ನವದೆಹಲಿ: ಸಂಸತ್ತಿನ ಸದಸ್ಯರ ಅನುಭವವು ಶೈಕ್ಷಣಿಕ ಜ್ಞಾನಕ್ಕಿಂತ ಹೆಚ್ಚು ಅಮೂಲ್ಯಯುತವಾಗಿದೆ. ನಿಮ್ಮನ್ನು ಮತ್ತೆ ಸದನಕ್ಕೆ ಬನ್ನಿ ಎಂದು ಆಹ್ವಾನಿಸುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.
ರಾಜ್ಯಸಭೆಯ 72 ಸದಸ್ಯರ ಸದಸ್ಯತ್ವ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಇಂದು ರಾಜ್ಯಸಭೆಯಲ್ಲಿ ಬೀಳ್ಕೊಡುಗೆ ಮಾಡಲಾಯಿತು. ಬಳಿಕ ಮಾತನಾಡಿದ ಅವರು, ನಮ್ಮ ರಾಜ್ಯಸಭಾ ಸದಸ್ಯರಿಗೆ ಸಾಕಷ್ಟು ಅನುಭವವಿದೆ. ನಿಮ್ಮ ಅನುಭವಗಳು ರಾಷ್ಟ್ರಹಿತಕ್ಕೆ ಬಳಕೆಯಾಗಬೇಕು ಎಂದರು.
ನಾವು ಈ ಸಂಸತ್ತಿನಲ್ಲಿ ಬಹಳ ಸಮಯ ಕಳೆದಿದ್ದೇವೆ. ಈ ಸದನವು ನಮ್ಮ ಜೀವನಕ್ಕೆ ಸಾಕಷ್ಟು ಕೊಡುಗೆಯನ್ನು ನೀಡಿದೆ. ನಾವು ಸಹಿತ ಸಂಸತ್‍ಗೆ ಕೊಡುಗೆಯನ್ನು ನೀಡಿದ್ದೇವೆ. ಈ ಸದನದ ಸದಸ್ಯರಾಗಿ ಸಂಗ್ರಹಿಸಿದ ಅನುಭವವನ್ನು ದೇಶದ ನಾಲ್ಕೂ ದಿಕ್ಕುಗಳಿಗೆ ಕೊಂಡೊಯ್ಯಬೇಕು. ದೇಶವನ್ನು ಮತ್ತಷ್ಟು ಸಬಲಗೊಳಿಸಲು ನಿಮ್ಮ ಅನುಭವಗಳನ್ನು ಧಾರೆ ಎರೆಯಿರಿ ಎಂದು ಮನವಿ ಮಾಡಿದರು.
PM @narendramodi is addressing the Rajya Sabha. https://t.co/ZXLLB2A5Vx
— PMO India (@PMOIndia) March 31, 2022
ಲೋಕಸಭೆಗಿಂತ ರಾಜ್ಯಸಭೆ ಭಿನ್ನವಾಗಿದ್ದು, ಇದು ಶಾಶ್ವತ ಸಂಸ್ಥೆಯಾಗಿದ್ದು, ಇದನ್ನು ವಿಸರ್ಜಿಸಲಾಗುವುದಿಲ್ಲ. ಆದರೂ ಎರಡು ವರ್ಷಕ್ಕೊಮ್ಮೆ ರಾಜ್ಯಸಭೆಯಲ್ಲಿ ಮೂರನೇ ಒಂದು ಭಾಗದಷ್ಟು ಸದಸ್ಯರು ನಿವೃತ್ತಿಯನ್ನು ಹೊಂದುತ್ತಾರೆ. ಖಾಲಿಯಾದ ಸ್ಥಾನಗಳನ್ನು ಚುನಾವಣೆ ಮತ್ತು ಅಧ್ಯಕ್ಷೀಯ ನಾಮನಿರ್ದೇಶನಗಳ ಮೂಲಕ ಭರ್ತಿ ಮಾಡಲಾಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: ನಿಮಗೆ ಗಂಡಸ್ತನ ಇದ್ದರೆ, ಏನು ಗೊತ್ತಿಲ್ಲದಂತೆ ಮೌನವಾಗಿರಬೇಡಿ: ಸಿಎಂಗೆ ಹೆಚ್‍ಡಿಕೆ ಸವಾಲ್
ಏಪ್ರಿಲ್‍ನಲ್ಲಿ ಕಾಂಗ್ರೆಸ್‍ನ ಉಪ ನಾಯಕ ಆನಂದ್ ಶರ್ಮಾ, ಎ.ಕೆ. ಆಂಟನಿ, ಸುಬ್ರಮಣಿಯನ್ ಸ್ವಾಮಿ, ಎಂ.ಸಿ. ಮೇರಿ ಕೋಮ್ ಮತ್ತು ಸ್ವಪನ್ ದಾಸ್‍ಗುಪ್ತಾ ಅವರು ನಿವೃತ್ತರಾಗಲಿದ್ದಾರೆ. ನಿರ್ಮಲಾ ಸೀತಾರಾಮನ್, ಸುರೇಶ್ ಪ್ರಭು, ಎಂಜೆ ಅಕ್ಬರ್, ಜೈರಾಮ್ ರಮೇಶ್, ವಿವೇಕ್ ತಂಖಾ, ವಿ. ವಿಜಯಸಾಯಿ ರೆಡ್ಡಿ ಅವರ ಅವಧಿ ಜೂನ್‍ನಲ್ಲಿ ಕೊನೆಗೊಳ್ಳಲಿದೆ. ಜುಲೈನಲ್ಲಿ ಪಿಯೂಷ್ ಗೋಯಲ್, ಮುಕ್ತಾರ್ ಅಬ್ಬಾಸ್ ನಖ್ವಿ, ಪಿ ಚಿದಂಬರಂ, ಅಂಬಿಕಾ ಸೋನಿ, ಕಪಿಲ್ ಸಿಬಲ್, ಸತೀಶ್ ಚಂದ್ರ ಮಿಶ್ರಾ, ಸಂಜಯ್ ರಾವುತ್, ಪ್ರಫುಲ್ ಪಟೇಲ್ ಮತ್ತು ಕೆ.ಜೆ. ಅಲ್ಫೋನ್ಸ್ ನಿವೃತ್ತಿ ಹೊಂದಲಿದ್ದಾರೆ. ಇದನ್ನೂ ಓದಿ: ಪಾಕ್ ಪರ ಘೋಷಣೆ ಕೂಗಿದ್ದ ಕಾಶ್ಮೀರ ವಿದ್ಯಾರ್ಥಿಗಳಿಗೆ ಅಲಹಾಬಾದ್ ಹೈಕೋರ್ಟ್ ಜಾಮೀನು