ನವದೆಹಲಿ: ಕೇಂದ್ರ ಸಚಿವ ಸರ್ಬಾನಂದ ಸೋನೊವಾಲ್ ಅವರು ಆಯೋಜಿಸಿದ್ದ ರೊಂಗಾಲಿ ಬಿಹು ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿ ವಿಶೇಷ ವಾದ್ಯಗಳನ್ನು ನುಡಿಸಿದರು. ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಕೇಂದ್ರ ಸಚಿವ ಸರ್ಬಾನಂದ ಸೋನೊವಾಲ್ ನಿವಾಸದಲ್ಲಿ ಪಾಲ್ಗೊಂಡ ಪ್ರಧಾನಿ ಮೊದಲಿಗೆ ಅಸ್ಸಾಂನ ತಬಲ ಬಾರಿಸಿ, ಬಳಿಕ ವಿಶೇಷ ವಾದ್ಯವನ್ನು ನುಡಿಸಿದರು. ಈ ಮೂಲಕ ಅಸ್ಸಾಂ ಜನತೆಗೆ ಹೊಸ ವರ್ಷದ ಶುಭಾಶಯ ಕೋರಿದರು. ನಂತರ ಮನೋರಂಜನಾ ಕಾರ್ಯಕ್ರಮವನ್ನು ವೀಕ್ಷಿಸಿದರು. ಇದಾದ ಬಳಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕಲಾವಿದರು ಹಾಗೂ ಅತಿಥಿಗಳೊಂದಿಗೆ ಸಂವಾದ ನಡೆಸಿದರು.
Advertisement
A great honour Modi ji. Your embracement of Assamese culture is another example of your deep love and affection for Assam and its people.
Heartfelt thanks. https://t.co/F8OVEDHm5d
— Sarbananda Sonowal (@sarbanandsonwal) April 23, 2022
ಸೋನೊವಾಲ್ ಅವರು ಈ ಬಗ್ಗೆ ಮಾತನಾಡಿ, ಬಿಹು ಕಾರ್ಯಕ್ರಮದಲ್ಲಿ ಮೋದಿ ಅವರು ಭಾಗವಹಿಸಿದ್ದು ಮಹತ್ವ ಪಡೆದುಕೊಂಡಿದೆ ಎಂದ ಅವರು ಸಮಾರಂಭದಲ್ಲಿ ಪ್ರಧಾನಿ ಅವರು ಭಾಗವಹಿಸಿದ್ದಕ್ಕಾಗಿ ಶ್ಲಾಘಿಸಿದರು. ಇದರಿಂದಾಗಿ ಅಸ್ಸಾಮಿ ಜನರ ಮತ್ತು ಸಂಸ್ಕೃತಿಯ ಮೇಲಿನ ಅವರ ಪ್ರೀತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.
Advertisement
Advertisement
ಅಸ್ಸಾಂನಲ್ಲಿ ಅದ್ದೂರಿಯಾಗಿ ಆಚರಿಸುವ ಹಬ್ಬಗಳಲ್ಲಿ ಒಂದಾದ ಬೊಹಾಂಗ್ ಬಿಹು ಅಥವಾ ರೊಂಗಾಲಿ ಬಿಹು ಪ್ರತಿವರ್ಷ ಏಪ್ರಿಲ್ ತಿಂಗಳಲ್ಲಿ ಆಚರಿಸಲಾಗುತ್ತದೆ. ಇದು ಸುಗ್ಗಿಯ ಆರಂಭವನ್ನು ಸೂಚಿಸುತ್ತದೆ. ಜೊತೆಗೆ ಅಸ್ಸಾಂ ಜನತೆಗೆ ಹೊಸವರ್ಷದ ಆಚರಣೆಯಾಗಿದೆ. ಇದನ್ನೂ ಓದಿ: ಗಲಭೆಯನ್ನು ನಿಯಂತ್ರಿಸುವಲ್ಲಿ ಅಮಿತ್ ಶಾ ಸಂಪೂರ್ಣ ವಿಫಲ: ಶರದ್ ಪವಾರ್
Advertisement
ಕರ್ನಾಟಕದಲ್ಲಿ ಯುಗಾದಿ ಆಚರಿಸಿದಂತೆ ಅಸ್ಸಾಂ ಜನತೆ ಹೊಸ ವರ್ಷವನ್ನು ರೊಂಗಾಲಿ ಬಿಹುವಾಗಿ ಆಚರಿಸುತ್ತಾರೆ. ನವ ದೆಹಲಿಯಲ್ಲಿ ಪ್ರಧಾನಿ ಮೋದಿ ರೊಂಗಾಲಿ ಬಿಹು ಆಚರಿಸುವ ಮೂಲಕ ಅಸ್ಸಾಂ ಜನತೆಗೆ ವಿಶೇಷ ಸಂದೇಶ ಸಾರಿದ್ದಾರೆ. ಇದನ್ನೂ ಓದಿ: ರಾಜೀನಾಮೆ ಪತ್ರವನ್ನು ಸೋನಿಯಾ ಗಾಂಧಿ ಬಳಿ ಶಾಶ್ವತವಾಗಿ ಇರಿಸಲಾಗಿದೆ: ರಾಜಸ್ಥಾನ ಸಿಎಂ