– ನಮಾಮಿ ಗಂಗೆ ಅಭಿಯಾನಕ್ಕೆ ಹರಾಜು ಹಣ
ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಸ್ವೀಕರಿಸಿರುವ ಉಡುಗೊರೆಗಳು ಮತ್ತು ಸ್ಮರಣಿಕೆಗಳನ್ನು ಸೆಪ್ಟೆಂಬರ್ 17 ರಿಂದ ಸಂಸ್ಕøತಿ ಸಚಿವಾಲಯ ಇ-ಹರಾಜು ಮಾಡಲಿದೆ.
Advertisement
ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯವು, ನರೇಂದ್ರ ಮೋದಿ ಅವರು ಸ್ವೀಕರಿಸಿರುವ ಉಡುಗೊರೆಗಳು ಮತ್ತು ಸ್ಮರಣಿಕೆಗಳ ಇ-ಹರಾಜು ಆಯೋಜಿಸಿದೆ. ಈ ಸ್ಮರಣಿಕೆಗಳಲ್ಲಿ ಪದಕ ವಿಜೇತ ಒಲಿಂಪಿಕ್ ಕ್ರೀಡಾಪಟುಗಳು ಮತ್ತು ಪ್ಯಾರಾಲಿಂಪಿಕ್ ಕ್ರೀಡಾಪಟುಗಳ ಕ್ರೀಡಾ ಸಾಧನಗಳು ಮತ್ತು ಉಪಕರಣಗಳು, ಅಯೋಧ್ಯೆ ರಾಮ ಮಂದಿರ, ಚಾರ್ ಧಾಮ್, ರುದ್ರಾಕ್ಷ್ ಸಮಾವೇಶ ಕೇಂದ್ರದ ಪ್ರತಿರೂಪಗಳು, ಮಾದರಿಗಳು, ಶಿಲ್ಪಗಳು, ವರ್ಣಚಿತ್ರಗಳು, ಅಂಗವಸ್ತ್ರ ಮೊದಲಾದವುಗಳು ಸೇರಿವೆ. ಇದನ್ನೂ ಓದಿ: ಮೋದಿ ಹುಟ್ಟುಹಬ್ಬ – 71 ನದಿಗಳಲ್ಲಿ ಸ್ವಚ್ಛತಾ ಕಾರ್ಯ
Advertisement
ವ್ಯಕ್ತಿ ಅಥವಾ ಸಂಸ್ಥೆಗಳು 17ನೇ ಸೆಪ್ಟೆಂಬರ್ ಮತ್ತು 7ನೇ ಅಕ್ಟೋಬರ್.2021ರ ನಡುವೆ https://pmmementos.gov.in> ವೆಬ್ ಸೈಟ್ ಮೂಲಕ ಇ -ಹರಾಜಿನಲ್ಲಿ ಭಾಗವಹಿಸಬಹುದು. ಇ-ಹರಾಜಿನಿಂದ ಬರುವ ಹಣವನ್ನು ಗಂಗಾ ನಂದಿಯ ಪುನಶ್ಚೇತನ ಮತ್ತು ಸಂರಕ್ಷಣೆಯ ಉದ್ದೇಶ ಹೊಂದಿರುವ ನಮಾಮಿ ಗಂಗೆ ಅಭಿಯಾನಕ್ಕೆ ಹೋಗಲಿದೆ. ಇದನ್ನೂ ಓದಿ: ಮತ್ತೆ ರದ್ದಾಯಿತು ಕತ್ತರಿಘಟ್ಟ ಜಾತ್ರಾಮಹೋತ್ಸವ
Advertisement
Advertisement