ತೈಲ, ಹೋಟೆಲ್ ಫುಡ್ ಬಳಿಕ ಗಗನಕ್ಕೇರಿದ ತರಕಾರಿ ಬೆಲೆ

Public TV
1 Min Read
vegitabels fruits

ಬೆಂಗಳೂರು: ಕಳೆದ ಹಲವು ದಿನಗಳಿಂದ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ತರಕಾರಿ ಬೆಲೆ ಗಗನಕ್ಕೇರಿದೆ. ಅಕಾಲಿಕ ಮಳೆಯಿಂದ ಕೈಗೆ ಬಂದಿದ್ದ ಫಸಲುಗಳು ನಾಶವಾಗಿರುವ ಕಾರಣದಿಂದ ತರಕಾರಿ ಬೆಲೆ ಏರಿಕೆಯಾಗಿದೆ.

VEGITABLE

ಪೆಟ್ರೋಲ್, ಡೀಸೆಲ್ ಬೆಲೆ ಜಾಸ್ತಿ ಆಗಿರುವುದು ಕೂಡ ತರಕಾರಿ ಬೆಲೆ ಏರಿಕೆಗೆ ಕಾರಣವಾಗಿದೆ. ಯಾವುದೇ ಅಡುಗೆ ತಯಾರಿಗೂ ಮುಖ್ಯವಾಗಿ ಬೇಕಾಗಿರುವ ಟೊಮೆಟೊ, ಈರುಳ್ಳಿ ಬೆಲೆ ಅರ್ಧ ಶತಕ ಬಾರಿಸಿ ಶತಕದ ಕಡೆ ಮುನ್ನುಗ್ಗುತ್ತಿದೆ. ಇದನ್ನೂ ಓದಿ: ಶಿವಣ್ಣ, ನಾನು ಮುಖ ನೋಡಿಕೊಳ್ಳಲು ನಾಚಿಕೆಯಾಗಿದೆ: ರಾಘವೇಂದ್ರ ರಾಜ್‍ಕುಮಾರ್

VIGITABLE

ಬೆಲೆ ಏರಿಕೆಯಿಂದಾಗಿ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ. ಪ್ರತಿಯೊಂದು ತರಕಾರಿಯ ಬೆಲೆ ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ ದುಪ್ಪಟ್ಟು ಆಗಿದೆ. ಒಂದು ಕೆಜಿ ಟೊಮೆಟೊ ಬೆಲೆ 75 ರೂ. ಆದ್ರೆ, ಈರುಳ್ಳಿ ಬೆಲೆ 60 ರೂ.ಗೆ ತಲುಪಿದೆ. ಇದನ್ನೂ ಓದಿ: ಪ್ಯಾರಾಸೈಲಿಂಗ್ ವೇಳೆ ಹಗ್ಗ ತುಂಡಾಗಿ ಸಮುದ್ರಕ್ಕೆ ಬಿದ್ದ ದಂಪತಿ

VIGITABLE 1

ಹಾಪ್‍ಕಾಮ್ಸ್ ನಲ್ಲಿ ಇಂದಿನ ತರಕಾರಿ ಬೆಲೆ:

ಟೊಮೆಟೊ- ಕೆಜಿಗೆ-74 ರೂ., ಈರುಳ್ಳಿ-55 ರೂ., ಹುರುಳಿ ಕಾಯಿ-58 ರೂ., ಬಿಟ್ ರೋಟ್ – 51 ರೂ., ಬದನೆಕಾಯಿ – 90 ರೂ., ಗುಂಡುಬದನೆ – 56 ರೂ., ಕ್ಯಾರೆಟ್ – 99 ರೂ, ದಪ್ಪ ಮೆಣಸಿನಕಾಯಿ- 135 ರೂ., ನುಗ್ಗೆಕಾಯಿ – 234 ರೂ., ಹಸಿಮೆಣಸಿನಕಾಯಿ – 55 ರೂ., ಬೆಂಡೆಕಾಯಿ – 78 ರೂ., ಆಲೂಗಡ್ಡೆ – 44 ರೂ., ಹಿರೇಕಾಯಿ – 90 ರೂ., ತೊಂಡೆಕಾಯಿ – 87 ರೂ., ಎಲೆಕೋಸು – 35 ರೂ.

Share This Article