ನವದೆಹಲಿ: ಇಂಡೋನೇಷ್ಯಾ (Indonesia) ಅಧ್ಯಕ್ಷ ಜೋಕೊ ವಿಡೋಡೊ (Joko Widodo) ಅವರ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಸೆಪ್ಟೆಂಬರ್ 6 ಮತ್ತು 7 ರಂದು ಇಂಡೋನೇಷ್ಯಾದ ಜಕಾರ್ತಕ್ಕೆ ಭೇಟಿ ನೀಡಲಿದ್ದಾರೆ.
ಅಲ್ಲಿ 20ನೇ ಆಸಿಯಾನ್-ಭಾರತ ಶೃಂಗಸಭೆ ಮತ್ತು 18ನೇ ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಪ್ರಧಾನಿ ಭಾಗವಹಿಸಲಿದ್ದಾರೆ. ಭಾರತದ ಅಧ್ಯಕ್ಷತೆಯಲ್ಲಿ ಸೆಪ್ಟೆಂಬರ್ 9 ಮತ್ತು 10 ರಂದು ನವದೆಹಲಿಯಲ್ಲಿ ನಡೆಯಲಿರುವ ಜಿ20 ಶೃಂಗಸಭೆಗೆ (G20 Summit) ಮುನ್ನ ಪ್ರಧಾನಿ ಮೋದಿ ಅವರ ಇಂಡೋನೇಷ್ಯಾ ಭೇಟಿ ನೀಡುತ್ತಿದ್ದಾರೆ. ಇಂಡೋನೇಷ್ಯಾ ಜಿ20 ಭಾಗವಾಗಿದೆ ಮತ್ತು ಕಳೆದ ವರ್ಷ ಜಿ20 ಗುಂಪಿನ ಅಧ್ಯಕ್ಷ ಸ್ಥಾನವನ್ನು ಹೊಂದಿತ್ತು. ಇದನ್ನೂ ಓದಿ: ಜಿ20ಗೂ ಮುನ್ನ ಮೋದಿ – ಬೈಡೆನ್ ನಡುವೆ ದ್ವಿಪಕ್ಷೀಯ ಮಾತುಕತೆ
Advertisement
Advertisement
ಪೂರ್ವ ಏಷ್ಯಾ ಶೃಂಗಸಭೆಯು ಆಸಿಯಾನ್ ದೇಶಗಳ ನಾಯಕರು ಮತ್ತು ಭಾರತ ಸೇರಿದಂತೆ ಅದರ ಎಂಟು ಸಂವಾದ ಪಾಲುದಾರರಿಗೆ ಪ್ರಾದೇಶಿಕ ಮತ್ತು ಜಾಗತಿಕ ಪ್ರಾಮುಖ್ಯತೆಯ ವಿಷಯಗಳ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲು ಅವಕಾಶವನ್ನು ಒದಗಿಸುತ್ತದೆ. ಇದನ್ನೂ ಓದಿ: Aditya L1 ಮಿಷನ್ ಯಶಸ್ವಿ: ಇಸ್ರೋ ಅಧ್ಯಕ್ಷ
Advertisement
ಆಸಿಯಾನ್-ಭಾರತದ ಆರ್ಥಿಕ ಮಂತ್ರಿಗಳು ಇಂಡೋನೇಷ್ಯಾದಲ್ಲಿ ಈ ಹಿಂದೆ ಭೇಟಿಯಾಗಿದ್ದರು. 2009ರಲ್ಲಿ ಸಹಿ ಹಾಕಲಾದ ಆಸಿಯಾನ್-ಭಾರತದ ಸರಕುಗಳ ಒಪ್ಪಂದದ ಪರಿಶೀಲನೆ ಮಾಡಲಾಗಿತ್ತು. ಒಂದು ಜಂಟಿ ಸಮಿತಿಯು ನಿಯಮಿತವಾಗಿ ತ್ರೈಮಾಸಿಕ ಮಾತುಕತೆ ನಡೆಸಲು ಒಪ್ಪಿಕೊಂಡಿತು. ಇದನ್ನೂ ಓದಿ: Aditya L1 Launch: ಸೂರ್ಯ ಶಿಕಾರಿಗೆ ಹೊರಟ ಆದಿತ್ಯ
Advertisement
ಇಂಡೋನೇಷ್ಯಾ ಅಧ್ಯಕ್ಷ ವಿಡೋಡೊ ಅವರ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಜಕರ್ತಾಗೆ ಭೇಟಿ ನೀಡುತ್ತಿದ್ದು, ಭೇಟಿಯ ಸಂದರ್ಭದಲ್ಲಿ, ಇಂಡೋನೇಷ್ಯಾ ಮತ್ತು ಭಾರತದ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಹೊಸ ಆಯಾಮಕ್ಕೆ ಕೊಂಡೊಯ್ಯಲು ಹೊಸ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯ ಮಾತುಕತೆ ನಡೆಯಲಿದೆ. ಇದನ್ನೂ ಓದಿ: 11% ಏರಿಕೆ, ಆಗಸ್ಟ್‌ನಲ್ಲಿ 1.59 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹ – ಕರ್ನಾಟಕದ ಪಾಲು ಎಷ್ಟು?
Web Stories