ನವದೆಹಲಿ: ಬಿಜೆಪಿ ರೈತರ ಪರವಾದ ಪಕ್ಷವಾಗಿದ್ದು, ಆತ್ಮನಿರ್ಭರ ಭಾರತ ಹಾಗೂ ಬಜೆಟ್‍ನಿಂದಾಗಿ ದೇಶದ ಅಭಿವೃದ್ಧಿ ಇನ್ನಷ್ಟು ವೇಗ ಸಿಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ದೇಶಾದ್ಯಂತ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಇಂದು ಪ್ರಪಂಚ ಭಾರತವನ್ನು ನೋಡುವ ದೃಷ್ಟಿಕೋನವು ಬಹಳಷ್ಟು ಬದಲಾಗಿದೆ. ಈಗ ಜಗತ್ತು ಬಲಿಷ್ಠ ಭಾರತವನ್ನು ನೋಡಲು ಬಯಸುತ್ತದೆ ಎಂದು ಹೇಳಿದರು.
Advertisement
Advertisement
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಅನ್ನು ಅದರ ವಿಶಾಲತೆಯನ್ನು ಗಮನದಲ್ಲಿಟ್ಟುಕೊಂಡು ಸಮಯೋಚಿತವಾಗಿ ವಿವರಿಸಿದ್ದರು. ನಾನು ಇಂದು ಬಜೆಟ್‍ನ ಪ್ರಮುಖ ಅಂಶಗಳತ್ತ ಗಮನ ಹರಿಸಲು ಪ್ರಯತ್ನಿಸುತ್ತೇನೆ ಎಂದ ಅವರು, ನಮ್ಮ ಆರ್ಥಿಕತೆಯನ್ನು ಬಲಪಡಿಸುವ ಮೂಲಕ ದೇಶವನ್ನು ತ್ವರಿತಗತಿಯಲ್ಲಿ ಮುನ್ನಡೆಸುವುದು ನಮಗೆ ಅನಿವಾರ್ಯವಾಗಿದೆ. ಇದು ಹೊಸ ಅವಕಾಶಗಳನ್ನು ಹಾಗೂ ಹೊಸ ಸಂಕಲ್ಪಗಳ ನೆರವೇರಿಸುವ ಸಮಯವಾಗಿದೆ. ಸ್ವಾವಲಂಬಿ ಭಾರತದ ಅಡಿಪಾಯದ ಮೇಲೆ ಆಧುನಿಕ ಭಾರತವನ್ನು ನಿರ್ಮಿಸುವುದು ಬಹಳ ಮುಖ್ಯ ಎಂದರು.
Advertisement
ಈ ಕಾರ್ಯಕ್ರಮವನ್ನು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @BSBommai, ನಿಕಟಪೂರ್ವ ಮುಖ್ಯಮಂತ್ರಿಗಳಾದ ಶ್ರೀ @BSYBJP, ಸಚಿವರು, ಸಂಸದರು, ಶಾಸಕರು, ಪಕ್ಷದ ರಾಜ್ಯ ಪದಾಧಿಕಾರಿಗಳು, ಕಾರ್ಯಕರ್ತರು ವೀಕ್ಷಿಸಿದರು. (2/2)#AatmanirbharArthavyavastha pic.twitter.com/uqxhLsfCKn
— BJP Karnataka (@BJP4Karnataka) February 2, 2022
Advertisement
ಗಡಿಗಳಲ್ಲಿರುವ ಗ್ರಾಮಗಳಿಗೆ ವಿಶೇಷ ಅನುದಾನ ನೀಡಲಾಗಿದೆ. ಬಡವರಿಗಾಗಿ ಮನೆಯನ್ನು ನಿರ್ಮಿಸಲಾಗಿದೆ. ಜೊತೆಗೆ 48 ಸಾವಿರ ಕೋಟಿ ರೂ. ಮೀಸಲಿಡಲಾಗಿದೆ. ಭಾರತದಲ್ಲಿ ಯಾವುದೇ ಹಿಂದುಳಿದ ವರ್ಗಗಳು ಇರಬಾರದು ಎನ್ನುವುದು ನಮ್ಮ ಮುಂದಿನ ಗುರಿಯಾಗಿದೆ. ಆದರೆ ಪ್ರತಿಪಕ್ಷಗಳು ಬಡತನದ ವಿಷಯಗಳನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಪೊಲೀಸ್ ಠಾಣೆಯಿಂದಲೇ ಜೀಪ್ ಕದ್ದ ಕಳ್ಳ
ಪ್ರಧಾನಿ ಶ್ರೀ @narendramodi ಅವರು ಕೇಂದ್ರ ಬಜೆಟ್ 2022-23 ರ ಕುರಿತು ‘ಆತ್ಮನಿರ್ಭರ ಅರ್ಥವ್ಯವಸ್ಥೆʼ ಬಗ್ಗೆ ಇಂದು ದೇಶದಾದ್ಯಂತದ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ವರ್ಚುವಲ್ ವೇದಿಕೆ ಮೂಲಕ ಮಾತನಾಡಿದರು. (1/2)#AatmanirbharArthavyavastha pic.twitter.com/iYImmAkpYM
— BJP Karnataka (@BJP4Karnataka) February 2, 2022
ಹಳ್ಳಿಗಳ ಸ್ವರೂಪವೇ ಇಂದು ಬದಲಾಗಿದೆ. ಬಡವರಿಗೆ ಮನೆ ಸಿಕ್ಕರೆ ಬದುಕೆ ಬದಲಾಗುತ್ತದೆ. ಹಿಂದಿನ ಸರ್ಕಾರ ಮಾಡಿದ ತಪ್ಪುಗಳನ್ನು ಸರಿಪಡಿಸಲಾಗಿದೆ. ಬಡವರ ಶಿಕ್ಷಣ, ಆರೋಗ್ಯಕ್ಕೆ ಹೆಚ್ಚು ಒತ್ತನ್ನು ನೀಡಿದೆ ಎಂದ ಅವರು, ಕಳೆದ ವರ್ಷ ಭಾರತದಲ್ಲಿ 80 ಬಿಲಿಯನ್ ಡಾಲರ್ ವಿದೇಶಿ ನೇರ ಬಂಡವಾಳ(ಎಫ್‍ಡಿಐ) ಹೂಡಿಕೆಯಾಗಿದೆ. ಕಳೆದ 7 ವರ್ಷಗಳಲ್ಲಿ ಕೈಗೊಂಡ ನಿರ್ಧಾರಗಳಿಂದ ಭಾರತದ ಆರ್ಥಿಕತೆ ನಿರಂತರವಾಗಿ ವಿಸ್ತರಿಸುತ್ತಿದೆ ಎಂದು ಮಾಹಿತಿ ನೀಡಿದರು.
ಬಜೆಟ್‍ಗೆ ಹೆಚ್ಚು ಮೆಚ್ಚುಗೆ ವ್ಯಕ್ತವಾಗಿದೆ. 7 ವರ್ಷಗಳ ಹಿಂದೆ, ಭಾರತದ ಜಿಡಿಪಿ 1 ಲಕ್ಷ 10,000 ಕೋಟಿ ರೂ.ಗಳಷ್ಟಿತ್ತು. ಆದರೆ ಇಂದು ಅದು ಸುಮಾರು 2 ಲಕ್ಷದ 30,000 ಕೋಟಿ ರೂ.ಗೆ ಏರಿಕೆಯಾಗಿದೆ. ದೇಶದ ವಿದೇಶಿ ವಿನಿಮಯ ಮೀಸಲು ಕೂಡ 200 ಶತಕೋಟಿಯಿಂದ ಡಾಲರ್ ನಿಂದ 630 ಶತಕೋಟಿ ಡಾಲರ್ ಗೆ ಏರಿದೆ. ಇದಕ್ಕೆಲ್ಲಾ ನಮ್ಮ ಸರ್ಕಾರದ ಪರಿಣಾಮಕಾರಿ ನೀತಿಗಳೇ ಕಾರಣ ಎಂದು ತಿಳಿಸಿದರು. ಇದನ್ನೂ ಓದಿ: ಡಿಕೆಶಿ Vs ಸಿದ್ದು ಬಣಗಳ ಕಿತ್ತಾಟ: ಲಾಭ ಪಡೆಯಲು ಮುಂದಾದ ಹಿರಿಯ ನಾಯಕರು
ಕೆನ್-ಬೆಟ್ವಾ ನದಿ ಜೋಡಣೆ ಯೋಜನೆಯು ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶವನ್ನು ವ್ಯಾಪಿಸಿರುವ ಬುಂದೇಲ್‍ಖಂಡದ ಮುಖವನ್ನು ಬದಲಾಯಿಸಲಿದೆ. ಬಜೆಟ್‍ನಲ್ಲಿ ನದಿಗಳ ಜೋಡಣೆಗೆ ಸಾವಿರಾರು ಕೋಟಿ ಮೀಸಲಿಡಲಾಗಿದೆ ಎಂದು ಹೇಳಿದರು.