ಬಾಲಿವುಡ್ ನಲ್ಲಿ ಮತ್ತೊಂದು ಭರವಸೆಯ ಸಿನಿಮಾ ಮೂಡಿ ಬಂದಿದೆ. ಕನ್ನಡತಿ ಪ್ರಿಯಾ ಮಣಿ ಹಾಗೂ ಬಾಲಿವುಡ್ ಹೆಸರಾಂತ ನಟಿ ಯಾಮಿನಿ ಗೌತಮ್ ಕಾಂಬಿನೇಷನ್ ನ ‘ಆರ್ಟಿಕಲ್ 370’ (Article 370)ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ನೋಡುಗರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಟ್ರೈಲರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಪಾತ್ರಗಳು ಇವೆ.
ರಿಲೀಸ್ ಆದ ಟ್ರೈಲರ್ (Trailer)ನಲ್ಲಿ ‘ಪೂರಾ ಕಾ ಪೂರಾ ಕಾಶ್ಮೀರ್ (Kashmir), ಭಾರತ್ ದೇಶ್ ಕಾ ಹಿಸ್ಸಾ ಥಾ. ಹೇ ಔರ್ ರೆಹೇಗಾ’ ಎನ್ನುವ ಮಾತು ಮತ್ತೆ ಮತ್ತೆ ಪ್ರೇರೇಪಿಸುತ್ತಿದೆ. ಅಂದಹಾಗೆ ಜಮ್ಮು ಕಾಶ್ಮೀರದ ವಿಶೇಷಾಧಿಕಾರವಾದ ಆರ್ಟಿಕಲ್ 370 ಅನ್ನು ತೆಗೆದು ಹಾಕಲಾದ ಕಥಾಹಂದರವನ್ನು ಈ ಸಿನಿಮಾ ಹೊಂದಿದೆ. ಫೆಬ್ರವರಿ 23 ರಂದು ಈ ಸಿನಿಮಾ ತೆರೆಗೆ ಬರಲಿದ್ದು, ಯಾಮಿ ಗೌತಮ್ ಖಡಕ್ ಎನ್.ಐ.ಎ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.
ಟ್ರೈಲರ್ ನಲ್ಲಿ ಕಾಶ್ಮೀರ ಭಯೋತ್ಪಾದನೆ, ಸೇನಾಧಿಕಾರಿಗಳ ಹೋರಾಟ, ಆರ್ಟಿಕಲ್ 370 ತೆಗೆದರೆ ಏನೆಲ್ಲ ಆಗಲಿದೆ ಎನ್ನುವ ಚರ್ಚೆ. ಭಯೋತ್ಪಾದಕರ ಕುತಂತ್ರ ಹೀಗೆ ಸಾಕಷ್ಟು ವಿಷಯಗಳನ್ನು 2 ನಿಮಿಷ 40 ಸೆಕೆಂಡ್ ನ ಟ್ರೈಲರ್ ನಲ್ಲಿ ತೋರಿಸಲಾಗಿದೆ. ಶಾಶ್ವತ್ ಸಚ್ ದೇವ್ ಅವರ ಹಿನ್ನೆಲೆ ಸಂಗೀತ ಸೂಪರ್.
ಕಾಶ್ಮೀರ ಕುರಿತಂತೆ ಈವರೆಗೂ ಬಂದಿರುವ ಯಾವುದೇ ಸಿನಿಮಾ ಸೋತಿಲ್ಲ. ಬಾಕ್ಸ್ ಆಫೀಸಿನಲ್ಲಿ ಕೋಟಿ ಕೋಟಿ ಹಣ ಬಾಚಿವೆ. ಜೊತೆಗೆ ಅತ್ಯುತ್ತಮ ಪ್ರತಿಕ್ರಿಯೆಯನ್ನೂ ನೋಡುಗರು ಕೊಟ್ಟಿದ್ದಾರೆ. ಆರ್ಟಿಕಲ್ 370 ಚಿತ್ರದ ಕುರಿತು ಈಗಾಗಲೇ ನಿರೀಕ್ಷೆ ಹೆಚ್ಚಿವೆ. ಅದರಲ್ಲೂ ಟ್ರೈಲರ್ ರಿಲೀಸ್ ನಂತರ ಈ ಕಾಯುವಿಕೆ ಇಮ್ಮಡಿಯಾಗಿದೆ.