ಅರ್ಚಕನ ಬರ್ಬರ ಹತ್ಯೆ- ದೇವಸ್ಥಾನದಲ್ಲಿ ಅರೆ ಸುಟ್ಟ ಶವ

Public TV
1 Min Read
priest 2

ಚಂಡೀಗಢ: ದೇವಸ್ಥಾನದ ಅರ್ಚಕರೊಬ್ಬರನ್ನು ತ್ರಿಶೂಲದಿಂದ ಇರಿದು, ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಹರಿಯಾಣ ರಾಜ್ಯದ ಪಲ್ವಾಲ್ ಜಿಲ್ಲೆಯಲ್ಲಿ ನಡೆದಿದೆ.

ಮೃತಪಟ್ಟ ಅರ್ಚಕರನ್ನು ಚರಣಗಿರಿ ಮಹಾರಾಜ್ ಎಂದು ಗುರುತಿಸಲಾಗಿದೆ. ಅರ್ಚಕರನ್ನು ಕೊಲೆ ಮಾಡಿ, ಮೃತದೇಹಕ್ಕೆ ಬೆಂಕಿ ಹಚ್ಚಲಾಗಿದ್ದು, ದೇಗುಲದ ಆವರಣದಲ್ಲಿ ಅರೆ ಸುಟ್ಟ ಶವ ಪತ್ತೆಯಾಗಿದೆ. ಈ ಭಯಾನಕ ಘಟನೆಗೆ ಇಡೀ ಹರಿಯಾಣವೇ ಬೆಚ್ಚಿ ಬಿದ್ದಿದೆ.

ಪಲ್ವಾಲ್ ಜಿಲ್ಲೆಯ ಬಂಚಾರಿ ಗ್ರಾಮದಲ್ಲಿ ಗುರುವಾರ ಮುಂಜಾನೆ 7 ಗಂಟೆಗೆ ಈ ದುರ್ಘಟನೆ ನಡೆದಿದೆ. ಅರ್ಚಕನನ್ನು ಕೊಲೆ ಮಾಡಿ, ಮೃತದೇಹವನ್ನು ಸುಟ್ಟುಹಾಕಲು ಪ್ರಯತ್ನಿಸಿದ ಹಂತಕರು ಶವಕ್ಕೆ ದೇವಾಲಯದ ಆವರಣದಲ್ಲಿ ಬೆಂಕಿ ಹಚ್ಚಿದ್ದಾರೆ. ದೇಹ ಅರೆಬರೆ ಸುಟ್ಟು ಹೋಗಿದ್ದು, ಬೆಳಗ್ಗೆ ಗ್ರಾಮಸ್ಥರು ಪೊಲೀಸರಿಗೆ ಈ ವಿಷಯ ತಿಳಿಸಿದ್ದಾರೆ. ಇದನ್ನೂ ಓದಿ: ಡಬಲ್ ಮರ್ಡರ್‌ಗೆ ಬೆಚ್ಚಿಬಿತ್ತು ಮೆಟ್ರೋ ಸಿಟಿ – ಲಕ್ಷ್ಮಿ ಹಬ್ಬದ ದಿನವೇ ಹೆಣವಾದ್ರು ವೃದ್ಧ ದಂಪತಿ

Police Jeep 1 2 medium

20 ವರ್ಷಗಳಿಂದ ಆ ಗ್ರಾಮದಲ್ಲಿ ವಾಸವಾಗಿದ್ದ ಚರಣಗಿರಿ ಮಹಾರಾಜ್ ಅವರನ್ನು ಭೇಟಿಯಾಗಲು ಬುಧವಾರ ಸಂಜೆ ಅವರ ಸ್ನೇಹಿತ ಮೋನಿ ಮಹಾರಾಜ್ ಬಂದಿದ್ದರು. ಗೆಳೆಯ ಬಂದು ಮಾತನಾಡಿ ಹೋದ ಮರುದಿನವೇ ಚರಣಗಿರಿ ಮಹಾರಾಜ್ ಕೊಲೆಯಾಗಿದೆ. ಈ ಕೊಲೆ ನಡೆದ ಬಳಿಕ ಮೋನಿ ಮಹಾರಾಜ್ ನಾಪತ್ತೆಯಾಗಿದ್ದಾನೆ. ಆತನೇ ಈ ಕೊಲೆ ಮಾಡಿಸಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಇದನ್ನೂ ಓದಿ: 8 ಸಾವಿರ ಕೋಟಿಯಲ್ಲಿ ಪ್ರಾರಂಭವಾದ ಎತ್ತಿನಹೊಳೆ ಯೋಜನೆ ಈಗ 23 ಸಾವಿರ ಕೋಟಿ ತಲುಪಿದೆ: ಹೆಚ್.ಡಿ.ಕೆ

police web

ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶಿಲನೆ ನಡೆಸಿದ್ದಾರೆ. ಬೆಡ್‍ಶೀಟ್‍ನಲ್ಲಿ ಸುತ್ತಿ ಶವಕ್ಕೆ ಬೆಂಕಿ ಹಚ್ಚಲಾಗಿದೆ. ಅರ್ಚಕನ ಎದೆ ಭಾಗಕ್ಕೆ ತ್ರಿಶೂಲದಿಂದ ಇರಿದಿರುವ ಗುರುತುಗಳು ಪತ್ತೆಯಾಗಿವೆ. ಆ ಮೃತದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *