Connect with us

Latest

ಪಾಕಿಸ್ತಾನಿಗಳಿಗೂ ಭಾರತೀಯ ಪೌರತ್ವ ನೀಡುತ್ತೇವೆಂದು ಘೋಷಿಸಿ – ಕಾಂಗ್ರೆಸ್ಸಿಗೆ ಮೋದಿ ಸವಾಲು

Published

on

ರಾಂಚಿ: ‘ಎಲ್ಲ ಪಾಕಿಸ್ತಾನಿಗಳಿಗೆ ಭಾರತೀಯ ಪೌರತ್ವ ನೀಡುತ್ತೇವೆ ಎಂಬುದಾಗಿ ಘೋಷಿಸಿ’ ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ಸಿಗೆ ಸವಾಲು ಹಾಕಿದ್ದಾರೆ.

ಜಾರ್ಖಂಡ್‍ನ ಬರ್ಹೈಟ್ ನಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು, ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಕುರಿತು ಕಾಂಗ್ರೆಸ್ ಸಾರ್ವಜನಿಕರಲ್ಲಿ ಭಯ ಹುಟ್ಟಿಸುತ್ತಿದೆ. ಹೊಸ ಕಾನೂನಿನಿಂದಾಗಿ ದೇಶದ ಯಾವ ನಾಗರಿಕನಿಗೂ ತೊಂದರೆಯಾಗುವುದಿಲ್ಲ. ಈ ಕುರಿತು ನಾನು ಕಾಂಗ್ರೆಸ್ ಹಾಗೂ ಅದರ ಮಿತ್ರ ಪಕ್ಷಗಳಿಗೆ ಬಹಿರಂಗ ಸವಾಲು ಹಾಕುತ್ತೇನೆ. ಎಲ್ಲ ಪಾಕಿಸ್ತಾನದವರಿಗೆ ಭಾರತದ ಪೌರತ್ವ ನೀಡುತ್ತೇವೆ ಎಂದು ಘೋಷಿಸಿ ಎಂದು ಗುಡುಗಿದ್ದಾರೆ.

ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳಿಗೆ ಧಮ್ ಇದ್ದರೆ ಎಲ್ಲ ಪಾಕಿಸ್ತಾನಿಗಳಿಗಳಿಗೆ ಭಾರತದ ಪೌರತ್ವ ನೀಡುತ್ತೇವೆ ಎಂದು ಘೋಷಿಸಲಿ. ಆ ದೇಶ ಇವರಿಗೆ ಏನಾದರೂ ನೀಡಿದಂತೆ ಕಾಣುತ್ತದೆ ಅದಕ್ಕೆ ಹೀಗೆ ಮಾಡುತ್ತಿದ್ದಾರೆ. ಇಷ್ಟು ಮಾತ್ರವಲ್ಲದೆ ಮೋದಿ ಸರ್ಕಾರವನ್ನು ತೆಗೆದನಂತರ ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿಯನ್ನು ಮತ್ತೆ ಜಾರಿಗೆ ತರುತ್ತೇವೆ ಎಂದು ಹೇಳುವಂತೆ ಸವಾಲು ಹಾಕಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಸುಳ್ಳು ಮಾಹಿತಿ ಹಾಗೂ ಹೆದರಿಕೆಯನ್ನು ಸೃಷ್ಟಿಸಲು ಕಾಂಗ್ರೆಸ್ ರಾಜಕೀಯವನ್ನು ಬಳಸುತ್ತಿದೆ. ನಾವು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ತಂದಿದ್ದೇವೆ. ಆದರೆ ಕಾಂಗ್ರೆಸ್ ಬಿಳಿ ಸುಳ್ಳುಗಳನ್ನು ಹೇಳುತ್ತಿದೆ. ನಾನು ಹಲವು ಬಾರಿ ಹೇಳುತ್ತಿದ್ದೇನೆ, ಸಿಎಎ ಭಾರತದ ಯಾವುದೇ ಪ್ರಜೆ ಮೇಲೆ ಪರಿಣಾಮ ಬೀರುವುದಿಲ್ಲ. ಪಕ್ಕದ ದೇಶಗಳ ಅಲ್ಪಸಂಖ್ಯಾತರಿಗೆ ಈ ಕಾನೂನು ರೂಪಿಸಲಾಗಿದೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.

ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ವಿರೋಧ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದ್ದು, ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಟೀಕಾಪ್ರಹಾರ ನಡೆಸುತ್ತಿವೆ. ಈ ಮಧ್ಯೆಯೇ ಈಶಾನ್ಯ ರಾಜ್ಯಗಳು ಹಾಗೂ ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ಹೆಚ್ಚಾಗಿದೆ. ಪೌರತ್ವ ತಿದ್ದಪಡಿ ಮಸೂದೆಯು ಮೇಲ್ಮನೆ ಹಾಗೂ ಕೆಳಮನೆ ಎರಡರಲ್ಲೂ ಪಾಸ್ ಆಗಿ ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್ ಸಹ ಅಂಕಿತ ಹಾಕಿದ್ದು, ಕಾಯ್ದೆಯಾಗಿದೆ.

Click to comment

Leave a Reply

Your email address will not be published. Required fields are marked *