ನವದೆಹಲಿ: ದೀಪಾವಳಿ ಎಂದರೆ ಭಯೋತ್ಪಾದನೆಯ ಅಂತ್ಯದ ಹಬ್ಬವಾಗಿದೆ. ಕಾರ್ಗಿಲ್‍ನಲ್ಲಿನ (Kargil) ನಮ್ಮ ಸೇನೆಯು (Soldiers) ಭಯೋತ್ಪಾದನೆಯನ್ನು ನಿಯಂತ್ರಿಸಿದೆ ಪ್ರಧಾನಿ ನರೇಂದ್ರ ಮೋದಿ (Narendra Modi) ಸಂತೋಷ ವ್ಯಕ್ತಪಡಿಸಿದರು.
ಕಾರ್ಗಿನಲ್ ದೀಪಾವಳಿ (Diwali) ಆಚರಿಸಿದ ಅವರು, ಕಾರ್ಗಿಲ್ ಬಳಿಕ ಪಾಕಿಸ್ತಾನದ (Pakistan) ಜೊತೆಗೆ ಒಂದೇ ಒಂದು ಯುದ್ಧ ನಡೆದಿಲ್ಲ. ಸಶಸ್ತ್ರ ಪಡೆಗಳು ಗಡಿಯನ್ನು ರಕ್ಷಿಸುತ್ತಿರುವುದರಿಂದ ಪ್ರತಿಯೊಬ್ಬ ಪ್ರಜೆ ಶಾಂತಿಯುತವಾಗಿ ಮಲಗುತ್ತಾನೆ. ನಾನು ಭಾರತದ ಸಶಸ್ತ್ರ ಪಡೆಗಳ ಆತ್ಮಕ್ಕೆ ತಲೆಬಾಗುತ್ತೇನೆ. ನಿಮ್ಮ ತ್ಯಾಗ ಯಾವಾಗಲೂ ನಮ್ಮ ದೇಶವನ್ನು ಹೆಮ್ಮೆಪಡುವಂತೆ ಮಾಡಿದೆ ಎಂದು ಹೇಳಿದರು.
ಉಕ್ರೇನ್ ಯುದ್ಧದ ಸಮಯದಲ್ಲಿ ಅಲ್ಲಿ ಸಿಲುಕಿದ್ದ ನಮ್ಮ ನಾಗರಿಕರಿಗೆ ನಮ್ಮ ರಾಷ್ಟ್ರಧ್ವಜವು ಹೇಗೆ ರಕ್ಷಣೆ ಆಯಿತು ಎಂಬುದನ್ನು ನಾವು ನೋಡಿದ್ದೇವೆ. ಜಗತ್ತಿನಾದ್ಯಂತ ಭಾರತದ ಗೌರವ ಹೆಚ್ಚಿದೆ. ಭಾರತವು ತನ್ನ ಆಂತರಿಕ ಮತ್ತು ಬಾಹ್ಯ ಶತ್ರುಗಳ ವಿರುದ್ಧ ಯಶಸ್ವಿಯಾಗಿ ನಿಂತಿರುವುದರಿಂದ ಇದು ಸಾಧ್ಯವಾಗಿದೆ. ನೀವೆಲ್ಲರೂ ಗಡಿಯಲ್ಲಿ ನಮ್ಮನ್ನು ರಕ್ಷಿಸುತ್ತಿರುವಂತೆಯೇ ನಾವು ದೇಶದೊಳಗೆ ಭಯೋತ್ಪಾದನೆ, ನಕ್ಸಲ್ ವಾದ ಭ್ರಷ್ಟಾಚಾರದ ವಿರುದ್ಧ ಹೋರಾಡಲು ಕೆಲಸ ಮಾಡುತ್ತಿದ್ದೇವೆ. ನಕ್ಸಲ್ ವಾದ ರಾಷ್ಟ್ರದ ಬಹುದೊಡ್ಡ ಭಾಗವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿತ್ತು. ಆದರೆ ಇಂದು ಅದು ವೇಗವಾಗಿ ಕಡಿಮೆಯಾಗುತ್ತಿದೆ ಎಂದರು.
ಸೈನಿಕರನ್ನು ಕುಟುಂಬ ಎಂದ ಮೋದಿ, ಸೈನಿಕರಿಲ್ಲದೇ ನಾವು ಅದ್ಧೂರಿಯಾಗಿ ದೀಪಾವಳಿಯನ್ನು ಆಚರಿಸಲು ಸಾಧ್ಯವೇ ಇಲ್ಲ. ದೇಶದ ಸೈನಿಕರು ತಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳಲು ಅನುಕೂಲವಾಗುವಂತೆ ಗಡಿ ಪ್ರದೇಶಗಳಲ್ಲಿ ತಡೆರಹಿತ ಸಂಪರ್ಕದೊಂದಿಗೆ ಹೈಟೆಕ್ ಮೂಲಸೌಕರ್ಯಗಳನ್ನು ಅಭಿವೃದ್ಧಿ ಪಡಿಸುತ್ತಿದ್ದೇವೆ. ಮಹಿಳಾ ಅಧಿಕಾರಿಗಳ ಸೇರ್ಪಡೆ ನಮ್ಮ ಶಕ್ತಿಯ ಬೆಳವಣಿಗೆಗೆ ಕಾರಣವಾಗುತ್ತದೆ ಎಂದರು. ಇದನ್ನೂ ಓದಿ: ಹಣೆಬರಹ ಸರಿ ಇದ್ದಿದ್ರೆ 2013ರಲ್ಲೇ ಸಿಎಂ ಆಗ್ತಿದ್ದೆ: ಪರಮೇಶ್ವರ್ ಬೇಸರ
ಬಿಜೆಪಿ ಸರ್ಕಾರ ಯಾವಾಗಲೂ ಯುದ್ಧವನ್ನು ಕೊನೆಯ ಆಯ್ಕೆ ಎಂದು ಪರಿಗಣಿಸುತ್ತದೆ. ಅದು ಲಂಕಾ ಅಥವಾ ಕುರುಕ್ಷೇತ್ರದಲ್ಲಿ ನಡೆಯಲಿ, ಕೊನೆಯವರೆಗೂ ಅದನ್ನು ತಡೆಯಲು ಸಕಲ ಪ್ರಯತ್ನವನ್ನು ಮಾಡಲಾಯಿತು. ಅದೇ ರೀತಿ ನಾವು ಯಾವಾಗಲೂ ವಿಶ್ವ ಶಾಂತಿಯ ಪರವಾಗಿಯೇ ಇದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಕಾರ್ಗಿಲ್ ಯುದ್ಧಭೂಮಿಯಲ್ಲಿ ಯೋಧರೊಂದಿಗೆ ದೀಪಾವಳಿ ಆಚರಿಸಿದ ಮೋದಿ