ಡೆಹ್ರಾಡೂನ್: ಉತ್ತರಾಖಂಡ (Uttarakhand) ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಇಂದು ಕೇದಾರನಾಥಕ್ಕೆ (Kedarnath) ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
Advertisement
ಕೇದಾರನಾಥಕ್ಕೆ ಭೇಟಿ ನೀಡಿದ ಮೋದಿ ಕೆಲಕಾಲ ಪೂಜೆ ಸಲ್ಲಿಸಿದರು. ಬಳಿಕ ಬದರಿನಾಥಕ್ಕೆ (Badrinath) ತೆರಳಿದರು. ಮೋದಿ ಭೇಟಿ ಹಿನ್ನೆಲೆ ಕೇದಾರನಾಥ ಮತ್ತು ಬದರಿನಾಥ ದೇವಾಲಯಗಳನ್ನು ಹೂವಿನಿಂದ ಅಲಂಕರಿಸಲಾಗಿದೆ. ದೇವಸ್ಥಾನಗಳ ಭೇಟಿ ಬಳಿಕ ಹೇಮಕುಂಡ್ ಸಾಹಿಬ್ ರೋಪ್‍ವೇ (Ropeway) ಮತ್ತು ಕೆಲವೊಂದು ರಸ್ತೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಮೋದಿ ಭೇಟಿ ಹಿನ್ನೆಲೆಯಲ್ಲಿ ಪೊಲೀಸ್ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಇದನ್ನೂ ಓದಿ: ‘ಕಾಂತಾರ’ ನೋಡಿ ಕಣ್ಣೀರಿಟ್ಟ ಕಂಗನಾ ರಣಾವತ್: ನಾನಿನ್ನೂ ಶೇಕ್ ಆಗುತ್ತಿದ್ದೇನೆ
Advertisement
Advertisement
ಕೇದಾರನಾಥ ರೋಪ್‍ವೇ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಆದಿಗುರು ಶಂಕರಾಚಾರ್ಯ ಸಮಾಧಿಗೆ ಭೇಟಿ ನೀಡಲಿದ್ದಾರೆ. ಇದಾದ ಬಳಿಕ ಮಂದಾಕಿನಿ ಅಷ್ಟಪಥ ಮತ್ತು ಸರಸ್ವತಿ ಅಷ್ಟಪಥ ಉದ್ದಕ್ಕೂ ಅಭಿವೃದ್ಧಿ ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಲಿದ್ದಾರೆ. ಮಾಣ ಗ್ರಾಮದಲ್ಲಿ ರಸ್ತೆ ಮತ್ತು ರೋಪ್‍ವೇ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದು, ಕೇದಾರನಾಥಕ್ಕೆ ಸಂಪರ್ಕಿಸುವ 9.7 ಕಿಮೀ ಉದ್ದದ ಗೌರಿಕುಂಡ್ ರೋಪ್‍ವೇಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಮೂಲಕ ಕೇದಾರನಾಥ ಮತ್ತು ಗೌರಿಕುಂಡ್‍ನಡುವಿನ ಪ್ರಯಾಣದ ಸಮಯ ಪ್ರಸ್ತುತ 6-7 ಗಂಟೆಗಳ ಸಮಯ ಹಿಡಿಯುತ್ತಿದೆ. ಈ ರೋಪ್‍ವೇ ಆದ ಬಳಿಕ ಪ್ರಯಾಣ ಸಮಯ 45 ನಿಮಿಷವಾಗಲಿದೆ. ಇದನ್ನೂ ಓದಿ: ಬೌದ್ಧ ಸನ್ಯಾಸಿಯ ವೇಷ ಧರಿಸಿ ದೇಶ ವಿರೋಧಿ ಚಟುವಟಿಕೆಯ ಶಂಕೆ – ಚೀನೀ ಮಹಿಳೆ ಬಂಧನ
Advertisement
Uttarakhand: Prime Minister @narendramodi visits #Kedarnath temple, offers prayers.
#Uttarakhand pic.twitter.com/ipzUlewLW4
— All India Radio News (@airnewsalerts) October 21, 2022
ಹೇಮಕುಂಡ್ ರೋಪ್‍ವೇ ಗೋವಿಂದಘಾಟ್‍ನಿಂದ ಹೇಮಕುಂಡ್ ಸಾಹಿಬ್‍ಗೆ ಸಂಪರ್ಕ ಕಲ್ಪಿಸುತ್ತದೆ. ಇದು ಸುಮಾರು 12.4 ಕಿಮೀ ಉದ್ದವಿರಲಿದ್ದು, ಈ ರೋಪ್‍ವೇ ಘಂಗಾರಿಯಾವನ್ನು ಸಹ ಸಂಪರ್ಕಿಸುತ್ತದೆ. ಇದು ವ್ಯಾಲಿ ಆಫ್ ಫ್ಲವರ್ಸ್ ನ್ಯಾಷನಲ್ ಪಾರ್ಕ್‍ಗೆ ಗೇಟ್‍ವೇ ಆಗಿದೆ.
Live Tv
[brid partner=56869869 player=32851 video=960834 autoplay=true]