ಹೊಸ ವರ್ಷದ ಸಂಭ್ರಮದಲ್ಲಿ ಬೆಲೆಏರಿಕೆ ಯೊಂದು ಜನರು ತಲೆ ಕೆಡಿಸಿಕೊಳ್ಳುವ ವಿಚಾರ. ಕೊರೋನಾ ಸಂಕಷ್ಟದ ನಡುವೆ ಜನರು ಹೊಸ ವರ್ಷದ ಆಚರಣೆಯಲ್ಲಿ ಬೆಲೆ ಏರಿಕೆಯ ಬಿಸಿಯನ್ನು ಎದುರಿಸಲೇ ಬೇಕಾಗಿದೆ. ಈ ಬಾರಿ ಯಾವೆಲ್ಲಾ ವಸ್ತುಗಳ ಬೆಲೆ ದುಬಾರಿಯಾಗಿವೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ನಮಗೆ ದಿನನಿತ್ಯ ಸಾಕಷ್ಟು ಉಪಯುಕ್ತವಾಗಿರುವ ಸೇವೆಗಳು ಓಲಾ ಉಬರ್ ಸೇರಿದಂತೆ ಫುಡ್ ಡೆಲಿವರಿಗಳಾದ ಸ್ವಿಗ್ಗಿ, ಝೊಮ್ಯಾಟೊ ಕೂಡಾ ದುಬಾರಿಯಾಗಿದೆ. ಇದರೊಂದಿಗೆ ಪಾದರಕ್ಷೆ, ಎಲೆಕ್ಟ್ರಾನಿಕ್ಸ್, ಆಟೋಮೊಬೈಲ್ ವಸ್ತುಗಳ ಬೆಲೆಯೂ ಏರಿಕೆ ಯಾಗಿದ್ದು, ಜನರು ಹೊಸ ವರ್ಷದ ಸಂಭ್ರಮದಲ್ಲಿ ಈ ಎಲ್ಲಾ ಬೆಲೆ ಏರಿಕೆಗಳನ್ನು ಎದುರಿಸಬೇಕಾಗಿದೆ. ಇದನ್ನೂ ಓದಿ: ಜನವರಿ 1 ರಿಂದ ಜಿಎಸ್‍ಟಿ ನಿಯಮಗಳ ಬದಲಾವಣೆ – ಹೀಗಿದೆ ಮುಖ್ಯ ಬೆಲೆ ಏರಿಕೆಗಳ ಪಟ್ಟಿ
Advertisement
ಆನ್‍ಲೈನ್ ಆಟೋ, ಕಾರು ಸೇವೆಗಳು ದುಬಾರಿ:
ಜನವರಿ 1ರಿಂದ ಓಲಾ, ಉಬರ್, ರ್ಯಾಪಿಡೋಗಳಂತಹ ಅಪ್ಲಿಕೇಶನ್‍ಗಳ ಮೂಲಕ ಆನ್‍ಲೈನ್‍ನಲ್ಲಿ ವಾಹನಗಳನ್ನು ಬುಕ್ ಮಾಡಿ ಪ್ರಯಾಣಿಸಿತ್ತಿದ್ದ ಸೇವೆಗಳು ದುಬಾರಿಯಾಗಿದೆ. ಶೇ.5 ರಷ್ಟು ಜಿಎಸ್‍ಟಿ ಯನ್ನು ಈ ಸೇವೆಗಳ ಮೇಲೆ ವಿಧಿಸಲಾಗಿದೆ. ಆದರೆ ಗ್ರಾಹಕರು ನೇರವಾಗಿ ಆ್ಯಪ್ ರಹಿತವಾಗಿ ರಿಕ್ಷಾ, ಕಾರುಗಳನ್ನು ಬುಕ್ ಮಾಡಿದರೆ ಶೇ.5ರ ತೆರಿಗೆ ಇರುವುದಿಲ್ಲ.
Advertisement
Advertisement
ದಿನಬಳಕೆಯ ವಸ್ತುಗಳ ಬೆಲೆ ತುಟ್ಟಿ:
ಗೃಹಬಳಕೆಯಲ್ಲಿ ಅತೀ ಮುಖ್ಯವಾದ ವಸ್ತುಗಳು ಹಾಲು, ಹಣ್ಣು, ಕಾಫಿ, ಟೀ, ತಪು ಪಾನೀಯಗಳೊಂದಿಗೆ, ಸೋಪ್, ಪೇಸ್ಟ್‍ಗಳ ಬೆಲೆಯೂ ಮುಂದಿನ 2-3 ತಿಂಗಳುಗಳಲ್ಲಿ ಶೇ.4 ರಿಂದ ಶೇ.10ಕ್ಕೆ ಏರಿಕೆಯಾಗಲಿದೆ. ಈ ಹಿಂದೆ 2020ರ ಡಿಸೆಂಬರ್‍ನಲ್ಲಿ ಇವುಗಳ ಬೆಲೆ ಶೇ.5 ರಿಂದ ಶೇ.12 ರಷ್ಟು ಏರಿಕೆಯಾಗಿತ್ತು. ಇದನ್ನೂ ಓದಿ: ಗುಡ್‍ನ್ಯೂಸ್ – ಜವಳಿ ಮೇಲಿನ ಜಿಎಸ್‍ಟಿ ಏರಿಕೆ ಇಲ್ಲ
Advertisement
ಆನ್‍ಲೈನ್ ಫುಡ್ ಡೆಲಿವರಿ ದುಬಾರಿ:
ಸ್ವಿಗ್ಗಿ, ಝೊಮ್ಯಾಟೋಗಳಂತಹ ಆನ್‍ಲೈನ್ ಆಹಾರ ವಿತರಣಾ ಸೇವೆಗಳ ಮೇಲೆ ಶೇ.5 ರಷ್ಟು ಜಿಎಸ್‍ಟಿ ಹೇರಲಾಗಿದೆ. ಈ ಸೇವೆಗಳೂ ಜನವರಿ 1ರಿಂದಲೇ ದುಬಾರಿಯಾಗಿವೆ.
ಪಾದರಕ್ಷೆಗಳ ಮೇಲೆ ಜಿಎಸ್‍ಟಿ:
1,000 ರೂ.ಗೂ ಅಧಿಕ ಬೆಲೆಯ ಪಾದರಕ್ಷೆಗಳ ಮೇಲೆ ಶೇ.12ರಷ್ಟು ಜಿಎಸ್‍ಟಿ ದರವನ್ನು ವಿಧಿಸಲಾಗಿದೆ. ಇದರ ಬೆಲೆ ಏರಿಕೆಯೂ ಜನವರಿ 1 ರಿಂದಲೇ ಅನುಷ್ಠಾನವಾಗಿದೆ. ಇದನ್ನೂ ಓದಿ: ಎಲ್‌ಪಿಜಿ ಬಳಕೆದಾರರಿಗೆ ಶುಭಸುದ್ದಿ – ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 102.5 ರೂ. ಕಡಿತ
ಆಟೋಮೊಬೈಲ್ ಇನ್ನೂ ಕಾಸ್ಟ್ಲಿ:
ಸಾಮಾನ್ಯ ಜನರು ವಾಹನಗಳನ್ನು ಖರೀದಿ ಮಾಡುವುದೇ ದೊಡ್ಡ ವಿಚಾರ ಹೀಗಿರುವಾಗಲೂ ಆಟೋಮೊಬೈಲ್‍ಗಳ ದರವನ್ನು ದುಬಾರಿ ಮಾಡುವ ಬಗ್ಗೆ ಕಂಪನಿಗಳು ನಿರ್ಧರಿಸಿವೆ. ಶೇ.4 ರಿಂದ ಶೇ.5ಕ್ಕೆ ಏರಿಕೆ ಮಾಡುವ ಬಗ್ಗೆ ಕಂಪನಿಗಳು ಯೋಜಿಸಿದ್ದು,
ಎಲೆಕ್ಟ್ರಾನಿಕ್ ವಸ್ತುಗಳ ಬೆಲೆಯ ಓಟ:
ಎಲೆಕ್ಟ್ರಾನಿಕ್ ಕಂಪನಿಗಳು ಈಗಾಗಲೇ ತಮ್ಮ ಉತ್ಪನ್ನಗಳ ಬೆಲೆಯನ್ನು ಶೇ.4ರಿಂದ ಶೇ.10 ರ ವರೆಗೆ ಏರಿಕೆ ಮಾಡುವ ಬಗ್ಗೆ ಯೋಜಿಸಿವೆ. ಕೇವಲ 2-3 ತಿಂಗಳುಗಳಲ್ಲೇ ಬೆಲೆ ಏರಿಕೆಯಾಗುವ ಸುಳಿವು ನೀಡಿದೆ. ಇದನ್ನೂ ಓದಿ: ಯೋಗ ಸಂದೇಶದ ಮೂಲಕ ಹೊಸ ವರ್ಷ ಬರಮಾಡಿಕೊಂಡ ವಿದ್ಯಾರ್ಥಿಗಳು
ಎಟಿಎಂ ವಿತ್‍ಡ್ರಾ ಶುಲ್ಕ ಹೆಚ್ಚಳ:
ಈ ಹಿಂದೆ ಎಟಿಎಂನಲ್ಲಿ ಉಚಿತ ವಿತ್‍ಡ್ರಾದ ಮಿತಿಯನ್ನು ದಾಟಿದ ಬಳಿಕ ಪ್ರತಿ ವಿತ್‍ಡ್ರಾಗೂ 20 ರೂ. ಕಡಿತವಾಗುತ್ತಿತ್ತು. ಇದೀಗ ಇದರ ಬೆಲೆಯೂ 21 ರೂ.ಗೆ ಏರಿಕೆಯಾಗಿದೆ.
ಜಿಎಸ್‍ಟಿ ಪಾವತಿಗೆ ಆಧಾರ್ ಕಡ್ಡಾಯ:
ಜಿಎಸ್‍ಟಿ ಪಾವತಿಗಳಲ್ಲಿ ನಡೆಯುತ್ತಿದ್ದ ವಂಚನೆಗಳನ್ನು ತಡೆಯಲು ಆಧಾರ್ ಕಡ್ಡಾಯಗೊಳಿಸಿದೆ. ಜಿಎಸ್‍ಟಿ ಪಾವತಿಯ ಬಳಿಕ ರೀಫಂಡ್ ಮಾಡುವ ಅವಕಾಶದಿಂದ ಈ ವಂಚನೆಗಳು ನಡೆಯುತ್ತಿದ್ದು, ಇದೀಗ ಜಿಎಸ್‍ಟಿ ರೀಫಂಡ್ ಕ್ಲೇಮ್‍ಗೆ ಆಧಾರ್ ಕಡ್ಡಾಯವಾಗಲಿದೆ.