ನವದೆಹಲಿ: ಭಾರತೀಯ ರೈಲ್ವೆ ಪ್ಲಾಟ್‍ಫಾರ್ಮ್ ಟಿಕೆಟ್ ದರವನ್ನು ಇಳಿಕೆ ಮಾಡಿದ್ದು ಕೊರೊನಾ ಪೂರ್ವ ನಿಯಮಗಳಂತೆ 10 ರೂಪಾಯಿಗೆ ನಿಗದಿಪಡಿಸಿದೆ. ಎರಡನೇ ಅಲೆಯಲ್ಲಿ ಕೊರೊನಾ ಸೋಂಕು ವ್ಯಾಪಿಸಿದ ಬಳಿಕ ರೈಲು ನಿಲ್ದಾಣಗಳಲ್ಲಿ ಜನದಟ್ಟಣೆ ಕಡಿಮೆ ಮಾಡಲು ರೈಲ್ವೆ ಇಲಾಖೆ ಪ್ಲಾಟ್‍ಫಾರ್ಮ್ ಟಿಕೆಟ್ ಅನ್ನು 30 ರೂಪಾಯಿಗೆ ಏರಿಸಿತ್ತು.
ಎರಡನೇ ಅಲೆ ಬಹುತೇಕ ಅಂತ್ಯವಾಗಿದ್ದು ಭಾರತದಲ್ಲಿ ಮೂರನೇ ಅಲೆಯ ಭೀತಿಯೂ ಕಡಿಮೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ ಜನ ಜೀವನ ಸಾಮಾನ್ಯಗೊಳ್ಳುತ್ತಿದ್ದು ಹಂತ ಹಂತವಾಗಿ ರೈಲುಗಳ ಸಂಚಾರವನ್ನು ಹೆಚ್ಚು ಮಾಡಲಾಗುತ್ತಿದೆ. ಈ ಹಿನ್ನಲೆ ರೈಲ್ವೆ ಇಲಾಖೆ ಈಗ ಪ್ಲಾಟ್‍ಫಾರ್ಮ್ ಟಿಕೆಟ್ ದರ ಇಳಿಕೆ ಮಾಡುವ ನಿರ್ಧಾರ ತೆಗೆದುಕೊಂಡಿದೆ. ಇದನ್ನೂ ಓದಿ: “ಆಂಧ್ರ-ತೆಲಗು ರಾಜ್ಯಕ್ಕೆ ಕೇಡು” – ಮತ್ತೆ ನಿಜವಾಯ್ತು ಬಬಲಾದಿ ಮಠದ ಭವಿಷ್ಯ
ಮುಂಬೈ ಮೆಟ್ರೋಪಾಲಿಟನ್ ಪ್ರದೇಶದ ಪ್ರಮುಖ ನಿಲ್ದಾಣಗಳಲ್ಲಿ ಪ್ಲಾಟ್‍ಫಾರ್ಮ್ ಟಿಕೆಟ್‍ಗಳ ಬೆಲೆಯನ್ನು ಗುರುವಾರದಿಂದ 50 ರಿಂದ 10 ರೂಪಾಯಿಗೆ ಇಳಿಕೆ ಮಾಡಿದ ಬಳಿಕ ದೇಶದ ಎಲ್ಲ ನಿಲ್ದಾಣಗಳಲ್ಲೂ 10 ರೂ.ಗೆ ಇಳಿಕೆ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದನ್ನೂ ಓದಿ: ಬೆಂಗಳೂರಿನ ಶಾಲೆಯಲ್ಲಿ ಕೊರೊನಾ ಸ್ಫೋಟ – 33 ವಿದ್ಯಾಥಿಗಳಿಗೆ ಸೋಂಕು
ಇನ್ನು ರೈಲುಗಳಲ್ಲಿ ಬೇಯಿಸಿಸ ಊಟವನ್ನು ನೀಡಲು ಕೂಡಾ ಅನುಮತಿ ನೀಡಲಾಗಿದ್ದು, ಇನ್ಮುಂದೆ ಪ್ರಯಾಣದ ವೇಳೆ ರೈಲಿನಲ್ಲಿ ಊಟವೂ ಸಿಗಲಿದೆ. ಕೊರೊನಾ ಹಿನ್ನಲೆ ರೈಲಿನಲ್ಲಿ ಬೇಯಿಸಿದ ಊಟಕ್ಕೆ ಬ್ರೇಕ್ ಹಾಕಿದ್ದ ಇಲಾಖೆ ಕೇವಲ ರೆಡಿ ಟು ಈಟ್ ಫುಡ್‍ಗಳಿಗೆ ಮಾತ್ರ ಅವಕಾಶ ನೀಡಿತ್ತು. ಈಗ ಕೊರೊನಾ ಪೂರ್ವ ಎಲ್ಲ ನಿಯಮಗಳನ್ನು ಜಾರಿ ತರಲು ಇಲಾಖೆ ಹಂತ ಹಂತವಾಗಿ ಕಾರ್ಯಪ್ರವೃತ್ತವಾಗುತ್ತಿದೆ.