ಮೈಸೂರು: ಚಂದ್ರಗ್ರಹಣದ ನಂತರ ಅರ್ಚಕರು ಮತ್ತು ಜ್ಯೋತಿಷಿಗಳು ರಿಲ್ಯಾಕ್ಸ್ ಮೂಡ್‍ನಲ್ಲಿದ್ದಾರೆ. ಪಂಚಾಂಗ ಹಾಗೂ ಕವಡೆ ಬಿಟ್ಟು ಕ್ರಿಕೆಟ್ ಆಟದಲ್ಲಿ ತೊಡಗಿ ರಿಲ್ಯಾಕ್ಸ್ ಮಾಡುತ್ತಿದ್ದಾರೆ.
ಮೈಸೂರಿನಲ್ಲಿ ಜ್ಯೋತಿಷಿಗಳು ಅರ್ಚಕರಿಗಾಗಿ ಮಾಯಕಾರ ಗುರುಕುಲವು ರಾಜ್ಯಮಟ್ಟದ ಕ್ರಿಕೆಟ್ ಟೂರ್ನಮೆಂಟ್ ಅನ್ನು ಮೈಸೂರಿನ ರೈಲ್ವೇ ಮೈದಾನದಲ್ಲಿ ಆಯೋಜಿಸಿದೆ. ಎರಡು ದಿನ ನಡೆಯಲಿರುವ ಈ ಟೂರ್ನಮೆಂಟ್ ನಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಒಟ್ಟು 16 ತಂಡ ಭಾಗಿಯಾಗಿವೆ.
Advertisement
ಮೈಸೂರು, ಬೆಂಗಳೂರು, ಹಾವೇರಿ, ಶಿವಮೊಗ್ಗ, ತುಮಕೂರು ಸೇರಿ ವಿವಿಧ ಜಿಲ್ಲೆಯ ಅರ್ಚಕರು ಹಾಗೂ ಜ್ಯೋತಿಷಿಗಳು ಭಾಗಿಯಾಗಿದ್ದಾರೆ. ಮೊದಲ ಬಹುಮಾನ 10 ಸಾವಿರ ನಗದು ಆಕರ್ಷಕ ಟ್ರೋಫಿ ದೊರಯಲಿದ್ದು, ಎರಡನೇ ಬಹುಮಾನ 5 ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಗುತ್ತದೆ.