ನವದೆಹಲಿ: ಪ್ರಗತಿ ಮೈದಾನ ಇಂಟಿಗ್ರೇಟೆಡ್ ಟ್ರಾನ್ಸಿಟ್ ಅಡಿಯಲ್ಲಿ ನಿರ್ಮಿಸಲಾದ ಐಟಿಪಿಒ ಸುರಂಗದಲ್ಲಿ ಬಿದ್ದಿದ್ದ ಕಸವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಬರಿಗೈಯಲ್ಲಿ ಎತ್ತಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಇದೀಗ ಆಗುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಹಲವು ಬಾರಿ ಸ್ವಚ್ಛ ಭಾರತ್ ಕನಸನ್ನು ನನಸು ಮಾಡುವ ಬಗ್ಗೆ ಮಾತನಾಡಿದ್ದಾರೆ. ಅದಕ್ಕೆ ಉದಾಹರಣೆ ಎಂಬಂತೆ ನೂತನವಾಗಿ ಉದ್ಘಾಟನೆಗೊಂಡ ಸುರಂಗ ಮಾರ್ಗವನ್ನು ಪರಿಶೀಲಿಸುತ್ತಿದ್ದ ವೇಳೆ ಅಲ್ಲಿ ಎಸೆದಿದ್ದ ಖಾಲಿ ಪ್ಲಾಸ್ಟಿಕ್ ನೀರಿನ ಬಾಟಲಿ ಹಾಗೂ ಇತರ ಕೆಲವು ವಸ್ತುಗಳನ್ನು ಎತ್ತಿ ಕಸದ ಬುಟ್ಟಿಗೆ ಹಾಕಿದರು. ನಂತರ ಸುರಂಗದ ಒಳಗೋಡೆಯಲ್ಲಿ ಮೂಡಿದ ವರ್ಣಚಿತ್ರಗಳನ್ನು ವೀಕ್ಷಿಸಿದರು.
Advertisement
#WATCH | Prime Minister Narendra Modi picks up litter at the newly launched ITPO tunnel built under Pragati Maidan Integrated Transit Corridor, in Delhi
(Source: PMO) pic.twitter.com/mlbiTy0TsR
— ANI (@ANI) June 19, 2022
ಈ ವೀಡಿಯೋವನ್ನು ಪಶ್ಚಿಮ ಬಂಗಾಳದ ಬಿಜೆಪಿ ಸಹ-ಪ್ರಭಾರಿ ಅಮಿತ್ ಮಾಳವಿಯಾ ಟ್ವೀಟ್ ಮಾಡಿದ್ದಾರೆ. ಐಟಿಪಿಒ ಸುರಂಗ ಮಾರ್ಗದ ಉದ್ಘಾಟನೆಯಲ್ಲಿಯೂ ಅಲ್ಲಿದ್ದ ಕಸವನ್ನು ಅವರೇ ಸ್ವತಃ ತೆಗೆಯುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿಗಾಗಿ ಸಿದ್ಧವಾಗಿದೆ ಚಿನ್ನದ ಅಕ್ಷರಗಳಲ್ಲಿ ಬರೆದ ನೆನಪಿನ ಕಾಣಿಕೆ
Advertisement
Advertisement
ಪ್ರಗತಿ ಮೈದಾನದ ಪುನರಾಭಿವೃದ್ಧಿಯ ಭಾಗವಾಗಿರುವ ಸುರಂಗ ಮಾರ್ಗ ಮತ್ತು 5 ಅಂಡರ್‌ಪಾಸ್‍ಗಳ ಉದ್ಘಾಟನಾ ಕಾರ್ಯಕ್ರಮ ನಂತರ ಈ ವೀಡಿಯೋ ವೈರಲ್ ಆಗುತ್ತಿದೆ. ಪ್ರಗತಿ ಮೈದಾನ ಇಂಟಿಗ್ರೇಟೆಡ್ ಟ್ರಾನ್ಸಿಟ್ ಕಾರಿಡಾರ್ ಯೋಜನೆಯನ್ನು 920 ಕೋಟಿ ರೂ.ಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಸಂಪೂರ್ಣ ಕೇಂದ್ರ ಸರಕಾರವೇ ಅನುದಾನ ನೀಡಿದೆ. ಇದನ್ನೂ ಓದಿ: ರಾಜ್ಯಕ್ಕೆ ಮೋದಿ: ಕಾರ್ಯಕ್ರಮಗಳ ವೇಳಾಪಟ್ಟಿಯಲ್ಲಿ ಬದಲಾವಣೆ – ಪಟ್ಟಿ ಹೀಗಿದೆ..