ಮುಂಬೈ: ಪಾದ್ರಿಯೊಬ್ಬರು ಚರ್ಚ್ನಲ್ಲಿಯೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಭಾನುವಾರ ಮಹಾರಾರಾಷ್ಟ್ರದ ನಾಸಿಕ್‌ನಲ್ಲಿ ನಡೆದಿದೆ. ಹಿರಿಯ ಪಾದ್ರಿಗಳು ನೀಡುತ್ತಿದ್ದ ಕಿರುಕುಳವೇ ಆತ್ಮಹತ್ಯೆ ಯತ್ನಿಸಲು ಕಾರಣ ಎಂದು ಆರೋಪಿಸಲಾಗಿದೆ.
ಭಾನುವಾರ ಶಾಲಿಮಾರ್ ಚೌಕ್‌ನಲ್ಲಿರುವ ಸೇಂಟ್ ಥಾಮಸ್ ಚರ್ಚ್ನಲ್ಲಿ ಪ್ರಾರ್ಥನೆ ನಡೆಯುತ್ತಿದ್ದ ವೇಳೆ ಘಟನೆ ನಡೆದಿದೆ. ಚರ್ಚ್ನಲ್ಲಿ ಫಾದರ್ ಅನಂತ್ ಆಪ್ಟೆ(61) ತನ್ನ ಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದ್ದಾರೆ. ಇದನ್ನೂ ಓದಿ: iPhone ಕಾರ್ಖಾನೆ ಆಹಾರ ಸೇವಿಸಿ 150 ಮಂದಿ ಅಸ್ವಸ್ಥ
Advertisement
Advertisement
ಈ ಸಮಯದಲ್ಲಿ ಅಲ್ಲಿದ್ದ ಜನರು ಬೆಂಕಿಯನ್ನು ನಂದಿಸಿದ್ದಾರೆ. ಸುಟ್ಟ ಗಾಯಗಳಾಗಿದ್ದರಿಂದ ಅವರನ್ನು ಹತ್ತಿರದ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Advertisement
ಹಿರಿಯ ಪಾದ್ರಿಗಳ ಕಿರುಕುಳ ತಾಳಲಾರದೆ ತಾನು ಆತ್ಮಹತ್ಯೆಗೆ ಯತ್ನಿಸಿರುವುದಾಗಿ ಅವರು ಹೇಳಿದ್ದು, ಈ ಕುರಿತು ಭದ್ರಕಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮಾಲೀಕನ ಮೇಲಿದ್ದ ಸಿಟ್ಟಿಗೆ ವಿಮಾನದಲ್ಲಿ ಬಂದು ಕಳ್ಳತನ ಮಾಡ್ಕೊಂಡು ಎಸ್ಕೇಪ್!