– 80ನೇ ಮಹಾ ದೇಶಭಕ್ತಿಯ ಯುದ್ಧದ ಮೆರವಣಿಗೆ ಕಾರ್ಯಕ್ರಮಕ್ಕೆ ಆಹ್ವಾನ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಮೇ ತಿಂಗಳಲ್ಲಿ ರಷ್ಯಾಗೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ಅಲ್ಲಿಯ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ವರದಿಯ ಪ್ರಕಾರ, ಪ್ರಧಾನಿ ಮೋದಿ ಮಾಸ್ಕೋದ (Moscow) ರೆಡ್ ಸ್ಕ್ವೇರ್‌ನಲ್ಲಿ (Red Square) ನಡೆಯಲಿರುವ 80ನೇ ಮಹಾ ದೇಶಭಕ್ತಿಯ ಯುದ್ಧದ (Great Patriotic War) ಮೆರವಣಿಗೆಯಲ್ಲಿ ಅತಿಥಿಯಾಗಿ ಭಾಗವಹಿಸಲಿದ್ದಾರೆ.
Advertisement
ಈ ಮೆರವಣಿಗೆಯಲ್ಲಿ ಭಾರತೀಯ ಸೇನೆಯ ಒಂದು ತುಕಡಿಯೂ ಭಾಗವಹಿಸಬಹುದು. ಇದಕ್ಕಾಗಿ ಭಾರತೀಯ ಒಂದು ಸೇನಾ ತುಕಡಿಯು ಮೆರವಣಿಗೆಗೆ ಒಂದು ತಿಂಗಳ ಮೊದಲು ರಷ್ಯಾಕ್ಕೆ ತೆರಳಿ ಪರೇಡ್‌ಗೆ ಪೂರ್ವಾಭ್ಯಾಸ ಮಾಡಬಹುದು ಎಂದು ವರದಿ ಮಾಡಿವೆ. ಇದನ್ನೂ ಓದಿ: ಸಿದ್ದರಾಮಯ್ಯ ಬೆಂಕಿ ಇದ್ದಂತೆ, ಮುಟ್ಟಿದ್ರೆ ಭಸ್ಮ ಆಗ್ತಾರೆ – ಸಚಿವ ಜಮೀರ್ ಬ್ಯಾಟಿಂಗ್
Advertisement
Advertisement
ಪ್ರಧಾನಿ ಮೋದಿ ಮಾತ್ರವಲ್ಲದೇ ಹಲವು ದೇಶಗಳ ಮುಖ್ಯಸ್ಥರು ಈ ಮೆರವಣಿಗೆಯಲ್ಲಿ ಅತಿಥಿಗಳಾಗಿ ಭಾಗವಹಿಸಬಹುದು. ಮೇ 9ರಂದು ನಡೆಯುವ ಮೆರವಣಿಗೆಯಲ್ಲಿ ಅನೇಕ ಆಹ್ವಾನಿತ ದೇಶಗಳು ತಮ್ಮ ಭಾಗವಹಿಸುವಿಕೆಯನ್ನು ದೃಢಪಡಿಸಿವೆ ಎಂದು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಹೇಳಿದ್ದಾರೆ. ರಷ್ಯಾ ಅಧ್ಯಕ್ಷ ಡಿಮಿಟ್ರಿ ಪೆಸ್ಕೋವ್ ಅವರು ಹಲವಾರು ದೇಶಗಳ ರಾಷ್ಟ್ರಗಳ ಮುಖ್ಯಸ್ಥರನ್ನು ಮೆರವಣಿಗೆಯಲ್ಲಿ ಭಾಗವಹಿಸಲು ಆಹ್ವಾನಿಸಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದ ನುಸುಳುಕೋರನನ್ನು ಹೊಡೆದುರುಳಿಸಿದ ಬಿಎಸ್‌ಎಫ್
Advertisement
ಎರಡನೇ ಮಹಾಯುದ್ಧದ ಸಮಯದಲ್ಲಿ ರಷ್ಯಾ ಮತ್ತು ನಾಜಿ ಜರ್ಮನಿ ನಡುವೆ ನಡೆದ ಯುದ್ಧವನ್ನು ಮಹಾ ದೇಶಭಕ್ತಿಯ ಯುದ್ಧ ಎಂದು ಕರೆಯಲಾಗುತ್ತದೆ ಎಂಬುದು ಗಮನಾರ್ಹ. ಈ ಯುದ್ಧವು 1941ರ ಜೂನ್ 22ರಿಂದ 1945ರ ಮೇ 9ರವರೆಗೆ ನಡೆಯಿತು. ಇದನ್ನು ಮಾನವ ಇತಿಹಾಸದಲ್ಲಿ ಅತ್ಯಂತ ದೊಡ್ಡ ಮತ್ತು ರಕ್ತಸಿಕ್ತ ಯುದ್ಧಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಈ ಯುದ್ಧವು ಜರ್ಮನಿಯ ಸೋಲಿನೊಂದಿಗೆ ಕೊನೆಗೊಂಡಿತು. ಈ ಯುದ್ಧದ ನಂತರ, ರಷ್ಯಾ ವಿಶ್ವದ ಅತಿದೊಡ್ಡ ಮಿಲಿಟರಿ ಶಕ್ತಿಯಾಗಿ ಹೊರಹೊಮ್ಮಿತು ಮತ್ತು ಜರ್ಮನಿಯ ಮಿತ್ರರಾಷ್ಟ್ರಗಳಾದ ರೊಮೇನಿಯಾ ಮತ್ತು ಹಂಗೇರಿ ಈ ಯುದ್ಧದಲ್ಲಿ ಶರಣಾಗಬೇಕಾಯಿತು. ಇದನ್ನೂ ಓದಿ: ಪತ್ನಿ ಕೊಲೆ ಮಾಡಿ ಅಂತ್ಯಕ್ರಿಯೆ – ಕೊನೆ ಕ್ಷಣದಲ್ಲಿ ಎಂಟ್ರಿ ಕೊಟ್ಟ ಪೊಲೀಸರು, ಅರೆಸ್ಟ್ ಆದ ಗಂಡ
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಪ್ರಧಾನಿ ಮೋದಿ ರಷ್ಯಾಕ್ಕೂ ಭೇಟಿ ನೀಡಿದ್ದರು. ಅವರು ರಷ್ಯಾ ಅಧ್ಯಕ್ಷತೆಯಲ್ಲಿ ನಡೆದ 16ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಿದ್ದರು. ಒಂದು ವೇಳೆ ಪ್ರಧಾನಿ ಮೋದಿ ಮೇ ತಿಂಗಳಲ್ಲಿ ರಷ್ಯಾಕ್ಕೆ ಭೇಟಿ ನೀಡಿದರೇ, ರಷ್ಯಾ ಮತ್ತು ಉಕ್ರೇನ್ ನಡುವೆ ಕದನ ವಿರಾಮದ ಕುರಿತು ಮಾತುಕತೆ ನಡೆಯುತ್ತಿರುವ ಸಮಯದಲ್ಲಿ ಅವರ ಎರಡನೇ ಭೇಟಿ ನಡೆಯಲಿದೆ. ಎರಡೂ ದೇಶಗಳ ನಡುವಿನ ಮೊದಲ ಹಂತದ ಮಾತುಕತೆ ಈ ತಿಂಗಳು ಸೌದಿ ಅರೇಬಿಯಾದ ರಿಯಾದ್ ನಗರದಲ್ಲಿ ನಡೆಯಿತು. ರಷ್ಯಾ ಮತ್ತು ಉಕ್ರೇನ್ ನಡುವೆ ಶಾಂತಿ ನೆಲೆಸುವಂತೆ ಪ್ರಧಾನಿ ಮೋದಿ ಈಗಾಗಲೇ ಮನವಿ ಮಾಡಿದ್ದು, ಇದನ್ನು ಮತ್ತೊಮ್ಮೆ ಪ್ರತಿಪಾದಿಸುವ ಸಾಧ್ಯತೆ ಇದೆ. ಇದನ್ನೂ ಓದಿ: ಶ್ರೀ ಸಾಯಿ ಮಿನರಲ್ಸ್ ಗಣಿಗಾರಿಕೆ ಅಕ್ರಮ ಕೇಸ್ – ಹೆಚ್‌ಡಿಕೆ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿದ SIT