ನವದೆಹಲಿ: ದೀಪಾವಳಿಗೂ (Diwali) ಮುನ್ನವೇ ಪ್ರಧಾನಿ ನರೇಂದ್ರ ಮೋದಿ (Narendra Modi) ದೇಶದ ರೈತರಿಗೆ (Farmers) ಸಿಹಿ ಸುದ್ದಿ ಕೊಟ್ಟಿದ್ದಾರೆ. ಕಿಸಾನ್ ಸಮ್ಮಾನ್ ಯೋಜನೆಯಡಿ (PM KISAN) ಪ್ರಧಾನಿ ನರೇಂದ್ರಮೋದಿ ಅವರು ಸೋಮವಾರ ಒಟ್ಟು 16 ಸಾವಿರ ಕೋಟಿ ರೂ.ಗಳನ್ನು ರೈತರ ಖಾತೆಗೆ ವರ್ಗಾಯಿಸುವ 12ನೇ ಕಂತಿನ ಹಣ ಬಿಡುಗಡೆ ಮಾಡಿದ್ದಾರೆ.
Advertisement
ಇದರಿಂದ ಅರ್ಹ ರೈತರ ಖಾತೆಗೆ ಮೂರು ಕಂತುಗಳಲ್ಲಿ ತಲಾ 2 ಸಾವಿರ ರೂ.ಗಳಂತೆ ವರ್ಷಕ್ಕೆ 6 ಸಾವಿರ ಹಣ ಸಂದಾಯವಾಗಲಿದೆ. ಒಟ್ಟಾರೆಯಾಗಿ ಅರ್ಹ ರೈತ ಕುಟುಂಬಗಳು (Farmers Family) ಈ ಯೋಜನೆಯಿಂದ ಸುಮಾರು 2 ಲಕ್ಷ ಕೋಟಿ ಪ್ರಯೋಜನ ಪಡೆಯಲಿವೆ. ಇದನ್ನೂ ಓದಿ: ಸೋಮವಾರ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ 12ನೇ ಕಂತು ಬಿಡುಗಡೆ
Advertisement
Advertisement
ಏನಿದು ಪಿಎಂ ಕಿಸಾನ್ ಸಮ್ಮಾನ್ ನಿಧಿ?:
ಪಿಎಂ ಕಿಸಾನ್ ಸಮ್ಮಾನ್ (PM KISASN Samman) ನಿಧಿಯನ್ನು 2019ರ ಫೆಬ್ರವರಿ 24 ರಂದು ಜಾರಿಗೊಳಿಸಲಾಯಿತು. ಈ ಯೋಜನೆ ಮೂಲಕ ರೈತರಿಗೆ ವರ್ಷಕ್ಕೆ 6,000 ರೂ. ಪ್ರೋತ್ಸಾಹ ಧನ ನೀಡಿ ಕೃಷಿ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ. ಪ್ರತಿ ನಾಲ್ಕು ತಿಂಗಳಿಗೊಮ್ಮೆ 2,000 ರೂ.ನಂತೆ ವರ್ಷಕ್ಕೆ ಮೂರು ಕಂತಿನಲ್ಲಿ 6 ಸಾವಿರ ರೂ. ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗುತ್ತಿದೆ. ಈಗಾಗಲೇ 11 ಕಂತುಗಳಲ್ಲಿ ರೈತರ ಖಾತೆಗೆ ಹಣ ಬಿಡುಗಡೆಗೊಳಿಸಲಾಗಿದೆ. ಕಳೆದ ಮೇ ತಿಂಗಳಿನಲ್ಲಿ ಕೊನೆಯ ಕಂತಿನ ಹಣವನ್ನು ಬಿಡುಗಡೆ ಮಾಡಲಾಗಿತ್ತು. ಇದನ್ನೂ ಓದಿ: ಬೇರೆಯವರೊಂದಿಗೆ ಲೈಂಗಿಕತೆಗೆ ಒಪ್ಪದ ಪತ್ನಿ ಮೇಲೆ ಪತಿಯಿಂದ ಹಲ್ಲೆ
Advertisement
ಫಲಾನುಭವಿ ಪರಿಶೀಲಿಸೋದು ಹೇಗೆ?
* ಮೊದಲು ಪಿಎಂ ಕಿಸಾನ್ https://pmkisan.gov.in/ ವೆಬ್‌ಸೈಟ್ ಪ್ರವೇಶಿಸಬೇಕು.
* ನಂತರ ಪಾವತಿ ಯಶಸ್ಸು ಎಂದು ತೋರಿಸುವ ಟ್ಯಾಬ್ ಕೆಳಗೆ ನಕ್ಷೆ ನೋಡುತ್ತೀರಿ.
* ಅದಾದ ಬಳಿಕ ಬಲ ಭಾಗದಲ್ಲಿ ಹಳದಿ ಬಣ್ಣದಲ್ಲಿ ಕಾಣುವ ಡ್ಯಾಶ್‌ಬೋರ್ಡ್ ಅನ್ನು ಕ್ಲಿಕ್ ಮಾಡಬೇಕು.
* ನಂತರ ಹೊಸ ಪುಟಕ್ಕೆ ತೆರೆದುಕೊಳ್ಳುತ್ತದೆ.
* ನಂತರ ವಿಲೇಜ್ (ಗ್ರಾಮ) ಡ್ಯಾಶ್‌ಬೋರ್ಡ್‌ಗೆ ತೆರಳಿ ಆ ಪುಟದಲ್ಲಿ ಕೇಳುವ ಮಾಹಿತಿ ಭರ್ತಿ ಮಾಡಬೇಕು.
* ನಂತರ ರಾಜ್ಯ, ಜಿಲ್ಲೆ ಹಾಗೂ ನಿಮ್ಮೂರಿನ ಗ್ರಾಮ ಪಂಚಾಯಿತಿಯನ್ನು ಆಯ್ಕೆ ಮಾಡಿ, ವೀಕ್ಷಣೆ ಬಟನ್ ಕ್ಲಿಕ್ ಮಾಡಬೇಕು.
* ಆಮೇಲೆ ನೀವು ಫಲಾನುಭವಿಗಳಾಗಿದ್ದೇರೋ ಇಲ್ಲವೋ ಎಂದು ಪರಿಶೀಲಿಸಬಹದು.