ವಿವಿಧ ಪಕ್ಷಗಳ ಸಂಸದರ ಜೊತೆ ಸಂಸತ್‌ನ ಕ್ಯಾಂಟೀನ್‌ನಲ್ಲಿ ಊಟ ಸವಿದ ಮೋದಿ

Public TV
1 Min Read
narendra modi parliament canteen

– ‘ಬನ್ನಿ.. ನಿಮಗೆ ಶಿಕ್ಷೆ ಕೊಡಬೇಕು’ ಅಂತ ಸಂಸದರಿಗೆ ಶಾಕ್‌ ಕೊಟ್ಟಿದ್ದ ಪ್ರಧಾನಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇಂದು (ಶುಕ್ರವಾರ) ನೂತನ ಸಂಸತ್‌ನ ಕ್ಯಾಂಟೀನ್‌ನಲ್ಲಿ (Parliament Canteen) ಸಂಸದರ ಜೊತೆ ಊಟ ಮಾಡಿದರು.

narendra modi parliament canteen 2

ಹಲವು ಪಕ್ಷಗಳ ಒಟ್ಟು 8 ಸಂಸದರನ್ನು ಪ್ರಧಾನಿ ಊಟಕ್ಕೆ ಆಹ್ವಾನಿಸಿದ್ದರು. ಬಿಜೆಪಿ ಸಂಸದರಾದ ಹೀನಾ ಗವಿತ್, ಎಸ್.ಫಂಗ್ನಾನ್ ಕೊನ್ಯಾಕ್, ಜಮ್ಯಾಂಗ್ ತ್ಸೆರಿಂಗ್ ನಮ್ಗ್ಯಾಲ್, ಎಲ್ ಮುರುಗನ್, ಟಿಡಿಪಿ ಸಂಸದ ರಾಮಮೋಹನ್ ನಾಯ್ಡು, ಬಿಎಸ್‌ಪಿ ಸಂಸದ ರಿತೇಶ್ ಪಾಂಡೆ ಮತ್ತು ಬಿಜೆಡಿ ಸಂಸದ ಸಸ್ಮಿತ್ ಪಾತ್ರ ಅವರು ಸಂಸತ್ತಿನ ಕ್ಯಾಂಟೀನ್‌ನಲ್ಲಿ ಮಧ್ಯಾಹ್ನದ ಊಟಕ್ಕೆ ಪ್ರಧಾನಿ ಜತೆ ಸೇರಿದ್ದರು. ಇದನ್ನೂ ಓದಿ: ರಾಜ್ಯಸಭೆಯಲ್ಲಿ ಕ್ಷಮೆ ಕೇಳಿದ ಜಯಾ ಬಚ್ಚನ್

narendra modi parliament canteen 4

ಸಂಸದರಿಗೆ ಕರೆ ಬಂದ ನಂತರ ಮಧ್ಯಾಹ್ನ 2:30ಕ್ಕೆ ಅನೌಪಚಾರಿಕ ಊಟದ ಮಾಹಿತಿ ಸಿಕ್ಕಿತು. ‘ಚಲಿಯೇ, ಆಪ್ಕೋ ಏಕ್ ಶಿಕ್ಷೆ ದೇನಾ ಹೈ’ (ಬನ್ನಿ.. ನಿಮಗೆ ಶಿಕ್ಷೆ ಕೊಡಬೇಕು) ಎಂದು ಪ್ರಧಾನಿ ಸಂಸದರಿಗೆ ತಿಳಿಸಿದ್ದರು ಎಂದು ಮೂಲಗಳು ಹೇಳಿವೆ.

narendra modi parliament canteen 1

ಪ್ರಧಾನಿ ಮೋದಿ ಮತ್ತು ಸಂಸದರು ಕ್ಯಾಂಟೀನ್‌ನಲ್ಲಿ ಸಸ್ಯಾಹಾರಿ ಊಟ ಮತ್ತು ರಾಗಿ ಲಾಡು ಸವಿದರು ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಪ್ರಧಾನಿಯನ್ನು ಭೇಟಿಯಾದ ಸುಮಲತಾ – ಮಂಡ್ಯ ದೋಸ್ತಿ ರಾಜಕೀಯದಲ್ಲಿ ಢವಢವ!

ನೂತನ ಸಂಸತ್‌ನಲ್ಲಿ ಅಧಿವೇಶನ ನಡೆಯುತ್ತಿದೆ. ಫೆ.10 ರಂದು ಅಧಿವೇಶನ ಮುಗಿಯಲಿದೆ. ಇದೇ ಹೊತ್ತಿನಲ್ಲಿ ವಿವಿಧ ಪಕ್ಷಗಳ ಸಂಸದರ ಜೊತೆ ಪ್ರಧಾನಿ ಮೋದಿ ಸಂಸತ್‌ನ ಕ್ಯಾಂಟೀನ್‌ನಲ್ಲಿ ಊಟ ಸೇವಿಸಿದ್ದಾರೆ.

Share This Article