ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ 19 ವರ್ಷಗಳಿಂದ ಗುಜರಾತ್ ಗಲಭೆ ಕುರಿತಾಗಿ ಒಂದು ಮಾತನ್ನೂ ಮಾತನಾಡದೆ ನೋವನ್ನು ವಿಷಕಂಠನಂತೆ ಸಹಿಸಿಕೊಂಡಿದ್ದಾರೆ. ವಿಷ ನುಂಗಿ ತನ್ನ ಗಂಟಲಿನಲ್ಲಿ ಹಿಡಿದಿಟ್ಟುಕೊಂಡ ಶಿವನಂತೆ ಮೋದಿ ಇದ್ದರು ಎಂದು ಗೃಹ ಸಚಿವ ಅಮಿತ್ ಶಾ ಅಭಿಪ್ರಾಯಪಟ್ಟಿದ್ದಾರೆ.
Advertisement
ಗುಜರಾತ್‍ನ ಗೋಧ್ರಾ ನರಮೇಧ ನಂತರದ ಹಿಂಸಾಚಾರ ಪ್ರಕರಣದಲ್ಲಿ ನರೇಂದ್ರ ಮೋದಿ ಅವರಿಗೆ ಎಸ್‍ಐಟಿ (ವಿಶೇಷ ತನಿಖಾ ತಂಡ) ಕ್ಲೀನ್ ಚಿಟ್ ನೀಡಿದ್ದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ನಿನ್ನೆ ವಜಾಗೊಳಿಸಿತ್ತು. ಈ ಬಗ್ಗೆ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿದ ಅಮಿತ್ ಶಾ, ಗುಜರಾತ್ ಗಲಭೆ ಯಾಕಾಯಿತು, ಹೇಗಾಯಿತು, ನಂತರದ ಪರಿಣಾಮಗಳು ಹೇಗೆ ಬೀರಿದ್ದವು ಎಂಬುದನ್ನು ವಿವರಿಸಿದ್ದಾರೆ. ಇದನ್ನೂ ಓದಿ: ಗುಜರಾತ್ ಗಲಭೆ – ಮೋದಿಗೆ ಬಿಗ್ ರಿಲೀಫ್, ಸುಪ್ರೀಂನಿಂದ ಸಿಕ್ತು ಕ್ಲೀನ್ ಚಿಟ್
Advertisement
ಗುಜರಾತ್ ಗಲಭೆಗೆ ಪ್ರಮುಖ ಕಾರಣ ಗೋಧ್ರಾ ರೈಲಿಗೆ ಬೆಂಕಿ ಹಚ್ಚಿದ್ದು. 16 ದಿನದ ಮಗು ಸೇರಿದಂತೆ 59 ಮಂದಿ ಸಜೀವ ದಹನವಾಗಿದ್ದರು. ಆಗ ಮೆರವಣಿಗೆ ಮಾಡಿರಲಿಲ್ಲ. ಮೃತದೇಹಗಳನ್ನು ಸಿವಿಲ್ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ನಂತರ ಅಂಬುಲೆನ್ಸ್ ನಲ್ಲಿ ಮೃತದೇಹಗಳನ್ನು ಅವರ ಕುಟುಂಬಸ್ಥರಿಗೆ ಒಪ್ಪಿಸಲಾಯಿತು. ಆದರೆ ಘಟನೆಯ ಬಳಿಕ ಈ ಬಗ್ಗೆ ಸುಳ್ಳು ಸುದ್ದಿಗಳು ಹರಿದಾಡಿದವು. ಸತ್ಯದ ಪರವಾಗಿದ್ದರೂ ಆರೋಪಗಳನ್ನು ಎದುರಿಸುತ್ತಿರುವ ಮೋದಿಜೀ ಈ ನೋವನ್ನು ಸಹಿಸಿಕೊಳ್ಳುವುದನ್ನು ನಾನು ಹತ್ತಿರದಿಂದ ನೋಡಿದ್ದೇನೆ. ನ್ಯಾಯಾಂಗ ಪ್ರಕ್ರಿಯೆ ನಡೆಯುತ್ತಿದ್ದರಿಂದ ಅವರು ಮಾತನಾಡಲಿಲ್ಲ. ಅಂದು ಗುಜರಾತ್‍ನ ಗೃಹ ಸಚಿವನಾಗಿದ್ದ ನಾನು ಈ ಬಗ್ಗೆ ಮಾತನಾಡಲಿಲ್ಲ. ಇಂದಿನ ಸಂದರ್ಶನವನ್ನು ನಾನು 2003ರಲ್ಲಿ ಗುಜರಾತ್ ಗೃಹ ಸಚಿವನಾಗಿ ನೀಡಬಹುದಿತ್ತು. ಆದರೆ ನ್ಯಾಯಾಂಗ ಪ್ರಕ್ರಿಯೆ ಮುಗಿಯುವವರೆಗೂ ಮೋದಿಜೀ ಯಾವುದೇ ಪ್ರಭಾವ ಬೀರದಂತೆ ಏನನ್ನೂ ಹೇಳಲಿಲ್ಲ. ಇದೆಲ್ಲವನ್ನೂ ಅವರು ಮೌನವಾಗಿ ಸಹಿಸಿಕೊಂಡಿದ್ದರು ಇದರ ಫಲವಾಗಿ ಸತ್ಯಕ್ಕೆ ಜಯವಾಗಿದೆ ಎಂದರು.
Advertisement
Advertisement
ಬಿಜೆಪಿಯ ರಾಜಕೀಯ ವಿರೋಧಿಗಳು, ರಾಜಕೀಯ ಪ್ರೇರಿತ ಪತ್ರಕರ್ತರು ಮತ್ತು ಸರ್ಕಾರೇತರ ಸಂಘಟನೆಗಳು ಒಟ್ಟಾಗಿ ಬಿಜೆಪಿ ಮತ್ತು ಪಕ್ಷದ ನಾಯಕರ ವಿರುದ್ಧ ಗಲಭೆ ಪ್ರಕರಣದ ಆರೋಪ ಹೊರಿಸಿದರು. ನಮ್ಮ ಮೇಲೆ ಸುಳ್ಳು ಆರೋಪ ಹೊರಿಸಿದ್ದರೂ ಕೂಡ ಬಿಜೆಪಿಗೆ ಗುಜರಾತ್‍ನ ಜನತೆಯ ಮೇಲೆ ನಮಗೆ ನಂಬಿಕೆ ಇತ್ತು. ಅಲ್ಲಿನ ಜನರು ಬಿಜೆಪಿಯನ್ನು ಕೈಬಿಡಲಿಲ್ಲ. ಅಧಿಕಾರ ತಂದು ಕೊಟ್ಟರು. ಇಂದಿಗೆ ಈ ಘಟನೆ ನಡೆದು 20 ವರ್ಷಗಳಾಗಿದೆ. ಜನರ ಆದೇಶವೇ ದೊಡ್ಡದು, ಸಾರ್ವಜನಿಕರು ಎಲ್ಲವನ್ನೂ ನೋಡುತ್ತಾರೆ. ದೇಶದ 130 ಕೋಟಿ ಜನರಿಗೆ 260 ಕೋಟಿ ಕಣ್ಣುಗಳು ಮತ್ತು 260 ಕೋಟಿ ಕಿವಿಗಳಿವೆ. ಅವರು ಎಲ್ಲವನ್ನೂ ನೋಡುತ್ತಾರೆ ಮತ್ತು ಕೇಳುತ್ತಾರೆ, ನಾವು ಎಂದಿಗೂ ಚುನಾವಣೆಯಲ್ಲಿ ಗುಜರಾತ್‍ನಲ್ಲಿ ಸೋತಿಲ್ಲ. ಜನ ನಮ್ಮನ್ನು ಕೈಬಿಟ್ಟಿಲ್ಲ. ನಮ್ಮ ಮೇಲೆ ಜನರಿಗೆ ನಂಬಿಕೆ ಇತ್ತು ಇದೀಗ ಮತ್ತೆ ನಾವು ತಪ್ಪು ಮಾಡಿಲ್ಲ ಎಂಬುದು ಸಾಬೀತಾಗಿದೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: 7 ಭ್ರೂಣಗಳ ಪತ್ತೆ ಪ್ರಕರಣ – ಭ್ರೂಣಗಳನ್ನು ಎಸೆದಿದ್ದ ಆಸ್ಪತ್ರೆ ಸೀಜ್ ಮಾಡಿದ DHO
ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ನಾನು ಬಹಳ ಎಚ್ಚರಿಕೆಯಿಂದ ಓದಿದ್ದೇನೆ. ತೀರ್ಪಿನಲ್ಲಿ ತೀಸ್ತಾ ಸೆಟಲ್ವಾಡ್ ಹೆಸರನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಆಕೆಯು ನಡೆಸುತ್ತಿದ್ದ ಎನ್‍ಜಿಒ ನನಗೆ ಆ ಎನ್‍ಜಿಒ ಹೆಸರು ನೆನಪಿಲ್ಲ ಆದರೆ ಗಲಭೆಯ ಬಗ್ಗೆ ಆಧಾರರಹಿತ ಮಾಹಿತಿಯನ್ನು ಪೊಲೀಸರಿಗೆ ನೀಡಲಾಗಿತ್ತು. ಇದರಿಂದ ನಮ್ಮ ಮೇಲೆ ಸುಳ್ಳು ಆರೋಪ ಪಿತೂರಿ ನಡೆಸಲಾಗಿತ್ತು. ಇದೀಗ ಪ್ರಕರಣದ ಬಗ್ಗೆ ಸತ್ಯ ಹೊರಬಂದಿದ್ದು, ಸುಪ್ರೀಂ ಕೋರ್ಟ್ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದೆ. ಆರೋಪಗಳನ್ನು ಕೋರ್ಟ್ ಸರಿಯಾಗಿ ಪ್ರಶ್ನಿಸಿದೆ. ಆರೋಪಗಳನ್ನು ರಾಜಕೀಯ ಪ್ರೇರಿತ ಎಂದು ನೀವು ಹೇಳಬಹುದು, ಇದು ಸಹ ಸಾಭೀತಾಗಿದೆ. ಈ ಹೋರಾಟ ಕಳೆದ 19 ವರ್ಷಗಳಿಂದ ನಾವು ನಡೆಸಿರುವ ಹೋರಾಟ ಕಡೆಗೆ ಜಯ ನಮ್ಮದಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
Interview to ANI. https://t.co/Wxib4Woz8C
— Amit Shah (@AmitShah) June 25, 2022
ಗೋಧ್ರಾ ನರಮೇಧ ನಂತರ ನಡೆದ ಹಿಂಸಾಚಾರ ಪ್ರಕರಣದ ತನಿಖೆ ನಡೆಸಿದ್ದ ಎಸ್‍ಐಟಿ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ಕ್ಲೀನ್ ಚಿಟ್ ನೀಡಿತ್ತು. ಕ್ಲೀನ್ ಚಿಟ್ ನೀಡಿದ್ದನ್ನು ಪ್ರಶ್ನಿಸಿ ಹಿಂಸಾಚಾರದ ವೇಳೆ ಹತ್ಯೆಗೀಡಾದ ಸಂಸದ ಇಸಾನ್ ಜಫ್ರಿ ಅವರ ಪತ್ನಿ ಜಾಕಿಯಾ ಜಫ್ರಿ ತಕರಾರು ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿಗಳಾದ ಎ.ಎಂ.ಖನ್ವಿಲ್ಕರ್, ದಿನೇಶ್ ಮಹೇಶ್ವರಿ, ಸಿಟಿ ರವಿಕುಮಾರ್ ಅವರಿದ್ಧ ಪೀಠ ನಿನ್ನೆ ತೀರ್ಪು ನೀಡಿತ್ತು. ಸುಪ್ರೀಂ ಕೋರ್ಟ್ ನೇಮಕ ಮಾಡಿದ್ದ ಎಸ್‍ಐಟಿ ಕ್ಲೀನ್ ಚಿಟ್ ನೀಡಿದ್ದನ್ನು ಎತ್ತಿ ಹಿಡಿದ ಕೋರ್ಟ್ ಈ ಅರ್ಜಿಗೆ ಯಾವುದೇ ಅರ್ಹತೆಯಿಲ್ಲ ಎಂದು ಅಭಿಪ್ರಾಯಪಟ್ಟು ವಜಾಗೊಳಿಸಿತು. ಇದನ್ನೂ ಓದಿ: ಇದೇ ವರ್ಷ ಬರಲಿದೆ ಇ-ಪಾಸ್‌ಪೋರ್ಟ್ – ಹೇಗಿರಲಿದೆ? ಕೆಲಸ ಹೇಗೆ?
ಏನಿದು ಪ್ರಕರಣ?
2002ರ ಫೆಬ್ರವರಿ 22 ರಂದು ಗೋಧ್ರಾದಲ್ಲಿ ಸಬರಮತಿ ಎಕ್ಸ್ ಪ್ರೆಸ್ ರೈಲಿನ ಎಸ್6 ಬೋಗಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರು. ಪರಿಣಾಮ ಆಯೋಧ್ಯೆಯಿಂದ ಗುಜರಾತ್ ಗೆ ಮರಳುತ್ತಿದ್ದ 59 ಕರಸೇವಕರು ಸಜೀವವಾಗಿ ದಹನವಾಗಿದ್ದರು. ಈ ಘಟನೆ ಬಳಿಕ ಗುಜರಾತಿನಲ್ಲಿ ವ್ಯಾಪಕ ಹಿಂಸಾಚಾರ ಭುಗಿಲೆದ್ದಿತ್ತು. ಅನೇಕ ಕಡೆಗಳಲ್ಲಿ ಕೋಮುಗಲಭೆ ಸಂಭವಿಸಿ 1,200 ಕ್ಕೂ ಹೆಚ್ಚು ಮಂದಿಯ ಹತ್ಯೆಯಾಗಿತ್ತು. ವಿಶೇಷವಾಗಿ ಗುಲ್ಬರ್ಗಾ ಸೊಸೈಟಿಯಲ್ಲಿ ನರಮೇಧವೇ ನಡೆದು ಹೋಗಿತ್ತು. ಇದರಲ್ಲಿ ಇಸಾನ್ ಜಫ್ರಿ ಸೇರಿ 68 ಮಂದಿ ಹತರಾಗಿದ್ದರು. 2002 ಫೆಬ್ರವರಿ 27ರಿಂದ ಮೇ ತಿಂಗಳವರೆಗೆ ವ್ಯಾಪಕ ಹಿಂಸಾಚಾರ ನಡೆದಿದ್ದು, ಇದರ ಹಿಂದೆ ಬಹುದೊಡ್ಡ ಪಿತೂರಿ ಅಡಗಿದೆ. ನರೇಂದ್ರ ಮೋದಿ ಅವರ ಪಾತ್ರವಿದೆ ಎಂದು ಆರೋಪಿಸಿ ಅರ್ಜಿ ಸಲ್ಲಿಸಲಾಗಿತ್ತು.