ಕಲಬುರಗಿ: ಜಿಲ್ಲೆಯ ಕಾಳಗಿ ತಾಲೂಕಿನ ಶ್ರೀ ರಟಕಲ್ ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ಸಂಸ್ಥಾನಿಕರು ಮತ್ತು ಮುಜರಾಯಿ ಅರ್ಚಕರು ತಟ್ಟೆ ಹಣಕ್ಕಾಗಿ ಕಚ್ಚಾಡಿಕೊಂಡಿದ್ದಾರೆ.
ದೇವಸ್ಥಾನದಲ್ಲಿ ರೇವಣಸಿದ್ದೇಶ್ವರನ ಸಂಸ್ಥಾನಿಕರು ನಾವೇ ಅಂತ ಚನ್ನಬಸಪ್ಪ, ಮಲ್ಲಿಕಾರ್ಜುನ, ಸೋಮನಾಥ, ರೇವಣಸಿದ್ದಪ್ಪ ಹಾಗೂ ಗಿರೀಶ್ ಹೇಳ್ತಿದ್ದಾರೆ. ಆದರೆ ಇತ್ತೀಚೆಗೆ ಮುಜರಾಯಿ ಇಲಾಖೆ ನೇಮಿಸಿದ ಕೆಲ ಅರ್ಚಕರು ನಮ್ಮಿಂದ ಕಲಿತು ನಮಗೆ ತಿರುಗಿ ಬಿದ್ದಿದ್ದಾರೆ ಅಂತಾ ಆರೋಪಿಸುತ್ತಿದ್ದಾರೆ. ಇದನ್ನೂ ಓದಿ: ಗೊಟಬಯ ರಾಜಪಕ್ಸೆಗೆ ಶಾಕ್ ಕೊಟ್ಟ ಸಿಂಗಾಪುರ – ದೇಶ ಬಿಟ್ಟು ಹೊರಡಿ ಎಂದು ಖಡಕ್ ಸೂಚನೆ
ಈ ಅರ್ಚಕರ ಗಲಾಟೆ ಕಂಡು ಸೇಡಂ ಸಹಾಯಕ ಆಯುಕ್ತರು ತನಿಖೆಯನ್ನು ನಡೆಸಿದಾಗ, ಸಾಂಸ್ಥಾನಿಕ ಅರ್ಚಕರು ಎನ್ನುವುದಕ್ಕೆ ನಕಲಿ ದಾಖಲಾತಿ ನೀಡಿರುವುದು ಸ್ಪಷ್ಟವಾಗಿದೆ. ಜೊತೆಗೆ, ದೇವಸ್ಥಾನದಿಂದ ತೆಗೆದುಕೊಂಡು ಹೋದ ವಸ್ತುಗಳು ಮರಳಿ ಕೊಟ್ಟಿಲ್ಲ. ಈ ಬಗ್ಗೆ ದೂರು ದಾಖಲು ಮಾಡುವುದ್ದಾಗಿ ಚನ್ನಬಸಪ್ಪಗೆ ಎಚ್ಚರಿಕೆ ನೀಡಲಾಗಿದೆ.