ದಾವಣಗೆರೆ: ಕಳಸಾ ಬಂಡೂರಿ ವಿಷಯದಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರ್ನಾಟಕ ರಾಜ್ಯ ಗೊತ್ತಿಲ್ಲ. ಆದ್ರೆ ಕರ್ನಾಟಕದ ಅಕ್ಕ ಪಕ್ಕದ ರಾಜ್ಯಗಳು ಗೊತ್ತಿವೆ. ನಮ್ಮ ಸಮಸ್ಯೆಗಳನ್ನು ಸಹ ಕೇಳುತ್ತಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಅಸಮಧಾನ ಹೊರ ಹಾಕಿದ್ರು.
ಮೋದಿಯವರು ಕಳಸಾ ಬಂಡೂರಿಯ ಮಧ್ಯಸ್ಥಿಕೆ ವಹಿಸಿದ್ರೆ ಕರ್ನಾಟಕ ಬಂದ್ ಕೈ ಬಿಡಲಾಗುವುದು. ಜನವರಿ 25 ಕ್ಕೆ ಸಮಗ್ರ ಕರ್ನಾಟಕ ಬಂದ್ ಗೆ ತಯಾರಿ ನಡೆದಿದ್ದು, 2000 ಕ್ಕೂ ಹೆಚ್ಚು ಸಂಘಟನೆಗಳು ಬಂದ್ ಗೆ ಬೆಂಬಲ ನೀಡಿವೆ. ನಮ್ಮ ಸಮಸ್ಯೆಗಳನ್ನು ಸಂಸದರು ಕೇಂದ್ರ ಸರ್ಕಾರಕ್ಕೆ ತಿಳಿಸುವ ಪ್ರಯತ್ನ ಮಾಡುತ್ತಿಲ್ಲ. ಕೂಡಲೇ ಪ್ರದಾನ ನರೇಂದ್ರ ಮೋದಿ ಮಧ್ಯಸ್ಥಿಕೆ ವಹಿಸಬೇಕು, ಇಲ್ಲವಾದ್ರೆ 25ರಂದು ಕರ್ನಾಟಕ ಬಂದ್ ಹಾಗೂ ಫೆಬ್ರವರಿ 4 ರಂದು ಬೆಂಗಳೂರು ಬಂದ್ ಮಾಡಿ ಪ್ರಧಾನಿಗಳಿಗೆ ಬಿಸಿ ಮುಟ್ಟುವಂತೆ ಮಾಡುತ್ತೇವೆ ಅಂತಾ ಹೇಳಿದ್ರು.
Advertisement
ಕನ್ನಡಿಗರನ್ನು ಹರಾಮಿಗಳು ಎಂದು ಗೋವಾ ಸಚಿವ ಕರೆದಿದ್ದಾರೆ. ಅವರನ್ನು ಯಾರು ಕರ್ನಾಟಕಕ್ಕೆ ಬನ್ನಿ ಎಂದು ಕರೆದವರು ಯಾರು, ಗೋವಾ ಮುಖ್ಯಮಂತ್ರಿ ಪ್ರಾಮಾಣಿಕತೆಯ ನಂಬಿಕೆ ಕಳ್ಕೊಂಡಿದ್ದಾರೆ. ನಮ್ಮನ್ನ ಹರಾಮಿಗಳು ಎಂದು ಕರೆಯಲು ಅವರ್ಯಾರು, ಮತ್ತೊಮ್ಮೆ ಈ ರೀತಿ ಹೇಳಿದ್ರೆ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಗೋವಾ ಸಚಿವರ ವಿರುದ್ಧ ಕಿಡಿಕಾರಿದ್ರು.