ಹೈದರಾಬಾದ್: ಲಸಿಕೆ ಮತ್ತು ಔಷಧಿಯ ಸಂಸ್ಥೆ ಬಯಾಲಾಜಿಕಲ್ ಇ. ಲಿಮಿಟೆಡ್ ಅಭಿವೃದ್ಧಿಪಡಿಸಿರುವ ಕೊರೊನಾ ಲಸಿಕೆ ಕಾರ್ಬೆವಾಕ್ಸ್‌ನ ಬೆಲೆಯನ್ನು ಡೋಸ್‍ಗೆ 250 ರೂ. ನಿಗದಿಪಡಿಸಲಾಗಿದೆ.
Advertisement
ಈ ಹಿಂದೆ ಖಾಸಗಿ ಲಸಿಕಾ ಕೇಂದ್ರಗಳಲ್ಲಿ ಕಾರ್ಬೆವಾಕ್ಸ್ ಬೆಲೆ 840 ರೂ. ಇತ್ತು. ಇದೀಗ ಲಸಿಕೆ ತಯಾರಿಕಾ ಸಂಸ್ಥೆ ಈ ಬೆಲೆಯನ್ನು 250 ರೂ.ಗೆ ಇಳಿಸಿದೆ. ಇದೀಗ ಟ್ಯಾಕ್ಸ್ ಮತ್ತು ಲಸಿಕೆ ನೀಡಿದ ಶುಲ್ಕ ಸೇರಿ 400 ರೂ.ಗಳಿಗೆ ಲಸಿಕೆಯನ್ನು ಪಡೆಯಬಹುದಾಗಿದೆ. ಇದನ್ನೂ ಓದಿ: ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಪ್ರತಾಪ್ ರೆಡ್ಡಿ ನೇಮಕ
Advertisement
ಈ ಹಿಂದೆ ಲಸಿಕೆಯ ಟ್ಯಾಕ್ಸ್ ಮತ್ತು ಲಸಿಕೆ ನೀಡಿದ ಶುಲ್ಕ ಸೇರಿ ಒಟ್ಟು 900 ರೂ. ಆಗಿತ್ತು. ಇದೀಗ ಈ ಬೆಲೆ 400 ರೂ.ಗಳಿಗೆ ಇಳಿಕೆ ಕಂಡಿದೆ. ಈಗಾಗಲೇ 5 ರಿಂದ 12 ವರ್ಷದ ಮಕ್ಕಳಿಗೆ ಕಾರ್ಬೆವಾಕ್ಸ್ ತುರ್ತು ಬಳಕೆಗೆ (EUA) ಅವಕಾಶ ನೀಡಿದೆ. ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ಪದೇ ಪದೇ ಭೂಕಂಪನ – ಬಾಗೇಪಲ್ಲಿ ತಾಲೂಕಿನ ಹಲವೆಡೆ ಭೀಕರ ಶಬ್ದ
Advertisement
With an aim to make #CORBEVAX, our protein subunit #COVID19 vaccine, more affordable and accessible, we are pleased to share that we have revised its pricing for Private CVCs to INR 250 inclusive of GST & INR 400 inclusive of taxes and administration charges to patients
#vaccine pic.twitter.com/sZQW9NyTR1
— Biological E. Limited (@biological_e) May 16, 2022
Advertisement
ಮಾರ್ಚ್ 2022ರ ಬಳಿಕ 12 ರಿಂದ 14 ವರ್ಷದ ಮಕ್ಕಳಿಗೆ ಕಾರ್ಬೆವಾಕ್ಸ್ ಲಸಿಕೆಯನ್ನು ನೀಡಲಾಗುತ್ತಿದೆ ಈಗಾಗಲೇ ಸರ್ಕಾರಿ ಲಸಿಕಾ ಕೇಂದ್ರಗಳಲ್ಲಿ 145 ರೂ.ಗಳನ್ನು ನಿಗದಿಪಡಿಸಲಾಗಿದೆ. ಟೆಕ್ಸಾಸ್ ಚಿಲ್ಡ್ರನ್ ಮತ್ತು ಬೇಲರ್ ಕಾಲೇಜ್ ಆಫ್ ಮೆಡಿಸಿನ್ ಸಹಯೋಗದೊಂದಿಗೆ ಬಯಾಲಾಜಿಕಲ್ ಇ. ಲಿಮಿಟೆಡ್ ಕಾರ್ಬೆವಾಕ್ಸ್ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ.