ಸರ್ಕಾರಕ್ಕೆ ಶಾಕ್‌ ಕೊಟ್ಟ ಮದ್ಯಪ್ರಿಯರು – ಮದ್ಯ ಮಾರಾಟ ಪ್ರಮಾಣ 15% ಇಳಿಕೆ

Public TV
2 Min Read
liquor bottle 1

ಬೆಂಗಳೂರು: ಗ್ಯಾರಂಟಿ ಯೋಜನೆಗಳ ಪರಿಣಾಮವಾಗಿ ಮದ್ಯದ (Liquor Price) ಬೆಲೆ ಏರಿಸಿ ಬಿಸಿ ಮುಟ್ಟಿಸಿದ್ದ ಸರ್ಕಾರಕ್ಕೆ ಈಗ ಮದ್ಯಪ್ರಿಯರೇ ಶಾಕ್‌ ಕೊಟ್ಟಿದ್ದಾರೆ.

ನಿರಂತರ ಬೆಲೆ ಏರಿಕೆಯಿಂದ ಮದ್ಯಪ್ರಿಯರು ಎಣ್ಣೆ ಖರೀದಿಸಲು ನಿರಾಸಕ್ತಿ ತೋರಿದ್ದಾರೆ. ಇದರಿಂದಾಗಿ ಮದ್ಯ ಮಾರಾಟದಲ್ಲಿ ಗಣನೀಯ ಇಳಿಕೆಯಾಗಿದೆ. ಭಾರತೀಯ ಮದ್ಯ ಮಾರಾಟ (IML) ಪ್ರಮಾಣ ಶೇ.15 ರಷ್ಟು ಕುಸಿತ ಕಂಡಿದೆ. ಇದನ್ನೂ ಓದಿ: ಜಮೀನಿನಲ್ಲಿ ಧರೆಗುರುಳಿದ ಚಾಲಕ ರಹಿತ ತಪಸ್ ಯುಎವಿ

liquor money

ಆದರೆ ಬಿಯರ್ ಮಾರಾಟದಲ್ಲಿ ಅಂತಹ ವ್ಯತ್ಯಯ ಕಂಡುಬಂದಿಲ್ಲ. ರಾಜ್ಯ ಪಾನೀಯ ನಿಗಮಕ್ಕೆ ಲಿಕ್ಕರ್‌ಗೆ ಸಲ್ಲಿಸುವ ಖರೀದಿ ಬೇಡಿಕೆ ಇಳಿಕೆಯಾಗಿದೆ. ಕಳೆದ ನಾಲ್ಕು ತಿಂಗಳಲ್ಲಿ ಪ್ರತಿ ತಿಂಗಳು ಎರಡೂವರೆ ಸಾವಿರ ಕೋಟಿ ಆದಾಯ ಬರುತ್ತಿತ್ತು. ಈ ಆಗಸ್ಟ್‌ನಲ್ಲಿ 962 ಕೋಟಿ ಮಾತ್ರ ಸಂಗ್ರಹವಾಗಿದೆ.

ಎಷ್ಟೆಷ್ಟು ಮಾರಾಟ, ಇಳಿಕೆ?
2022-ಆಗಸ್ಟ್: ಸ್ವದೇಶಿ ಬ್ರ್ಯಾಂಡ್ – 25.50 ಲಕ್ಷ ಬಾಕ್ಸ್, ಬಿಯರ್ – 10.34 ಲಕ್ಷ ಬಾಕ್ಸ್ ಮಾರಾಟ.

2023 ಆಗಸ್ಟ್: ದೇಶಿ ಬ್ರ್ಯಾಂಡ್ – 21.87 ಲಕ್ಷ ಬಾಕ್ಸ್, ಬಿಯರ್ – 12.52 ಲಕ್ಷ ಬಾಕ್ಸ್ ಮಾರಾಟ.

ಕಡಿಮೆ ದರದ ಬ್ರ್ಯಾಂಡ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಸ್ಕಾಚ್ ಪ್ರಿಯರು ಪ್ರೀಮಿಯರ್ ಬ್ರ್ಯಾಂಡ್‌ ಕಡೆಗೆ ವಾಲಿದ್ದಾರೆ. ಪ್ರೀಮಿಯಮ್ ಪ್ರಿಯರು ನಾರ್ಮಲ್ ಬ್ರ್ಯಾಂಡ್‌ಗೆ ಶಿಫ್ಟ್‌ ಆಗಿದ್ದಾರೆ. ಹೀಗಾಗಿ ಸರ್ಕಾರಿ ಆದಾಯ ಸಂಗ್ರಹದ ಮೇಲೂ ಪರಿಣಾಮ ಬೀರಿದೆ. ಇದನ್ನೂ ಓದಿ: ಅಂತಿಮ ಹಂತದ ಡಿಬೂಸ್ಟಿಂಗ್‌ ಕಾರ್ಯಾಚರಣೆಯೂ ಯಶಸ್ವಿ – ಚಂದ್ರನ ಅಂಗಳಕ್ಕೆ ಇನ್ನೊಂದೇ ಹೆಜ್ಜೆ

ಆದಾಯ ಎಷ್ಟೆಷ್ಟು?
ಏಪ್ರಿಲ್ – 2,308 ಕೋಟಿ ರೂ.
ಮೇ – 2,607 ಕೋಟಿ ರೂ.
ಜೂನ್ – 3,549 ಕೋಟಿ ರೂ.
ಜುಲೈ – 2,980 ಕೋಟಿ ರೂ.

ಐಎಂಎಲ್ ಮೇಲೆ ಶೇ.20 ರಷ್ಟು ಸುಂಕ ಹೆಚ್ಚಳ ಪರಿಣಾಮವಾದ ಪರಿಣಾಮ ಎಲ್ಲಾ 18 ಸ್ಲಾಬ್‌ಗಳ ಲಿಕ್ಕರ್ ದರ ಏರಿಕೆಯಾಗಿದೆ. ಪ್ರತಿ ಪೆಗ್‌ಗೆ 10 ರಿಂದ 20 ರೂಪಾಯಿ ಹೆಚ್ಚಳವಾಗಿದೆ. ಪ್ರತಿ ಬಾಟಲ್‌ಗೆ 50 ರಿಂದ 200 ರೂ. ಏರಿಕೆ ಕಂಡಿದೆ. ಪ್ರತಿ ತಿಂಗಳು ಸರಾಸರಿ 61 ಲಕ್ಷ ಟನ್ ಬಾಕ್ಸ್ ಮಾರಾಟವಾಗುತ್ತಿತ್ತು. ಬೆಲೆ ಏರಿಕೆಯಿಂದ ಆಗಸ್ಟ್‌ನಲ್ಲಿ 18.8 ಲಕ್ಷ ಟನ್ ಬಾಕ್ಸ್ ಮಾತ್ರ ಮಾರಾಟವಾಗಿದೆ.

Web Stories

Share This Article