ಇಂದು ಪ್ರಮುಖ ದಿನ: ಮೋದಿ

Public TV
2 Min Read
NARENDRA MODI

ನವದೆಹಲಿ: ಇಂದಿನಿಂದ 12 ರಿಂದ 14 ವರ್ಷದ ಮಕ್ಕಳಿಗೆ ಕೊರೊನಾ ಲಸಿಕೆ ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ ನಾಗರಿಕರಿಗೆ ಲಸಿಕೆ ನೀಡುವ ಭಾರತದ ಪ್ರಯತ್ನದಲ್ಲಿ ಇಂದು ಪ್ರಮುಖ ದಿನವಾಗಿದೆ ಎಂದು ತಿಳಿಸಿದ್ದಾರೆ.

ಟ್ವೀಟ್‍ನಲ್ಲಿ ಏನಿದೆ?: 
ನಮ್ಮ ದೇಶದ ನಾಗರಿಕರಿಗೆ ಲಸಿಕೆ ಹಾಕುವ ಭಾರತದ ಪ್ರಯತ್ನಗಳಲ್ಲಿ ಇಂದು ಪ್ರಮುಖ ದಿನವಾಗಿದೆ. ಇನ್ನು ಮುಂದೆ 12-14 ವಯಸ್ಸಿನ ಯುವಕರೆಲ್ಲರೂ ಲಸಿಕೆಗೆ ಅರ್ಹರಾಗಿರುತ್ತಾರೆ. ಈ ವಯಸ್ಸಿನವರೆಲ್ಲರೂ ಲಸಿಕೆಯನ್ನು ಪಡೆದುಕೊಳ್ಳಬೇಕೆಂದು ನಾನು ಮನವಿ ಮಾಡುತ್ತೇನೆ ಎಂದು ತಿಳಿಸಿದರು.

ಭಾರತದ ನೀತಿಗೆ ಅನುಗುಣವಾಗಿ ಲಸಿಕೆ ಮೈತ್ರಿ ಕಾರ್ಯಕ್ರಮದ ಅಡಿಯಲ್ಲಿ ನಾವು ಹಲವಾರು ರಾಷ್ಟ್ರಗಳಿಗೆ ಲಸಿಕೆಗಳನ್ನು ಕಳುಹಿಸಿದ್ದೇವೆ. ಭಾರತದ ಲಸಿಕೆ ಪ್ರಯತ್ನಗಳು ಕೊರೊನಾ ವಿರುದ್ಧದ ಜಾಗತಿಕ ಹೋರಾಟವನ್ನು ಬಲಗೊಳಿಸಿವೆ ಎಂದು ನನಗೆ ಖುಷಿಯಾಗಿದೆ ಎಂದರು. ಇದನ್ನೂ ಓದಿ: ಅಗ್ಗದ ದರದಲ್ಲಿ ರಷ್ಯಾದ ಕಚ್ಚಾ ತೈಲ ಖರೀದಿಗೆ ಮುಂದಾದ ಭಾರತ- ಅಮೆರಿಕ ಹೇಳಿದ್ದೇನು?

ಇಂದು, ಲಸಿಕೆಗಳನ್ನು ಭಾರತದಲ್ಲೇ ತಯಾರಿಸುತ್ತಿದ್ದೇವೆ. ಎಲ್ಲಾ ಪ್ರಕ್ರಿಯೆಯ ನಂತರ ನಾವು ಇತರ ಲಸಿಕೆಗಳಿಗೆ ಅನುಮೋದನೆಯನ್ನು ನೀಡಿದ್ದೇವೆ. ಕೊರೊನಾ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ನಾವು ಉತ್ತಮ ಸ್ಥಿತಿಯಲ್ಲಿದ್ದೇವೆ. ಅದೇ ಸಮಯದಲ್ಲಿ, ನಾವು ಕೊರೊನಾಗೆ ಸಂಬಂಧಿಸಿದಂತೆ ಎಲ್ಲಾ ರೀತಿಯ ಮುನ್ನೆಚ್ಚರಿಕೆಗಳನ್ನು ಅನುಸರಿಸಬೇಕು ಎಂದು ಸಲಹೆ ನೀಡಿದರು. ಇದನ್ನೂ ಓದಿ: ಅಕ್ರಮ ಗೋ ಸಾಗಾಟ – 6 ಆರೋಪಿಗಳನ್ನ ಪೊಲೀಸರಿಗೆ ಒಪ್ಪಿಸಿದ RSS ಕಾರ್ಯಕರ್ತರು

Share This Article
Leave a Comment

Leave a Reply

Your email address will not be published. Required fields are marked *