ಬೆಂಗಳೂರು: ಏರೋ ಇಂಡಿಯಾ ಶೋ (Aero India Show) ಉದ್ಘಾಟಿಸಲು ಸಿಲಿಕಾನ್ ಸಿಟಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ (Narendra Modi) ಯವರು ರಾಜಭವನದಲ್ಲಿ ಮಹತ್ವದ ಕಾರ್ಯವೊಂದನ್ನು ನೆರವೇರಿಸಿದ್ದಾರೆ.
ಹೌದು. ಭಾನುವಾರ ಬೆಂಗಳೂರಿಗೆ ಬಂದಿರುವ ಪ್ರಧಾನಿ ರಾತ್ರಿ ರಾಜಭವನದಲ್ಲಿ ವಾಸ್ತವ್ಯ ಹೂಡಿದ್ದರು. ಸೋಮವಾರ ಬೆಳಗ್ಗೆ ರಾಜಭವನದ ಮುಂಭಾಗದ ಹುಲ್ಲುಹಾಸಿನಲ್ಲಿ ಶ್ರೀಗಂಧದ ಸಸಿಯನ್ನು ನೆಟ್ಟರು. ಇದನ್ನೂ ಓದಿ: ಬೆಂಗಳೂರಿನ ಬಾನಂಗಳ ಶಕ್ತಿ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ: ಮೋದಿ
ಈ ಸಂದರ್ಭಧಲ್ಲಿ ರಾಜಭವನದಲ್ಲಿನ ಸಸ್ಯಗಳು, ಜಾತಿಗಳು, ಗುಣಲಕ್ಷಣಗಳು ಮತ್ತು ಬಳಕೆಯ ಕುರಿತು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ಅವರು ಪ್ರಧಾನ ಮಂತ್ರಿಯವರಿಗೆ ವಿವರಿಸಿದರು.
ಭಾನುವಾರ ರಾತ್ರಿ ಪ್ರಧಾನಿಯವರು ಸಿನಿಮಾ ರಂಗದವರು, ಕ್ರಿಕೆಟ್ ದಿಗ್ಗಜರು ಹಾಗೂ ಇತರ ಗಣ್ಯ ವ್ಯಕ್ತಿಗಳನ್ನು ಭೇಟಿಯಾಗಿದ್ದರು. ಅಲ್ಲದೆ ಜೊತೆಗೆ ಔತಣಕೂಟವನ್ನು ಹಮ್ಮಿಕೊಂಡಿದ್ದರು. ಇಂದು ಏರ್ ಇಂಡಿಯಾ ಉದ್ಘಾಟಿಸಿ ಬಳಿಕ ಯಲಹಂಕ ವಾಯುನೆಲೆಯಿಂದಲೇ ತ್ರಿಪುರಾ ಚುನಾವಣಾ ಪ್ರಚಾರಕ್ಕಾಗಿ ಅಗರ್ತಲಾಗೆ ಪ್ರಧಾನಿ ಮೋದಿ ಪಯಣ ಬೆಳೆಸಿದರು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k