ಬೆಂಗಳೂರು: ಈಗಾಗಲೇ ಬೆಲೆ ಏರಿಕೆಯಿಂದ ಕಂಗೆಟ್ಟಿರೋ ಜನಸಾಮಾನ್ಯರಿಗೆ ಮತ್ತೊಂದು ಶಾಕ್ ಎದುರಾಗಿದೆ. ಬೇಸಿಗೆಗೂ ಮುನ್ನವೇ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ.
ಈಗಾಗಲೇ ತರಕಾರಿ, ಹಣ್ಣು, ಚಿನ್ನ, ಬೆಳ್ಳಿ ಬೆಲೆ ಏರಿಕೆಯಿಂದ ಕಂಗೆಟ್ಟಿರೋ ಜನಸಾಮಾನ್ಯರಿಗೆ, ಇದೀಗ ಅಗತ್ಯ ಪದಾರ್ಥಗಳ ಬೆಲೆ ಏರಿಕೆಯಾಗಿರೋದು ಮತ್ತೊಂದು ಬರೆ ಎಳೆದಂತಾಗಿದೆ. ಬೇಸಿಗೆ ಇನ್ನು ಆರಂಭವಾಗಿಲ್ಲ. ಆದ್ರೂ ಜನರಿಗೆ ಅಗತ್ಯವಾದ ಅಕ್ಕಿ ,ಬೇಳೆ ಕಾಳುಗಳ ಬೆಲೆಯಲ್ಲಿ ಏರಿಕೆಯಾಗಿದೆ. ಇದನ್ನೂ ಓದಿ: Budget Expectations | ಚಿನ್ನಾಭರಣ ಖರೀದಿಗೆ ಪ್ಯಾನ್ ಮಿತಿ ಬದಲು – ಉದ್ಯೋಗಸ್ಥ ದಂಪತಿಗೆ ಜಂಟಿ ತೆರಿಗೆ ವ್ಯವಸ್ಥೆ ಸಾಧ್ಯತೆ!
ಪ್ರಮುಖವಾಗಿ ಬೇರೆ ಬೇರೆ ದೇಶಗಳಿಗೆ ಅಕ್ಕಿ ರಪ್ತು ಹೆಚ್ಚಳವಾಗಿರೋ ಹಿನ್ನಲೆ ಅಕ್ಕಿ ಬೆಲೆಯಲ್ಲಿ ಕೆ.ಜಿಗೆ 5-6 ರೂಪಾಯಿ ಏರಿಕೆಯಾಗಿದೆ. ಹಾಗೆಯೇ ಕಡಲೆ ಬೀಜ ಹಾಗೂ ಮೆಣಸಿನಕಾಯಿ ಇಳುವಳಿಯಲ್ಲಿ ಇಳಿಕೆಯಾಗಿದ್ದರಿಂದ ಕೆ.ಜಿಗೆ 50 ರೂಪಾಯಿ ಏರಿಕೆಯಾಗಿದೆ. ಹಾಗೆಯೇ ವಿವಿಧ ಬೆಲೆಕಾಳುಗಳ ಬೆಲೆಯೂ ಕೆ.ಜಿಗೆ 10-20 ರೂಪಾಯಿ ಏರಿಕೆಯಾಗಿದೆ. ಇದನ್ನೂ ಓದಿ: ಲಂಚ ಪಡೆಯುವಾಗ ಲೋಕಾ ಬಲೆಗೆ ಬಿದ್ದ ಇನ್ಸ್‌ಪೆಕ್ಟರ್ ಗೋವಿಂದರಾಜು – ವಿಚಾರಣೆಯಲ್ಲಿ ಮತ್ತಷ್ಟು ವಿಚಾರ ಬೆಳಕಿಗೆ
ಅಕ್ಕಿ ಹಾಗೂ ವಿವಿಧ ಬೇಳೆ ಕಾಳುಗಳ ಬೆಲೆ ಈ ಹಿಂದೆ ಎಷ್ಟಿತ್ತು ಈಗ ಎಷ್ಟಾಗಿದೆ ಅಂತ ನೋಡೋದಾದ್ರೇ…
ಯಾವುದು ದುಬಾರಿ?
ಪದಾರ್ಥ – ಹಳೆಯ ಬೆಲೆ(ಕೆ.ಜಿಗೆ) ಹೊಸಬೆಲೆ(ಕೆ.ಜಿಗೆ)
ತೊಗರಿಬೇಳೆ – 110 ರೂ. – 135 ರೂ.
ಉದ್ದಿನಬೇಳೆ – 100 ರೂ. – 120 ರೂ.
ಕಡಲೆಬೀಜ – 120 ರೂ. – 170 ರೂ.
ಸೋನಾಮಸೂರಿ ಅಕ್ಕಿ – 38 ರೂ. – 44 ರೂ.
ರಾ ರೈಸ್ – 49 ರೂ. – 54 ರೂ.
ದೋಸಾ ರೈಸ್ – 29 ರೂ. -39 ರೂ.
ಬ್ಯಾಡಗಿ ಮೆಣಸಿನಕಾಯಿ – 260 ರೂ. – 400 ರೂ.
ಗುಂಟೂರು ಮೆಣಸಿನಕಾಯಿ – 180 ರೂ. – 230 ರೂ.



