ಬೆಂಗಳೂರು: ಈಗಾಗಲೇ ಬಸ್, ಮೆಟ್ರೋ, ಅಡುಗೆ ಎಣ್ಣೆ ಬೆಲೆ ಏರಿಕೆಯಿಂದ ಕಂಗೆಟ್ಟ ಜನರಿಗೆ, ಇನ್ಮುಂದೇ ಕಾಫಿ (Coffee) ದರ ಏರಿಕೆಯ ಬಿಸಿ ತಟ್ಟಲಿದೆ. ತಿಂಗಳಾಂತ್ಯಕ್ಕೆ 1 ಕಪ್ ಕಾಫಿ ಬೆಲೆ 2ರಿಂದ 3 ರೂ. ಏರಿಕೆಯಾಗುವ ಸಾಧ್ಯತೆಯಿದೆ.
ಕಾಫಿ ಬೆಲೆ ಇನ್ನೂ 2 ರಿಂದ 3 ರೂ. ಹೆಚ್ಚಳವಾಗುವ ಸಾಧ್ಯತೆಯಿದೆ. ಕಳೆದ ತಿಂಗಳಷ್ಟೇ ಶೇಕಡಾ 15ರಷ್ಟು ಕಾಫಿ ಬೆಲೆ ಹೆಚ್ಚಾಗಿತ್ತು. ಸದ್ಯ ಹೊಟೇಲ್‌ಗಳಲ್ಲಿ 1 ಕಪ್ ಕಾಫಿಗೆ 15 ರಿಂದ 17 ರೂ. ಇದೆ. ಈ ತಿಂಗಳಾಂತ್ಯಕ್ಕೆ 20 ರೂ. ಆಗುವ ಸಾಧ್ಯತೆಯಿದೆ. ಹಾಲಿನ ಬೆಲೆಕ್ಕಿಂತ ಕಾಫಿಗೆ ಹಾಕುವ ಡಿಕಾಕ್ಷನ್ ಬೆಲೆಯೇ ಹೆಚ್ಚಾಗಲಿದೆ ಎಂದು ಕರ್ನಾಟಕ ಹೊಟೇಲ್ ಅಸೋಸಿಯೇಷನ್ ಉಪಾಧ್ಯಕ್ಷ ಮಧುಕರ್ ಶೆಟ್ಟಿ ತಿಳಿಸಿದ್ದಾರೆ. ಇದನ್ನೂ ಓದಿ: ಚುನಾವಣೆ ಬಂದರೆ ಮಾತ್ರ ಗ್ಯಾರಂಟಿ ಹಣ ಹಾಕ್ತಾರೆ – ಸುರೇಶ್ ಬಾಬು ಕಿಡಿ
Advertisement
Advertisement
ಕಳೆದ ತಿಂಗಳು 1 ಕೆಜಿ ಕಾಫಿ ಪುಡಿಗೆ 100 ರೂ. ಹೆಚ್ಚಳವಾಗಿತ್ತು. ಇದೀಗ ಮಾ. 1ರಿಂದ ಮತ್ತೆ 1 ಕೆ.ಜಿ ಕಾಫಿ ಪುಡಿಗೆ 100 ರೂ. ಹೆಚ್ಚಾಗಿದೆ. ಹೀಗಾಗಿ 1 ಕೆ.ಜಿ ಪ್ರೀಮಿಯಮ್ ಕಾಫಿ ಪುಡಿಗೆ 900 ರಿಂದ 1000 ರೂ. ಆಗಿದೆ. ಈ ತಿಂಗಳ ಅಂತ್ಯಕ್ಕೂ ಮುನ್ನ 100 ರೂ. ಹೆಚ್ಚಳವಾಗುವ ಸಾಧ್ಯತೆಯಿದೆ. ಈ ಪೈಕಿ ಅರೇಬಿಕಾ ಕಾಫಿ ಬೆಲೆ ಹೆಚ್ಚಾಗಿದೆ. ಈ ಬಗ್ಗೆ ಇಂಡಿಯನ್ ಕಾಫಿ ರೋಸ್ಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಪೆರಿಕಲ್ ಎಂ.ಸುಂದರ್ ಬೆಲೆ ಏರಿಕೆಯ ಆತಂಕ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಭಾರತದಲ್ಲಿ ಬೊಜ್ಜು ಹೆಚ್ಚಾಗಲು ಕಾರಣವೇನು? ನಿಯಂತ್ರಣ ಹೇಗೆ?
Advertisement
Advertisement
ಕಾಫಿ ಪುಡಿ ಬೆಲೆ ಏರಿಕೆಗೆ ಕಾರಣಗಳನ್ನ ನೋಡೋದಾದ್ರೆ… ಹವಾಮಾನ ವೈಪರೀತ್ಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾಫಿ ಬೆಳೆ ಶೇ.20ರಷ್ಟು ಕುಸಿತವಾಗಿರುವುದು. ಅತೀ ಹೆಚ್ಚು ಕಾಫಿ ಬೆಳೆಯುವ ದೇಶಗಳಾದ ವಿಯ್ನೆಟಾಂ, ಬ್ರೆಜಿಲ್‌ನಲ್ಲಿ ಅತಿವೃಷ್ಟಿಯಿಂದಾಗಿ ಕಾಫಿ ಬೆಳೆ ನಾಶವಾಗಿರುವುದು. ಕರ್ನಾಟಕದಲ್ಲಿ ಬೆಳೆದ ಕಾಫಿಗೆ ವಿದೇಶಗಳಲ್ಲಿ ಬೇಡಿಕೆ ಹೆಚ್ಚಾಗಿರುವುದು ಮತ್ತು ವಿದೇಶಗಳಿಗೆ ಶೇ.60ರಷ್ಟು ಕಾಫಿ ರಫ್ತಾಗುತ್ತಿರುವುದು ಕಾಫಿ ಬೆಲೆ ಏರಿಕೆಗೆ ಮುಖ್ಯ ಕಾರಣಗಳು ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ತರುಣ್ ಸುಧೀರ್ ನಿರ್ಮಾಣದ ಹೊಸ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎಂಟ್ರಿ