ನವದೆಹಲಿ/ಬೆಂಗಳೂರು: ನವರಾತ್ರಿ, ದೀಪಾವಳಿ ಹಬ್ಬದ ಸಂಭ್ರಮದಲ್ಲಿದ್ದ ವಾಣಿಜ್ಯ ಸಿಲಿಂಡರ್ (Commercial Cylinder) ಬಳಕೆದಾರರ ಜೇಬು ಮತ್ತೆ ಭಾರವಾಗಲಿದೆ. ಕಾರಣ ಮತ್ತೆ ವಾಣಿಜ್ಯ ಸಿಲಿಂಡರ್ ದರ ಏರಿಕೆಯಾಗಿದ್ದು, ತಿಂಗಳ ಮೊದಲ ದಿನವೇ ಬಳಕೆದಾರರಿಗೆ ಬೆಲೆ ಏರಿಕೆಯ ಬಿಸಿತಾಗಿದೆ. ಇಂದಿನಿಂದಲೇ ಹೊಸ ದರಗಳು ಅನ್ವಯವಾಗಲಿದೆ.
ವಾಣಿಜ್ಯ ಬಳಕೆಯ 19 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆ 48.5 ರೂ. ಏರಿಕೆಯಾಗಿದೆ. ಗೃಹ ಬಳಕೆಯ 14 ಕೆಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಐಓಸಿಎಲ್ ವೆಬ್‌ಸೈಟ್ ಪ್ರಕಾರ, 19 ಕೆಜಿ ವಾಣಿಜ್ಯ ಬಳಕೆ ಸಿಲಿಂಡರ್‌ನ ಹೊಸ ಬೆಲೆಗಳು ಇಂದಿನಿಂದ ಅನ್ವಯವಾಗಲಿವೆ. ಆದರೆ ಬೆಲೆಗಳು ನಗರದಿಂದ ನಗರಕ್ಕೆ ವ್ಯತ್ಯಾಸವಾಗಿರುತ್ತವೆ. ದೆಹಲಿಯಿಂದ ಮುಂಬೈನವರೆಗೂ ಬೆಲೆಗಳು ಭಿನ್ನವಾಗಿರುತ್ತವೆ. ಮುಂಬೈನಲ್ಲಿ 1,644 ರೂ. ಇದ್ದ 19 ಕೆಜಿ ಸಿಲಿಂಡರ್ ಬೆಲೆ ಇದೀಗ 1,692.50 ರೂ. ಆಗಿದೆ. ಸೆಪ್ಟೆಂಬರ್‌ನಲ್ಲಿ 39 ರೂ.ಗಳಷ್ಟು ಏರಿಕೆಯಾಗಿತ್ತು. ಇದನ್ನೂ ಓದಿ: ಮಾಜಿ ಸಚಿವ ವಿಕೆ ಸಿಂಗ್ ವಿರುದ್ಧ ಮಾನಹಾನಿ ಪೋಸ್ಟ್ – ಯೂಟ್ಯೂಬರ್ ಅರೆಸ್ಟ್
Advertisement
ಕೋಲ್ಕತ್ತಾದಲ್ಲಿ ಇದರ ಬೆಲೆ 1,802.50 ರೂ.ನಿಂದ 1,850.50 ರೂ.ಆಗಿದೆ. ಚೆನ್ನೈನಲ್ಲಿ 1,855 ರೂ.ಯಿದ್ದ 19 ಕೆಜಿ ಸಿಲಿಂಡರ್ ಬೆಲೆ 1,903 ರೂ. ಆಗಿದೆ. ಬೆಂಗಳೂರಿನಲ್ಲಿಯೂ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆಯಲ್ಲಿ 48 ರೂ. ಏರಿಕೆಯಾಗಿದೆ. ಸದ್ಯ 19 ಕೆಜಿ ಸಿಲಿಂಡರ್ ಬೆಲೆ 1,818 ರೂ. ಆಗಿದೆ. ಇದನ್ನೂ ಓದಿ: 14 ಸೈಟ್ ಕೇಸ್‌ಗಿಂತಲೂ ಇದು ದೊಡ್ಡ ಪ್ರಕರಣ – ಹಳೆಯ ಡಿನೋಟಿಫಿಕೇಶನ್ ಕೆದಕಿ ಸಿಎಂಗೆ ಹೆಚ್‌ಡಿಕೆ ಗುದ್ದು
Advertisement
Advertisement
2024ರ ಜುಲೈ ನಂತರ 19 ಕೆಜಿ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ. ಜುಲೈನಲ್ಲಿ ಆಯಿಲ್ ಮಾರ್ಕೆಟಿಂಗ್ ಕಂಪನಿಗಳು ಬೆಲೆಗಳನ್ನು ಕೊಂಚ ಇಳಿಕೆ ಮಾಡಿಕೊಂಡಿದ್ದವು. ದೇಶದ ರಾಜಧಾನಿ ದೆಹಲಿಯಲ್ಲಿ 30 ರೂ.ವರೆಗೂ ಇಳಿಕೆಯಾಗಿತ್ತು. ಆದರೆ ಆಗಸ್ಟ್‌ನಲ್ಲಿ 8.50 ರೂ. ಏರಿಕೆಯಾಗಿತ್ತು. ನಂತರ ಇದೀಗ ಮೂರು ತಿಂಗಳು ಸೇರಿ ಒಟ್ಟು 39 ರೂ. ಬೆಲೆ ಏರಿಕೆಯಾಗಿದೆ. ಇದನ್ನೂ ಓದಿ: ಸೈಟ್ ವಾಪಸ್ ಕೊಟ್ಟು ಸಿಎಂ ಮತ್ತಷ್ಟು ಸಂಕಷ್ಟವನ್ನು ಮೈಮೇಲೆ ಎಳೆದುಕೊಂಡಿದ್ದಾರೆ : ಬೊಮ್ಮಾಯಿ
Advertisement