ಬೆಂಗಳೂರು: ನಗರದ ಹಲಸೂರು ದೇಗುಲದಲ್ಲಿ ಮದುವೆಗೆ ಅನುಮತಿ ನೀಡುತ್ತಿಲ್ಲ ಎಂದು ವರನೋರ್ವ ಸಿಎಂ ಕಚೇರಿಗೆ ಪತ್ರ ಬರೆದಿದ್ದಾರೆ.
ಸಿಎಂಗೆ ಬರೆದ ಪತ್ರದಲ್ಲಿ, ವರನೋರ್ವ ಹಲಸೂರು ದೇವಸ್ಥಾನದಲ್ಲಿ ಮದುವೆಯಾಗಲು ಅನುಮತಿ ನೀಡುತ್ತಿಲ್ಲ ಎಂದಿದ್ದಾರೆ. ಈ ಸಂಬಂಧ ಸಿಎಂ ವಿಶೇಷ ಕರ್ತವ್ಯಾಧಿಕಾರಿಗಳು ದೇವಸ್ಥಾನಕ್ಕೆ ಕಾರಣ ಕೇಳಿ ನೋಟಿಸ್ ನೀಡಿದ್ದಾರೆ.ಇದನ್ನೂ ಓದಿ: ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಪಂಚಭೂತಗಳಲ್ಲಿ ಲೀನ
ಇದಕ್ಕೆ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಉತ್ತರ ನೀಡಿದ್ದು, ಐದಾರು ವರ್ಷದಿಂದ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಮದುವೆ ನಿಲ್ಲಿಸಲಾಗಿದೆ. ಇಲ್ಲಿ ಮದುವೆಯಾದ ಜೋಡಿಗಳು ಡಿವೋರ್ಸ್ ತಗೊಂಡ್ರೇ ಅರ್ಚರು ಕೋರ್ಟ್‌ಗೆ ಅಲೆದಾಡುವ ಪರಿಸ್ಥಿತಿ ಇತ್ತು. ಹೀಗಾಗಿ ಅರ್ಚಕರು ಹಿಂದೇಟು ಹಾಕುತ್ತಿದ್ರು ಅಂದಿದ್ದಾರೆ.
ದೇವಸ್ಥಾನದ ಟ್ರಸ್ಟಿಗಳು, ಅರ್ಚಕರು ಮಾತಾಡಿ, ವ್ಯಕ್ತಿಯೋರ್ವ ತನ್ನ ಸ್ನೇಹಿತನ ಪತ್ನಿಯನ್ನೇ ಪಟಾಯಿಸಿ ಇಲ್ಲಿ ಮದುವೆಯಾಗಿ ಆ ಸ್ನೇಹಿತನಿಂದಲೇ ಕೊಲೆಗೀಡಾಗಿದ್ದ. ಅಲ್ಲದೇ ಅಪ್ಪ-ಅಮ್ಮ ಅಂತ ಸುಳ್ಳು ಹೇಳಿ ಮದುವೆಯಾಗಿರೋ ಕೇಸಲ್ಲಿ ಒರಿಜಿನಲ್ ಅಪ್ಪ-ಅಮ್ಮನೇ ಬಂದು ಕೇಸ್ ಹಾಕಿದ್ದಾರೆ. ಹೀಗಾಗಿ, ಸೋಮೇಶ್ವರ ದೇಗುಲದಲ್ಲಿ ಮದುವೆ ಸಹವಾಸವೇ ಬೇಡ ಅಂದಿದ್ದಾರೆ.
ಮದುವೆಯಾದ ಜೋಡಿಗಳ ಡಿವೋರ್ಸ್, ಅಕ್ರಮ ಸಂಬಂಧ ಕರಾಳತೆ, ಸುಳ್ಳು ದಾಖಲೆ ಕೊಟ್ಟು ಮದುವೆಯಾಗಿದ್ದಕ್ಕೆ ಸಮಸ್ಯೆ ಸೃಷ್ಟಿಯಾಗಿ ಈಗ ಅರ್ಚಕರೇ ನ್ಯಾಯಲಯದ ಕಟಕಟೆಯಲ್ಲಿ ನಿಲ್ಲಬೇಕಾಗಿದೆ. ಇದರಿಂದಾಗಿ ದೇವಸ್ಥಾನದಲ್ಲಿ ಮದುವೆಯನ್ನೇ ನಿಷೇಧ ಮಾಡಲಾಗಿದೆ.ಇದನ್ನೂ ಓದಿ:9 ಭಾಷೆಗಳಲ್ಲಿ ಭಾರತ ಸಂವಿಧಾನದ ಡಿಜಿಟಲ್ ಆವೃತ್ತಿ ಬಿಡುಗಡೆಗೊಳಿಸಿದ ರಾಷ್ಟ್ರಪತಿ ಮುರ್ಮು

