ತುಮಕೂರಿನಲ್ಲಿ ಸಂತರ ಮುಂದೆ ಮೂರು ಸಂಕಲ್ಪವಿಟ್ಟ ಮೋದಿ

Public TV
2 Min Read
Modi Tumkuru Siddaganga Mutt TMK

– ಸಿಎಎ ಪರ ಮೋದಿ ಮಾತು
– ಪಾಕಿಸ್ತಾನದ ವಿರುದ್ಧ ಮಾತನಾಡಲ್ಲ ಯಾಕೆ?

ತುಮಕೂರು: ಪ್ರಧಾನಿ ನರೇಂದ್ರ ಮೋದಿ ಸಿದ್ದಗಂಗಾ ಮಠದಲ್ಲಿ ಮಾತನಾಡುತ್ತಾ ಸಂತರ ಮುಂದೆ ಮೂರು ಸಂಕಲ್ಪಗಳನ್ನು ಹೇಳಿ ಜಾಗೃತಿ ಮೂಡಿಸಬೇಕೆಂದು ಕೇಳಿಕೊಂಡಿದ್ದಾರೆ.

ಜವಾಬ್ದಾರಿ ಸಹಿತವಾಗಿ ಕರ್ತವ್ಯಕ್ಕೆ ಗೌರವ ನೀಡುವ ಸಂಸ್ಕøತಿ ಬಗ್ಗೆ ಜಾಗೃತಿ ಮೂಡಿಸುತ್ತಿರಬೇಕು. ಪ್ರಕೃತಿಯ ರಕ್ಷಣೆ (ಏಕಬಳಕೆ ಪ್ಲಾಸ್ಟಿಕ್ ಬಳಸಬಾರದು) ಮತ್ತು ಜಲ ಸಂರಕ್ಷಣೆ ಮಾಡಲು ಜಾಗೃತಿ ಮೂಡಿಸಬೇಕೆಂದು ಮನವಿ ಮಾಡಿದರು.

ಸಿದ್ದಗಂಗಾ ಶ್ರೀಗಳ ಗದ್ದುಗೆಗೆ ತೆರಳಿ ನಮನ ಸಲ್ಲಿಸಿದ ಮೋದಿಗೆ ಹಣೆಗೆ ವಿಭೂತಿ ಹಚ್ಚಿ, ಕೊರಳಿಗೆ ರುದ್ರಾಕ್ಷಿ ಮಾಲೆ ಹಾಕಿ ಸಿದ್ದಲಿಂಗ ಶ್ರೀಗಳು ಬರಮಾಡಿಕೊಂಡರು. ಸಿದ್ದಗಂಗಾ ಮಠದ ವತಿಯಿಂದ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ಬೆಳ್ಳಿಯ ಪುತ್ಥಳಿ ನೀಡಿ ಗೌರವಿಸಲಾಯಿತು. ನಂತರ ಮಠದ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿಗಳು, ಕನ್ನಡದಲ್ಲಿಯೇ ಮಾತು ಆರಂಭಿಸಿದರು.

ವರ್ಷದ ಆರಂಭದಲ್ಲಿ ಸಿದ್ದಗಂಗಾ ಮಠಕ್ಕೆ ಆಗಮಿಸಿದ್ದು ಖುಷಿ ತಂದಿದೆ. ಆದರೆ ಶಿವಕುಮಾರ ಸ್ವಾಮೀಜಿಗಳು ಭೌತಿಕವಾಗಿ ಇಲ್ಲದಿರೋದು ನನ್ನನ್ನು ಕಾಡುತ್ತಿದೆ. ಇಂದು ಪ್ರೇರಣಾ ಶಕ್ತಿ ಆಗಿರುವ ಸಿದ್ದಗಂಗಾ ಶ್ರೀಗಳ ವಸ್ತು ಸಂಗ್ರಹಾಲಯದ ಶಿಲಾನ್ಯಾಸ ಉದ್ಘಾಟನೆಗೆ ಆಗಮಿಸಿದ್ದು ನನ್ನ ಪುಣ್ಯ. ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ಚರಣ ಕಮಲಗಳಿಗೆ ನಾನು ನಮಿಸುತ್ತೇನೆ. ಕೆಲವು ದಿನಗಳ ಹಿಂದೆಯಷ್ಟೇ ಉಡುಪಿಯ ಪೇಜಾವರ ಶ್ರೀಗಳು ನಮ್ಮಿಂದ ಭೌತಿಕವಾಗಿ ದೂರವಾಗಿದ್ದಾರೆ. ಇಂತಹ ಮಹಾನ್ ಸಂತರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ಚಲಿಸಬೇಕು. ದೇಶವನ್ನು ಸಮೃದ್ಧ, ಸಕ್ಷಮ, ಸಶಕ್ತವನ್ನಾಗಿ ಮಾಡುವ ಆಕಾಂಕ್ಷೆ ಎಲ್ಲ ಜನರದ್ದಾಗಿದೆ. ಹಾಗಾಗಿ ದೇಶವನ್ನು ಸದೃಢವಾಗಿ ಮಾಡಲು ಎಲ್ಲರೂ ಒಂದಾಗಬೇಕಿದೆ. 2014ರ ಬಳಿಕ ಸಾಮಾನ್ಯ ಜನರ ಬದಲಾವಣೆ ತರಲು ಸರ್ಕಾರ ಸನ್ನದ್ಧವಾಗಿದೆ ಎಂದು ತಿಳಿಸಿದರು.

ಆರ್ಟಿಕಲ್ 371 ರದ್ದುಗೊಳಿಸಿ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಕ್ ಜನರಿಗೆ ಅವರ ಹಕ್ಕನ್ನು ನೀಡಿದ್ದೇನೆ. ಅಲ್ಲಿಯ ಜನರ ಅನಿಶ್ಚಿತತೆ ಮತ್ತು ಭಯೋತ್ಪಾದನೆಯ ಭಯವನ್ನು ದೂರ ಮಾಡಿದ್ದೇವೆ. ದೇಶದಲ್ಲಿ ರಾಮ ಮಂದಿರ ನಿರ್ಮಾಣದ ವಾತಾವರಣ ನಿರ್ಮಿಸಲಾಗಿದೆ. ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿಪಕ್ಷಗಳು ವಿರೋಧಿಸುತ್ತಿವೆ. ಪಾಕಿಸ್ತಾನದಲ್ಲಿ ಧರ್ಮದ ಆಧಾರದ ಮೇಲೆ ಹಿಂಸಿಸಲಾಗುತ್ತಿದೆ. ಅಲ್ಲಿಯ ಹಿಂದೂ, ಸಿಖ್, ಜೈನ್ ಭಾರತಕ್ಕೆ ಬರುತ್ತಿದ್ದಾರೆ. ಇಂದು ಜನರು ತಮ್ಮ ಧರ್ಮ, ಪ್ರಾಣ, ಹೆಣ್ಣು ಮಕ್ಕಳನ್ನು ರಕ್ಷಿಸಲು ಭಾರತಕ್ಕೆ ಆಗಮಿಸುತ್ತಿರುವ ಶರಣಾರ್ಥಿಗಳಿಗೆ ಸಹಾಯ ಮಾಡೋದು ನಮ್ಮ ಕರ್ತವ್ಯ. ಶರಣು ಎಂದು ದೇಶಕ್ಕೆ ಬಂದವರನ್ನು ರಕ್ಷಿಸೋದು ನಮ್ಮ ಸಂಸ್ಕøತಿ. ಆದರೆ ವಿಪಕ್ಷಗಳು ಜನರನ್ನು ದಾರಿ ತಪ್ಪಿಸುವ ಸಲುವಾಗಿ ರಸ್ತೆಗಳಿದು ಪ್ರತಿಭಟನೆ ನಡೆಸುತ್ತಿವೆ. ಆದ್ರೆ ಇವರು ಯಾಕೆ ಪಾಕಿಸ್ತಾನದ ವಿರುದ್ಧ ಮಾತನಾಡಲ್ಲ ಎಂದು ವಿಪಕ್ಷಗಳನ್ನು ಪ್ರಶ್ನಿಸಿದರು.

ನಮ್ಮ ಸರ್ಕಾರ ಪಾರದರ್ಶಕವಾಗಿ ಹಗಲು-ರಾತ್ರಿ ಎನ್ನದೇ ಕೆಲಸ ಮಾಡಿಕೊಂಡು ಬಂದಿದೆ. ಪ್ರತಿ ವ್ಯಕ್ತಿಯ ಜೀವನಮಟ್ಟವನ್ನು ಸುಧಾರಿಸುವತ್ತ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ. ಆರೋಗ್ಯ ವಿಮೆ, ಗ್ಯಾಸ್ ಸಂಪರ್ಕ, ಮನೆ, ವಿದ್ಯುತ್ ಸಂಪರ್ಕ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸೋದು ನಮ್ಮ ಸರ್ಕಾರದ ಕೆಲಸವಾಗಿದೆ. ಮಹಾತ್ಮ ಗಾಂಧೀಜೀಯವರ 150ನೇ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಬಯಲು ಮುಕ್ತ ಶೌಚಾಲಯದತ್ತ ದಿಟ್ಟ ಹೆಜ್ಜೆ ಇಡಬೇಕಿದೆ ಎಂದು ಕರೆ ಕೊಟ್ಟರು.

Share This Article
Leave a Comment

Leave a Reply

Your email address will not be published. Required fields are marked *