– ಕನಕನ ಕಿಂಡಿಯಲ್ಲಿ ಶ್ರೀಕೃಷ್ಣನ ದರ್ಶನ ಪಡೆದು ಪುನೀತರಾದ ಮೋದಿ
17 ವರ್ಷಗಳ ಬಳಿಕ ಕೃಷ್ಣನಗರಿಗೆ ಉಡುಪಿಗೆ ಪ್ರಧಾನಿ ಮೋದಿ (Narendra Modi) ಅವರ ಆಗಮನವಾಗಿದೆ. 2008ರ ಮೇ 8ರಂದು ಪ್ರಧಾನಿ ಆಗುವುದಕ್ಕೂ ಮುನ್ನ ಮೊದಲ ಬಾರಿಗೆ ಆಗಮಿಸಿದ್ದರು. ಇಂದು ಬೆಳಗ್ಗೆ ಮಂಗಳೂರು ವಿಮಾನ ನಿಲ್ದಾಣದಿಂದ ಸೇನಾ ಹೇಲಿಕಾಪ್ಟರ್‌ನಲ್ಲಿ ಉಡುಪಿಗೆ ಬಂದಿಳಿದ ಮೋದಿ ಸುಮಾರು 2 ಕಿಮೀ ವರೆಗೆ ಅದ್ಧೂರಿ ರೋಡ್ ಶೋ ನಡೆಸಿದ್ದಾರೆ. ಪ್ರಧಾನಿಗಳ ಆಗಮನಕ್ಕಾಗಿ ಬೆಳಗ್ಗಿನಿಂದಲೂ ಕಾದು ಕುಳಿತಿದ್ದ ಜನ ಪುಷ್ಪಮಳೆ ಸುರಿಸಿ ಸಂತಸ ಪಟ್ಟಿದ್ದಾರೆ. ಇತ್ತ ಪ್ರಧಾನಿಗಳೂ ಜನರತ್ತ ಹೂ ಎಸೆದು ಹೃದಯ ಶ್ರೀಮಂತಿಕೆ ಮೆರೆದಿದ್ದಾರೆ. ರೋಡ್ ಶೋ ಮುಗಿಯುತ್ತಿದ್ದಂತೆ ಉಡುಪಿ ಶ್ರೀ ಕೃಷ್ಣ ಮಠಕ್ಕೆ ರಥಬೀದಿ ಮೂಲಕ ಆಗಮಿಸಿದ ಮೋದಿ ಕನಕನ ಕಿಂಡಿಯ ಮೂಲಕ ಶ್ರೀ ಕೃಷ್ಣನ ದರ್ಶನ ಪಡೆದು ಪುನೀತರಾಗಿದ್ದಾರೆ. ಬಳಿಕ ಮಧ್ವ ಸರೋವರಕ್ಕೆ ತೆರಳಿ ತೀರ್ಥ ಪ್ರೋಕ್ಷಣೆ ಮಾಡಿ, ನಂತರ ಮಠದೊಳಕ್ಕೆ ತೆರಳಿದ್ದಾರೆ. ಇನ್ನೂ ಪ್ರಧಾನಿ ಅವರು ರೋಡ್ ಶೋ ವೇಳೆ ಕಂಡ ಒಂದಿಷ್ಟು ಝಲಕ್‌ಗಳು ಫೋಟೋಗಳಲ್ಲಿ ಸೆರೆಯಾಗಿದ್ದು, ಕಣ್ತುಂಬಿಕೊಳ್ಳಬಹುದಾಗಿದೆ.












