹಿಳೆಯರಿಗೆ ಬಿಜೆಪಿಯವರು ಬೆಂಬಲಿಸುತ್ತಿರುವುದು ವಿಪಕ್ಷಗಳಿಗೆ ಸಹಿಸಲು ಆಗುತ್ತಿಲ್ಲ. ನಾವು ಮುಸ್ಲಿಂ ಹೆಣ್ಣು ಮಕ್ಕಳ ಪರವಾಗಿದ್ದೇವೆ ಎಂದಿದ್ದಾರೆ.
ಮುಸ್ಲಿಂ ಮಹಿಳೆಯರನ್ನು ತ್ರಿವಳಿ ತಲಾಖ್ ಶಿಕ್ಷೆಯಿಂದ ಮುಕ್ತಗೊಳಿಸಿದ್ದೇವೆ. ಬಿಜೆಪಿ ಮೇಲೆ ಮುಸ್ಲಿಂ ಮಹಿಳೆಯರಿಗೆ ವಿಶ್ವಾಸ ಹೆಚ್ಚಾಗುತ್ತಿದೆ. ವಿಪಕ್ಷಗಳಿಗೆ ವೋಟ್ ತಪ್ಪಿಹೋಗುತ್ತದೆ ಎಂಬ ಭಯ ಎದುರಾಗಿದೆ. ಹಾಗಾಗಿ ಅವರಿಗೆ ನಿದ್ದೆ ಬರುತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಸುಪ್ರೀಂ ಅಂಗಳಕ್ಕೆ ಹಿಜಬ್ ವಿವಾದ – ತುರ್ತು ವಿಚಾರಣೆ ಇಲ್ಲ