– ಬಾಂಗ್ಲಾ ಮುಖ್ಯ ಸಲಹೆಗಾರ ಯೂನುಸ್ ಜೊತೆ ದ್ವಿಪಕ್ಷೀಯ ಮಾತುಕತೆ
ಬ್ಯಾಂಕಾಕ್: ಬಿಮ್‌ಸ್ಟೆಕ್ (BIMSTEC) ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಬ್ಯಾಂಕಾಕ್‌ಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು, ಅಲ್ಲಿರುವ ವಾಟ್ ಫ್ರಾ (Wat Phra) ಬೌದ್ಧ ದೇವಾಲಯಕ್ಕೆ ಭೇಟಿ ನೀಡಿದರು. ಭೇಟಿ ವೇಳೆ ಪ್ರಧಾನಿಯವರು ಅಲ್ಲಿ ಬೌದ್ಧ ಸನ್ಯಾಸಿಗಳೊಂದಿಗೆ ಸಂವಾದ ನಡೆಸಿದರು.
ಶೃಂಗಸಭೆಯ ಹೊರತಾಗಿ, ಪ್ರಧಾನಿ ಮೋದಿ ಬಾಂಗ್ಲಾದೇಶದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನುಸ್ (Muhammad Yunus) ಅವರೊಂದಿಗೆ ಪ್ರಾದೇಶಿಕ ಸಹಕಾರ ಮತ್ತು ದ್ವಿಪಕ್ಷೀಯ ಸಂಬಂಧಗಳ ಕುರಿತು ಚರ್ಚಿಸಿದರು. ಇದನ್ನೂ ಓದಿ: ಥೈಲ್ಯಾಂಡ್‌ನಲ್ಲಿ ಮೋದಿಗೆ ಭವ್ಯ ಸ್ವಾಗತ – ಉನ್ನತ ಮಟ್ಟದ ಸಭೆಯಲ್ಲಿ ಪ್ರಧಾನಿ ಭಾಗಿ
A memorable visit to Wat Phra Chetuphon Wimonmangkalaram Ratchaworamahawihan Or Wat Pho!@ingshin pic.twitter.com/Yx0RoQX9A1
— Narendra Modi (@narendramodi) April 4, 2025
ಇದಕ್ಕೂ ಮುನ್ನ ಮೋದಿ ಅವರು ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಥಾಯ್ಲೆಂಡ್ ಉಪ ಪ್ರಧಾನಿ ಪ್ರಸೆರ್ಟ್ ಜಂತರರು ವಾಂಗ್ಟಾಂಗ್ ಮತ್ತು ಇತರ ಹಲವು ಉನ್ನತಾಧಿಕಾರಿಗಳು ಸ್ವಾಗತ ಕೋರಿದರು. ಇದನ್ನೂ ಓದಿ: ಭಾರತಕ್ಕೆ ಅಮೆರಿಕ ಶಾಕ್ – ಔಷಧ, ತಾಮ್ರ, ಸೆಮಿಕಂಡಕ್ಟರ್‌ಗಳಿಗೆ ವಿನಾಯ್ತಿ, ಆಟೋಮೊಬೈಲ್, ಸ್ಟೀಲ್, ಚಿನ್ನಾಭರಣಗಳಿಗೆ ಬರೆ
ಬ್ಯಾಂಕಾಕ್‌ಗೆ ಭೇಟಿ ನೀಡಿದ ಮೋದಿ, ಥಾಯ್ ರಾಮಾಯಣ ಹಾಗೂ ಗರ್ಭಾ ನೃತ್ಯವನ್ನು ವೀಕ್ಷಿಸಿದರು. ಭಾರತ ಮತ್ತು ಥೈಲ್ಯಾಂಡ್ ನಡುವಿನ ಆಳವಾದ ಸಾಂಸ್ಕೃತಿಕ ಸಂಬಂಧಗಳನ್ನು ಸಂಕೇತಿಸುವ ರಾಮಾಯಣದ ಥಾಯ್ ಆವೃತ್ತಿ `ರಾಮಕಿಯೆನ್’ ಅನ್ನು ವೀಕ್ಷಿಸಿದರು.