ಬೆಂಗಳೂರು: ರಾಜ್ಯ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನಲ್ಲಿ ಸಚಿವ ಎಂಟಿಬಿ ನಾಗರಾಜ್ ಜೊತೆ ಇಷ್ಟು ಸಣ್ಣ ಇದ್ದೀರಿ ಯಾಕೆ? ನಿಮ್ಮ ಆರೋಗ್ಯದ ಗುಟ್ಟೇನು ಎಂದು ಪ್ರಶ್ನಿಸಿದ್ದಾರೆ.
Advertisement
2 ದಿನಗಳ ರಾಜ್ಯಪ್ರವಾಸದಲ್ಲಿರುವ ಮೋದಿ, ಬೆಂಗಳೂರಿಗೆ ಬಂದ ಬಳಿಕ ಕೊಮ್ಮಘಟ್ಟದಲ್ಲಿ ವಿವಿಧ ಯೋಜನೆಗಳ ಲೋಕಾರ್ಪಣೆ ಮತ್ತು ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಬಿಜೆಪಿ ಸಚಿವರೆಲ್ಲರು ಭಾಗವಹಿಸಿದ್ದರು. ಈ ಮೊದಲು ಯಲಹಂಕ ಏರ್ಬೇಸ್ನಲ್ಲಿ ಮೋದಿಯನ್ನು ಸ್ವಾಗತಿಸಲು ತೆರಳಿದ್ದ ವೇಳೆ ಮೋದಿ-ಎಂಟಿಬಿ ಮಧ್ಯೆ ಆರೋಗ್ಯದ ಗುಟ್ಟಿನ ಚರ್ಚೆ ನಡೆದಿದೆ. ಇದನ್ನೂ ಓದಿ: ರಾಮ್ದಾಸ್ ಹತ್ತಿರ ಕರೆದು ಬಾಗಿಸಿ ಬೆನ್ನಿಗೆ ಗುದ್ದಿದ ಮೋದಿ- ಪ್ರಧಾನಿಯಿಂದ ಶಾಸಕರಿಗೆ ಆಪ್ತ ಹಾರೈಕೆ
Advertisement
Advertisement
ಎಂಟಿಬಿ ನಾಗರಾಜ್ ಭುಜದ ಮೇಲೆ ಕೈಯಿಟ್ಟ ಮೋದಿ, ಇಷ್ಟು ಸಣ್ಣ ಇದ್ದೀರಿ ಯಾಕೆ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಎಂಟಿಬಿ ಯೋಗ ಮತ್ತು ಸ್ವಿಮ್ಮಿಂಗ್ ಮಾಡ್ತಿನಿ ಎಂದು ಹಿಂದಿಯಲ್ಲಿ ಉತ್ತರಿಸಿದರು. ಇದನ್ನು ಕೇಳಿದ ಮೋದಿ ಅಚ್ಚಾ ಹೈ ಎಂದು ನಕ್ಕು ತೆರಳಿದರು.