ಬ್ರೆಸಿಲಿಯಾ: ಕಾರ್ಯಕ್ರಮವೊಂದರ ನೇರಪ್ರಸಾರದ ವೇಳೆ ದಪ್ಪಗಿರುವ ಮಹಿಳೆಯರು ಸ್ವರ್ಗಕ್ಕೆ ಹೋಗಲ್ಲ ಎಂದ ಫಾದರ್ ನನ್ನು ಮಹಿಳೆಯೊಬ್ಬಳು ವೇದಿಕೆಯಿಂದ ಕೆಳಗೆ ತಳ್ಳಿದ ಘಟನೆಯೊಂದು ಬ್ರೆಜಿಲ್ನಲ್ಲಿ ನಡೆದಿದ್ದು, ವಿಡಿಯೋ ಈಗ ವೈರಲ್ ಆಗುತ್ತಿದೆ.
ಧಾರ್ಮಿಕ ವಸ್ತುಗಳನ್ನು ಆನ್ಲೈನ್ನಲ್ಲಿ ಪ್ರಸಾರ ಮಾಡಲು ಹೆಸರುವಾಸಿಯಾದ ಬ್ರೆಜಿಲ್ ಕ್ಯಾಥೋಲಿಕ್ ಸಮುದಾಯದ ಕ್ಯಾನೋ ನೋವಾ ಕಚೇರಿಯಲ್ಲಿ ಪಾದ್ರಿ ಮಾರ್ಸೆಲೊ ರೊಸ್ಸಿ ಭಾಷಣ ಮಾಡುತ್ತಿದ್ದರು. ಈ ವೇಳೆ ಅವರು ದಪ್ಪಗಿರುವ ಮಹಿಳೆಯರು ಸ್ವರ್ಗಕ್ಕೆ ಹೋಗುವುದಿಲ್ಲ ಎಂದು ಹೇಳಿದ್ದಾರೆ. ಇದನ್ನು ಕೇಳಿ ಮಹಿಳೆ ಪಾದ್ರಿಯನ್ನು ವೇದಿಕೆಯಿಂದ ಕೆಳಗೆ ತಳ್ಳಿದ್ದಾರೆ.
Advertisement
Advertisement
ವೈರಲ್ ಆಗಿರುವ 7 ಸೆಕೆಂಡ್ ವಿಡಿಯೋದಲ್ಲಿ ಮಹಿಳೆ ಪಾದ್ರಿಯ ಬಲಗಡೆಯಿಂದ ಓಡಿ ಬಂದು ಅವರನ್ನು ವೇದಿಕೆಯಿಂದ ಕೆಳಗೆ ತಳ್ಳಿದ್ದಾರೆ. ಮಹಿಳೆಯ ವರ್ತನೆ ನೋಡಿ ಅಲ್ಲಿದ್ದ ಪ್ರೇಕ್ಷಕರು ಶಾಕ್ ಆಗಿದ್ದರು. ಪಾದ್ರಿ ಕೆಳಗೆ ಬೀಳುವ ಸದ್ದು ಮೈಕ್ನಲ್ಲಿ ಜೋರಾಗಿ ಕೇಳಿಸುತ್ತಿದ್ದಂತೆಯೇ ಮಹಿಳೆ ನಗಲು ಶುರು ಮಾಡಿದ್ದಾಳೆ. ಪಾದ್ರಿ ಯುವ ಶಿಬಿರದಲ್ಲಿ ಭಾಷಣ ಮಾಡುತ್ತಿದ್ದರು. ಈ ವೇಳೆ ಅಲ್ಲಿ 50 ಸಾವಿರಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದರು. ಪಾದ್ರಿ ಗಂಭೀರವಾಗಿ ಗಾಯಗೊಂಡಿಲ್ಲ ಎಂದು ವರದಿಯಾಗಿದೆ.
Advertisement
Advertisement
ಪಾದ್ರಿ ತಮ್ಮ ಧರ್ಮೋಪದೇಶವನ್ನು ಪೂರ್ಣಗೊಳಿಸಲು ಮತ್ತೆ ವೇದಿಕೆಗೆ ಮರಳಿದರು. ವೇದಿಕೆಗೆ ಮರಳಿದ ನಂತರ ಪಾದ್ರಿ ಮಹಿಳೆಯ ಹಲ್ಲೆ ಬಗ್ಗೆ ತಮ್ಮ ಧರ್ಮೋಪದೇಶದಲ್ಲಿ ಉಲ್ಲೆಖಿಸಿದ್ದರು. ಇದು ನನಗೆ ನೋವುಂಟು ಮಾಡಿದೆ. ಹೆಚ್ಚು ಗಮನ ಕೊಡಿ. ನಾನು ನೋವಿನ ಬಗ್ಗೆ ಮಾತನಾಡಲು ಮುಂದಾಗಿದ್ದೆ. ಆದರೆ ಇದು ಈ ರೀತಿ ಆಗುತ್ತದೆ ಎಂದು ನಾನು ಕಲ್ಪನೆ ಕೂಡ ಮಾಡಿರಲಿಲ್ಲ ಎಂದು ಹೇಳಿದ್ದಾರೆ.
32 ವರ್ಷದ ಮಹಿಳೆ ಯುವ ಶಿಬಿರದಲ್ಲಿ ಭಾಗವಹಿಸಲು ರಿಯೋ ಡಿ ಜನೈರೊದಿಂದ ಬಂದಿದ್ದಳು. ಮಹಿಳೆ ಮಾನಸಿಕ ಅಸ್ವಸ್ಥೆ ಎಂದು ಹೇಳಲಾಗುತ್ತಿದೆ. ಸದ್ಯ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದ್ದು, 94 ಲಕ್ಷಕ್ಕೂ ಹೆಚ್ಚು ವ್ಯೂ ಪಡೆದುಕೊಂಡಿದೆ.
https://twitter.com/zemunna/status/1151930998768226304?ref_src=twsrc%5Etfw%7Ctwcamp%5Etweetembed%7Ctwterm%5E1151930998768226304&ref_url=https%3A%2F%2Fwww.timesnownews.com%2Fthe-buzz%2Farticle%2Fvideo-priest-says-fat-women-wont-go-to-heaven-woman-pushes-him-off-stage-during-live-stream%2F456564