ಗುಲಾಮಿ ಮನಸ್ಥಿತಿಯಿಂದ ಆಚೆ ಬರಲು ರಾಮನ ಪ್ರೇರಣೆ ಪಡೆಯಬೇಕು: ಮೋದಿ

Public TV
2 Min Read
narendra modi 5

ಲಕ್ನೋ: ಗುಲಾಮಿ ಮನಸ್ಥಿತಿಯಿಂದ ಆಚೆ ಬರಲು ನಾವು ಶ್ರೀರಾಮನ (Lord Ram) ಪ್ರೇರಣೆ ಪಡೆಯಬೇಕು ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ತಿಳಿಸಿದರು.

ದೀಪಾವಳಿ ಹಿನ್ನೆಲೆಯಲ್ಲಿ ಅಯೋಧ್ಯೆಯ (Ayodhya) ದೀಪೋತ್ಸವ (Deepotsav) ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು, ಸ್ವಾತಂತ್ರ್ಯ ದಿನಾಚರಣೆಯಲ್ಲಿ ಐದು ಕರ್ತವ್ಯಗಳನ್ನು ಹೇಳಿದ್ದೆ. ಆ ಎಲ್ಲ ಪ್ರೇರಣೆಗಳು ಶ್ರೀರಾಮನಿಂದ ಬಂದಿದೆ. ಜನನಿ ಜನ್ಮ ಭೂಮಿ ಎಂದು ಹೇಳಿದ್ದಾರೆ. ಗುಲಾಮಿ ಮಾನಸಿಕತೆಯಿಂದ ಆಚೆ ಬರಲು ನಾವು ಶ್ರೀರಾಮನ ಪ್ರೇರಣೆ ಪಡೆಯಬೇಕು. ಶ್ರೀರಾಮನ ಅಸ್ತಿತ್ವವನ್ನು ಪ್ರಶ್ನೆ ಮಾಡಲಾಗುತ್ತಿತ್ತು. ಅದರ ಪರಿಣಾಮ ಏನಾಯಿತು? ನಮ್ಮ ಸಂಸ್ಕೃತಿ ಹಿಂದೆ ಉಳಿಯಿತು ಎಂದು ಬೇಸರ ವ್ಯಕ್ತಪಡಿಸಿದರು.

ಅಯೋಧ್ಯೆ, ಕಾಶಿ ನೋಡುವಾಗ ನೋವಾಗುತ್ತಿತ್ತು. ಕಳೆದ 8 ವರ್ಷಗಳಲ್ಲಿ ತೀರ್ಥ ಕ್ಷೇತ್ರಗಳ ಅಭಿವೃದ್ಧಿ ಮಾಡಿದೆ. ವಾರಣಾಸಿ, ಅಯೋಧ್ಯೆ, ಕೇದಾರನಾಥ, ಬದರಿನಾಥ ಸೇರಿ ಹಲವು ಕ್ಷೇತ್ರಗಳನ್ನು ಅಭಿವೃದ್ಧಿ ಮಾಡಿದೆ. ಅಯೋಧ್ಯೆಯೂ ಹೊಸ ಆಯಾಮದ ಅಭಿವೃದ್ಧಿ ಹೊಂದುತ್ತಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾರಂಭ ಮಾಡಲಾಗುತ್ತಿದೆ. ಅಯೋಧ್ಯೆ ಅಭಿವೃದ್ಧಿ ಸುತ್ತಲಿನ ಪ್ರದೇಶಗಳಿಗೆ ಆಗಲಿದೆ. ಇವುಗಳಿಂದ ಯುವಕರಿಗೆ ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿದೆ ಎಂದು ಭರವಸೆ ನೀಡಿದರು.

narendra modi 1 2

ರಾಮ ಅಯೋಧ್ಯೆ ರಾಜನಾಗಿದ್ದ. ಆದರೆ ಅವರನ್ನು ಇಡೀ ದೇಶ ಪೂಜಿಸುತ್ತದೆ. ನಾವು ಅವರ ಆದರ್ಶಗಳಲ್ಲಿ ನಡೆಯಬೇಕು. ಅಯೋಧ್ಯೆ ಕರ್ತವ್ಯ ನಗರಿಯಾಗಬೇಕು. ಅಯೋಧ್ಯೆಗೆ ಅಂತಾರಾಷ್ಟ್ರೀಯ ಮಾನ್ಯತೆ ಸಿಗಲಿದೆ. ವಿದೇಶದಿಂದ ಶ್ರೀರಾಮನ ದರ್ಶನ ಪಡೆಯಲು ಬರಲಿದ್ದಾರೆ. ದೇಶಾದ್ಯಂತ ಭಕ್ತರು ಬರಲಿದ್ದಾರೆ. ಅವರನ್ನು ಗೌರವಯುತವಾಗಿ ಕಾಣಬೇಕು. ಅಯೋಧ್ಯೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಆ ಕರ್ತವ್ಯವನ್ನು ಅಯೋಧ್ಯೆ ಜನರು ನಿಷ್ಠೆಯಿಂದ ನಿಭಾಯಿಸಬೇಕು ಎಂದು ಅಯೋಧ್ಯೆಯಿಂದ ದೇಶದ ಜನರಿಗೆ ಮನವಿ ಮಾಡಿದರು.

ayodhya

75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದ್ದೇವೆ. ನಾವು ಮತ್ತಷ್ಟು ಎತ್ತರಕ್ಕೆ ಹೋಗಲು ಶ್ರೀರಾಮ ಶಕ್ತಿ ನೀಡಲಿದ್ದಾರೆ. ಶ್ರೀರಾಮನ ಆಡಳಿತದಲ್ಲಿ ಸಬ್ ಕಾ ವಿಕಾಸ್ ಇತ್ತು. ಕಠಿಣ ಗುರಿಗಳನ್ನು ಮುಟ್ಟಲು ರಾಮನ ಆದರ್ಶ ಪ್ರೇರಣೆಯಾಗಲಿದೆ. ಅಯೋಧ್ಯೆಯಲ್ಲಿ ದೀಪೋತ್ಸವ ನಾವು ಸಂಕಲ್ಪ ಮಾಡಬೇಕು. ಶ್ರೀರಾಮನಿಂದ ಎಷ್ಟು ಕಲಿಯಬಹುದು, ಅದನ್ನೆಲ್ಲ ಕಲಿಯಬೇಕು. ಶ್ರೀರಾಮನನ್ನು ಮರ್ಯಾದ ಪುರುಷ ಎಂದು ಕರೆಯುತ್ತಾರೆ. ರಾಮನು ಧರ್ಮ ಮತ್ತು ಕರ್ತವ್ಯದ ಜೀವಂತ ಉದಾಹರಣೆಯಾಗಿದ್ದರು. ತಮ್ಮ ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸಿದ್ದರು ಎಂದು ಹೇಳಿದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *