LatestMain PostNational

ಟೆಲಿಪ್ರಾಂಪ್ಟರ್ ಬಳಸದೇ ಕೆಂಪುಕೋಟೆಯಲ್ಲಿ ಭಾಷಣ ಮಾಡಿದ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ 9ನೇ ಬಾರಿಗೆ ದೆಹಲಿಯ ಕೆಂಪುಕೋಟೆಯಲ್ಲಿ ನಿಂತು ದೇಶದ ಜನರನ್ನು ಉದ್ದೇಶಿಸಿ ಭಾಷಣ ಮಾಡಿದರು. ಈ ವೇಳೆ ಈ ಹಿಂದೆ ಅವರು ಭಾಷಣ ಮಾಡುತ್ತಿದ್ದಾಗ ಬಳಸುತ್ತಿದ್ದ ಟೆಲಿಪ್ರಾಂಪ್ಟರ್ ಬದಲಿಗೆ ಕಾಗದದ ಚೀಟಿಗಳನ್ನು ಬಳಕೆ ಮಾಡಿದ್ದು ಕಂಡುಬಂತು.

ಪ್ರತಿಬಾರಿ ಮೋದಿ ಭಾಷಣದ ವೇಳೆ ಟೆಲಿಪ್ರಾಂಪ್ಟರ್ ಬಳಕೆ ಮಾಡಲಾಗುತ್ತಿತ್ತು. ಆದರೆ ಇಂದು ಪ್ರಧಾನಿ ಭಾಷಣದಲ್ಲಿ ಒಂದು ವ್ಯತ್ಯಾಸ ಮುಖ್ಯವಾಗಿ ಎದ್ದು ಕಂಡಿದ್ದು, ಮೋದಿ ಟೆಲಿಪ್ರಾಂಪ್ಟರ್ ಬದಲಿಗೆ ಕಾಗದದ ಚೀಟಿಗಳಲ್ಲಿ ಬರೆದು ತಂದಿದ್ದ ಅಂಶಗಳನ್ನು ಆಧರಿಸಿ ಭಾಷಣ ಮಾಡಿದರು. ಇದನ್ನೂ ಓದಿ: ಮೊದಲ ಬಾರಿಗೆ ಮೇಡ್ ಇನ್ ಇಂಡಿಯಾ ಫಿರಂಗಿಯಿಂದ ರಾಷ್ಟ್ರಧ್ವಜಕ್ಕೆ ಸೆಲ್ಯೂಟ್ – ಹೊವಿಟ್ಜರ್ ವಿಶೇಷತೆ ಏನು?

ಸ್ವಾತಂತ್ರ್ಯದ 75 ವರ್ಷಗಳನ್ನು ಪೂರ್ಣಗೊಳಿಸಿ ಅಮೃತ ಮಹೋತ್ಸವ ಆಚರಿಸುತ್ತಿರುವ ದೇಶವಾಸಿಗಳಿಗೆ ಅಭಿನಂದನೆ ಸಲ್ಲಿಸುವ ಮೂಲಕ ಪ್ರಧಾನಿ ತಮ್ಮ ಭಾಷಣವನ್ನು ಪ್ರಾರಂಭಿಸುತ್ತಿದ್ದಂತೆ ಟೆಲಿಪ್ರಾಂಪ್ಟರ್‌ ಪಕ್ಕಕ್ಕೆ ಸರಿಸಲಾಯಿತು. ಈ ಹಿಂದೆ ಭಾಷಣ ಮಾಡುತ್ತಿದ್ದ ವೇಳೆ ಟೆಲಿಪ್ರಾಂಪ್ಟರ್ ಬಳಕೆ ಮಾಡಿ ನೋಡುವವರಿಗೆ ಅವರು ನೇರವಾಗಿ ತಮ್ಮನ್ನೇ ನೋಡುತ್ತಾ ಮಾತನಾಡುತ್ತಿದ್ದಾರೆ ಎನಿಸುವಂತೆ ಇರುತ್ತಿತ್ತು. ಇದನ್ನೂ ಓದಿ: ದೇಶದ ಅಭಿವೃದ್ಧಿಗೆ ಕುಟುಂಬ ರಾಜಕಾರಣದಿಂದ ಲಾಭ ಇಲ್ಲ: ಮೋದಿ

ಗಮನಸೆಳೆದ ಮೋದಿ ಉಡುಗೆ-ತೊಡುಗೆ:
ಸ್ವಾತಂತ್ರ್ಯ ದಿನಾಚರಣೆ ಹಾಗೂ ಭಾಷಣಗಳ ಸಂದರ್ಭದಲ್ಲಿ ನರೇಂದ್ರ ಮೋದಿ ಅವರ ವಿಶಿಷ್ಟ ಉಡುಪುಗಳು ಯಾವಾಗಲೂ ರಾಷ್ಟ್ರದ ಜನತೆಯ ಗಮನವನ್ನು ಸೆಳೆಯುತ್ತವೆ. ಅದೇ ಈ ರೀತಿ ಈ ಬಾರಿಯೂ ಪ್ರಧಾನಿ ನರೇಂದ್ರ ಮೋದಿ ಅವರು, ರಾಷ್ಟ್ರ ಧ್ವಜದ ಬಣ್ಣವಿರುವ ವಿಶೇಷ ವಿನ್ಯಾಸದ ಬಿಳಿಯ ಟರ್ಬನ್ ತೊಟ್ಟು, ಬಿಳಿ ಜುಬ್ಬಾ- ಪೈಜಾಮ ಹಾಗೂ ಅದರ ಮೇಲೆ ನೀಲಿ ಬಣ್ಣದ ಜಾಕೆಟ್ ತೊಟ್ಟು ಮೋದಿ ಸ್ವಾತಂತ್ರ್ಯೋತ್ಸವದಲ್ಲಿ ಪಾಲ್ಗೊಂಡಿದ್ದರು. ಕೆಂಪುಕೋಟೆಯ ಆವರಣದಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡುವಾಗ ಪ್ರಧಾನಿ ಮೋದಿ ಅವರು ಧರಿಸಿದ್ದ ಕೇಸರಿ, ಬಿಳಿ, ಹಸಿರು ಬಣ್ಣದ ಟರ್ಬನ್ ಎಲ್ಲರ ಗಮನವನ್ನು ಸೆಳೆಯಿತು.

ಏನಿದು ಟೆಲಿಪ್ರಾಂಪ್ಟರ್?
ಟೆಲಿಪ್ರಾಂಪ್ಟರ್ ಭಾಷಣ ಅಥವಾ ಸ್ಕ್ರಿಪ್ಟ್ ಅನ್ನು ಓದಲು ಸಹಾಯ ಮಾಡುತ್ತದೆ. ಇದನ್ನು ಸಾಮಾನ್ಯವಾಗಿ ದೂರದರ್ಶನದಲ್ಲಿ ಸುದ್ದಿ ಓದುವ ವೇಳೆ ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ. ಭಾಷಣ ಅಥವಾ ಸ್ಕ್ರಿಪ್ಟ್ ಓದುವ ವೇಳೆ ಓದುವವರಿಗೆ ಟೆಲಿಪ್ರಾಂಪ್ಟರ್‌ನಲ್ಲಿ ಸ್ಕ್ರೋಲ್ ಆಗುತ್ತಿರುತ್ತದೆ. ಟೆಲಿಪ್ರಾಂಪ್ಟರ್ ಮೂಲಕ ಭಾಷಣದ ಪಾಯಿಂಟ್‍ಗಳು ಕಾಣಸಿಗುತ್ತದೆ.

Live Tv

Leave a Reply

Your email address will not be published.

Back to top button