– ಮಂಡ್ಯಗೆ ಭೇಟಿ ಕೊಟ್ಟ 4ನೇ ಪ್ರಧಾನಿ ನಮೋ
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಭಾನುವಾರ ಕರ್ನಾಟಕ ಪ್ರವಾಸ ಕೈಗೊಂಡಿದ್ದು, ಮಂಡ್ಯ (Mandya) ಹಾಗೂ ಧಾರವಾಡದಲ್ಲಿ (Dharwad) ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡುತ್ತಿದ್ದಾರೆ. ಮೋದಿಗೆ ಮಂಡ್ಯ ಭೇಟಿ 2ನೇ ಬಾರಿಯದ್ದಾಗಿದೆ. ಈ ಹಿಂದೆ ಗುಜರಾತ್ ಸಿಎಂ (Gujarat CM) ಆಗಿದ್ದಾಗ ಮೋದಿ ಮಂಡ್ಯಗೆ ಭೇಟಿ ನೀಡಿದ್ದರು.
Advertisement
ಪ್ರಧಾನಿ ನರೇಂದ್ರ ಮೋದಿ ಈ ಹಿಂದೆ ಗುಜರಾತ್ ಸಿಎಂ ಆಗಿದ್ದಾಗ 2004ರಲ್ಲಿ ಮಂಡ್ಯಗೆ ಭೇಟಿ ನೀಡಿದ್ದರು. ಬಿಜೆಪಿ ಅಭ್ಯರ್ಥಿ ಮಹೇಶ್ ಚಂದ್ ಪರ ಪ್ರಚಾರಕ್ಕಾಗಿ ಮೋದಿ ಮದ್ದೂರು ಕ್ರೀಡಾಂಗಣಕ್ಕೆ ಆಗಮಿಸಿದ್ದರು. ಅಂದು ಮೋದಿಗೆ ದಿವಂಗತ ಅನಂತ್ ಕುಮಾರ್ ಅವರು ಸಾಥ್ ನೀಡಿದ್ದರು.
Advertisement
Advertisement
ಮಂಡ್ಯಗೆ ಇಲ್ಲಿಯವರೆಗೆ ಪ್ರಧಾನಿಯಾಗಿ ಭೇಟಿ ನೀಡಿರುವ 4ನೇ ಪ್ರಧಾನಿ ಮೋದಿಯಾಗಿದ್ದಾರೆ. ಪ್ರಧಾನಿಯಾಗಿ ಮಂಡ್ಯಗೆ ಭೇಟಿ ನೀಡಿದ್ದ ಮೊದಲ ಪ್ರಧಾನಿ ಯಾರೆಂದರೆ ಅದು ಜವಾಹರಲಾಲ್ ನೆಹರೂ. ಅವರು 1962ರಲ್ಲಿ ಲೋಕಸಭೆಗೆ ಸ್ಪರ್ಧಿಸಿದ್ದ ಎಂಕೆ ಶಿವನಂಜಪ್ಪ ಪರ ಪ್ರಚಾರಕ್ಕಾಗಿ ಮಂಡ್ಯ ಜಿಲ್ಲಾ ಕ್ರೀಡಾಂಗಣಕ್ಕೆ ಆಗಮಿಸಿದ್ದರು. ಇದನ್ನೂ ಓದಿ: ಮಂಡ್ಯದಲ್ಲಿ ಮೋದಿ ರೋಡ್ ಶೋ – ಸ್ವಾಗತಿಸಲು ನಿಂತಿದ್ದ ಅಭಿಮಾನಿಗಳಿಗೆ ಪ್ರಧಾನಿ ಪುಷ್ಪಾರ್ಚನೆ
Advertisement
ಬಳಿಕ 1977ರಲ್ಲಿ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ, ಲೋಕಸಭೆಗೆ ಸ್ಪರ್ಧಿಸಿದ್ದ ಚಿಕ್ಕಲಿಂಗಯ್ಯ ಪರ ಪ್ರಚಾರಕ್ಕೆ ಆಗಮಿಸಿದ್ದರು. ನಂತರ 1979ರಲ್ಲಿ ಪ್ರಧಾನಿಯಾಗಿದ್ದ ಚರಣ್ ಸಿಂಗ್ ಅವರು ಮಂಡ್ಯಕ್ಕೆ ಭೇಟಿ ನೀಡಿದ್ದರು. ಅವರು ಡಿ.ದೇವರಾಜ ಅರಸ್ ಅವರ ನಾಗರಿಕ ಸನ್ಮಾನ ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ಇದೀಗ ಮಂಡ್ಯಗೆ ಆಗಮಿಸುತ್ತಿರುವ 4ನೇ ಪ್ರಧಾನಿ ನರೇಂದ್ರ ಮೋದಿಯಾಗಿದ್ದಾರೆ. ಭಾನುವಾರ ಮೋದಿ ಮಂಡ್ಯಕ್ಕೆ ತೆರಳಿ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಉದ್ಘಾಟನೆ ಮಾಡಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಕೌರವರನ್ನು ಪಾಂಡವರಂತೆ ಸದೆಬಡಿಯುತ್ತೇವೆ: ಶ್ರೀರಾಮುಲು