ಗಾಂಧಿನಗರ: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಗುಜರಾತ್‌ನ ಕಲೋಲ್‌ನಲ್ಲಿ ಇಫ್ಕೋ ನಿರ್ಮಿಸಿದ ವಿಶ್ವದ ಮೊದಲ ನ್ಯಾನೋ ಯೂರಿಯಾ ದ್ರವ ರಸಗೊಬ್ಬರ ಘಟಕವನ್ನು ಉದ್ಘಾಟಿಸಿದ್ದಾರೆ.
ಗಾಂಧಿನಗರದಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಮಂತ್ರಿಯವರು ಅಲ್ಟ್ರಾಮೋಡರ್ನ್ ನ್ಯಾನೋ ಯೂರಿಯಾ ದ್ರವ ರಸಗೊಬ್ಬರ ಘಟಕವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಈ ಸಂದರ್ಭದಲ್ಲಿ ಕೇಂದ್ರ ಗ್ರಹ ಮತ್ತು ಸಹಕಾರ ಸಚಿವ ಅಮಿತ್ ಶಾ, ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮತ್ತು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವ ಮನ್ಸುಖ್ ಮಾಂಡವಿಯಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Advertisement
અભૂતપૂર્વ ગતિ અને અભૂતપૂર્વ સ્કેલ પર ગુજરાતમાં માળખાકીય સુવિધાના ક્ષેત્રમાં કામ થઈ રહ્યુ છે… pic.twitter.com/HfYAiLlSwt
— Narendra Modi (@narendramodi) May 28, 2022
Advertisement
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಭಾರತ ವಿದೇಶದಿಂದ 50 ಕೆಜಿ ಯೂರಿಯಾ ಚೀಲವನ್ನು 3,500 ರೂ.ಗೆ ಆಮದು ಮಾಡಿ ಅದೇ ಚೀಲವನ್ನು ರೈತರಿಗೆ 300 ರೂ.ಗೆ ವಿತರಿಸುತ್ತಿದ್ದೇವೆ. ನಮಗೆ ಇದರಿಂದ ಕಷ್ಟವಾದರೂ ನಾವು ರೈತರಿಗೆ ತೊಂದರೆ ನೀಡಲು ಬಯಸುವುದಿಲ್ಲ ಎಂದು ಹೇಳಿದರು.
Advertisement
ಇಂದು ಭಾರತವು ವಿಶ್ವದಲ್ಲೇ ಅತಿ ದೊಡ್ಡ ಹಾಲು ಉತ್ಪಾದಕ ರಾಷ್ಟ್ರವಾಗಿದ್ದು, ಇದರಲ್ಲಿ ಗುಜರಾತ್ ಪ್ರಮುಖ ಪಾಲನ್ನು ಹೊಂದಿದೆ. ಇತ್ತೀಚಿನ ವರ್ಷಗಳಲ್ಲಿ ಡೈರಿ ಕ್ಷೇತ್ರವು ವೇಗವಾಗಿ ಬೆಳೆಯುತ್ತಿದೆ ಮತ್ತು ಗ್ರಾಮೀಣ ಆರ್ಥಿಕತೆಗೆ ಹೆಚ್ಚಿನ ಕೊಡುಗೆ ನೀಡುತ್ತಿದೆ. ಡೈರಿ ಕ್ಷೇತ್ರದ ಸಹಕಾರಿ ಮಾದರಿಯ ಉದಾಹರಣೆ ನಮ್ಮ ಮುಂದಿದೆ ಎಂದರು.
Advertisement
2014 में सरकार बनने के बाद हमने यूरिया की शत-प्रतिशत नीम कोटिंग के साथ ही फर्टिलाइजर क्षेत्र की स्थिति बदलने के लिए अनेक कदम उठाए हैं। इसी कड़ी में अब नैनो फर्टिलाइजर की ओर जो कदम उठाया गया है, वह बेहद महत्वपूर्ण है। pic.twitter.com/QliurXqGq6
— Narendra Modi (@narendramodi) May 28, 2022
ಇಫ್ಕೋ ನ್ಯಾನೋ ರಸಗೊಬ್ಬರಗಳ ಉತ್ಪಾದನೆಗೆ ಹೆಚ್ಚುವರಿ ಉತ್ಪಾದನಾ ಘಟಕಗಳನ್ನು ಅಯೋನ್ಲಾ, ಫುಲ್ಪುರ್, ಬೆಂಗಳೂರು ಮತ್ತು ಪರದೀಪ್, ಕಾಂಡ್ಲಾ, ದಿಯೋಘರ್ ಮತ್ತು ಗುವಾಹಟಿಯಲ್ಲಿ ಸ್ಥಾಪಿಸಿದೆ. ಈ ಎಲ್ಲಾ ಘಟಕಗಳು ದಿನಕ್ಕೆ 2 ಲಕ್ಷ ಬಾಟಲಿಗಳ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದ್ದು ಒಟ್ಟು 3,000 ಕೋಟಿ ರೂ.ಗಳ ಹೂಡಿಕೆಯ ಪೈಕಿ 720 ಕೋಟಿ ರೂ.ಗಳನ್ನು ಈಗಾಗಲೇ ಹೂಡಿಕೆ ಮಾಡಲಾಗಿದ್ದು ಸಾವಿರಾರು ಜನರಿಗೆ ಉದ್ಯೋಗವನ್ನು ಸೃಷ್ಟಿಸಲಾಗಿದೆ .