Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Search
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Crime

ನಾನ್‌ವೆಜ್ ಸೇವನೆ ಬಿಡುವಂತೆ ಒತ್ತಡ; ಏರ್ ಇಂಡಿಯಾ ಪೈಲಟ್ ಆತ್ಮಹತ್ಯೆ – ಪ್ರಿಯಕರ ಅರೆಸ್ಟ್

Public TV
Last updated: November 27, 2024 10:38 pm
Public TV
Share
2 Min Read
Srishti Air India Pilot Suicide
SHARE

ಮುಂಬೈ: ಆಹಾರ ಪದ್ಧತಿಯನ್ನು ಬದಲಾಯಿಸುವಂತೆ ಮತ್ತು ಮಾಂಸಾಹಾರಿ ಆಹಾರವನ್ನು (Nonveg Food) ಸೇವಿಸುವುದನ್ನು ನಿಲ್ಲಿಸುವಂತೆ ಪ್ರಿಯಕರ ಒತ್ತಡ ಹೇರಿದ ಪರಿಣಾಮ ಏರ್ ಇಂಡಿಯಾ ಪೈಲಟ್ (Air India Pilot) ನೇಣಿಗೆ ಶರಣಾದ ಘಟನೆ ಮುಂಬೈನ (Mumbai) ಅಂಧೇರಿಯ ಮರೋಲ್ ಪ್ರದೇಶದಲ್ಲಿ ನಡೆದಿದೆ.

ಸೃಷ್ಟಿ ತುಲಿ (25) ಆತ್ಮಹತ್ಯೆಗೆ ಶರಣದ ಪೈಲಟ್. ಈಕೆ ಫ್ಲ್ಯಾಟ್‌ವೊಂದರಲ್ಲಿ ಡೇಟಾ ಕೇಬಲ್‌ನಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಕುರಿತು ಯಾವುದೇ ಡೆತ್‌ನೋಟ್ ಪತ್ತೆಯಾಗಿಲ್ಲ. ಕುಟುಂಬಸ್ಥರು ನೀಡಿದ ದೂರಿನ ಆಧಾರದ ಮೇಲೆ ಆಕೆಯ ಪ್ರಿಯಕರ ಆದಿತ್ಯ ಪಂಡಿತ್‌ನನ್ನು (27) ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಪಬ್ಲಿಕ್‌ ಟಿವಿ ವರದಿಗೆ ಸ್ಪಂದನೆ – ಮಡಿಕೇರಿ ಹಾಸ್ಟೆಲ್‌ ವಿದ್ಯಾರ್ಥಿನಿಯರಿಗೆ ಬೆಂಗಳೂರಿನಿಂದ ಬಂತು 100 ಹೊದಿಕೆ

Air India Pilot Suicide Mumbai

ಆದಿತ್ಯ ಪದೇಪದೇ ಸೃಷ್ಟಿಯನ್ನು ಸಾರ್ವಜನಿಕವಾಗಿ ಅವಮಾನಿಸುವುದಲ್ಲದೇ ಆಕೆಯ ಆಹಾರ ಪದ್ಧತಿ ಬದಲಾಯಿಸುವಂತೆ ಹೇಳುತ್ತಿದ್ದ. ಅಲ್ಲದೇ ಮಾಂಸಾಹಾರ ಸೇವನೆ ಬಿಡುವಂತೆ ಆಕೆಯ ಮೇಲೆ ಒತ್ತಡ ಹೇರಿದ್ದ ಎಂದು ಸೃಷ್ಟಿ ಚಿಕ್ಕಪ್ಪ ಆರೋಪಿಸಿದ್ದಾರೆ. ಈ ವಿಷಯವಾಗಿ ಇಬ್ಬರ ನಡುವೆ ಜಗಳವಾಗಿತ್ತು. ಇದನ್ನೂ ಓದಿ: ಬೆಳ್ತಂಗಡಿ| ನದಿಯಲ್ಲಿ ಈಜಲು ಹೋದ ಮೂವರು ಯುವಕರು ನೀರುಪಾಲು

ಸೋಮವಾರ ಮುಂಜಾನೆ ದೆಹಲಿಗೆ ತೆರಳುತ್ತಿದ್ದ ಪ್ರಿಯಕರ ಆದಿತ್ಯನಿಗೆ ಸೃಷ್ಟಿ ಕರೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಳು. ಇದನ್ನು ತಿಳಿದ ಆದಿತ್ಯ ತಕ್ಷಣವೇ ಆಕೆ ಇದ್ದ ಫ್ಲ್ಯಾಟ್‌ಗೆ ಬಂದು ನೋಡಿದಾಗ ಬಾಗಿಲು ಲಾಕ್ ಆಗಿತ್ತು. ಈ ವೇಳೆ ನಕಲಿ ಕೀ ತಯಾರಕರನ್ನು ಕರೆಸಿ ಬಾಗಿಲು ತೆಗೆದು ನೋಡಿದಾಗ ಸೃಷ್ಟಿ ಡೇಟಾ ಕೇಬಲ್ ಸಹಾಯದಿಂದ ಆತ್ಮಹತ್ಯೆಗೆ ಶರಣಾಗಿರುವುದು ಬೆಳಕಿಗೆ ಬಂದಿದೆ. ಕೂಡಲೇ ಆಕೆಯನ್ನು ಅಂಧೇರಿಯ ಸೆವೆನ್ ಹಿಲ್ಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟು ಹೊತ್ತಿಗಾಗಲೇ ಆಕೆಯ ಪ್ರಾಣಪಕ್ಷಿ ಹಾರಿಹೋಗಿತ್ತು. ಇದನ್ನೂ ಓದಿ: ಭೋವಿ ನಿಗಮ ಹಗರಣ: ಡಿವೈಎಸ್ಪಿ ಹೆಸರು ಬರೆದಿಟ್ಟರೂ ಬಂಧನ ಮಾಡಿಲ್ಲ ಯಾಕೆ – ಸರ್ಕಾರಕ್ಕೆ ಹೈಕೋರ್ಟ್‌ ಚಾಟಿ

ಸೃಷ್ಟಿ ಉತ್ತರ ಪ್ರದೇಶ ಮೂಲದವಳಾಗಿದ್ದು, ಕಳೆದ ವರ್ಷ ಜೂನ್‌ನಿಂದ ಮುಂಬೈನಲ್ಲಿ ನೆಲೆಸಿದ್ದಳು ಎಂದು ಅಧಿಕಾರಿ ತಿಳಿಸಿದ್ದಾರೆ. ಎರಡು ವರ್ಷಗಳ ಹಿಂದೆ ದೆಹಲಿಯಲ್ಲಿ ವಾಣಿಜ್ಯ ಪೈಲಟ್ ಕೋರ್ಸ್ ಓದುತ್ತಿರುವಾಗ ಆದಿತ್ಯನನ್ನು ಭೇಟಿಯಾಗಿದ್ದಳು. ನಂತರ ಇವರಿಬ್ಬರ ಸ್ನೇಹ ಪ್ರೀತಿಗೆ ಬದಲಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದನ್ನೂ ಓದಿ: ದಿಢೀರ್‌ ದೆಹಲಿಗೆ ಸಿಎಂ – ಸಿದ್ದರಾಮಯ್ಯ ಸಂಪುಟಕ್ಕೆ ಶೀಘ್ರವೇ ಸರ್ಜರಿ?

ಆದಿತ್ಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 108 (ಆತ್ಮಹತ್ಯೆಗೆ ಪ್ರಚೋದನೆ) ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನವೆಂಬರ್ 29ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಇದನ್ನೂ ಓದಿ: ಜಮೀರ್‌ ಪ್ರಭಾವ ಬಳಸಿ ಚಿತ್ರದುರ್ಗದಲ್ಲಿ 6 ಎಕ್ರೆ ಖಬರ್‌ಸ್ಥಾನ ಜಮೀನು ಕಬಳಿಕೆ- ವಕ್ಫ್ ಮಾಜಿ ಅಧ್ಯಕ್ಷನ ವಿರುದ್ಧವೇ ಆಕ್ರೋಶ

TAGGED:Air India PilotmaharashtramumbaiNonvegಏರ್ ಇಂಡಿಯಾ ಪೈಲಟ್ನಾನ್‍ವೆಜ್ಮಹಾರಾಷ್ಟ್ರಮುಂಬೈ
Share This Article
Facebook Whatsapp Whatsapp Telegram

You Might Also Like

WTC SA 3
Cricket

ಚೋಕರ್ಸ್‌ ಹಣೆಪಟ್ಟಿ ಕಳಚಿದ ಹರಿಣರು – ದ. ಆಫ್ರಿಕಾಗೆ ವಿಶ್ವ ಟೆಸ್ಟ್‌ ಚಾಂಪಿಯನ್‌ ಕಿರೀಟ, ದಶಕಗಳ ಕನಸು ನನಸು

Public TV
By Public TV
6 minutes ago
M.P Renukacharya
Davanagere

ಜಾತಿಗಣತಿ ವರದಿ ಬಿಡುಗಡೆ ಮಾಡ್ತೀನಿ ಎಂದಿದ್ದ ಸಿಎಂ ಪೌರುಷ ಏನಾಯ್ತು? – ರೇಣುಕಾಚಾರ್ಯ

Public TV
By Public TV
12 minutes ago
Forever Naveen Kumar Kannada Cinema Sandalwood
Cinema

ಸೆಲೆಬ್ರಿಟಿ ವಸ್ತ್ರವಿನ್ಯಾಸಕ ನವೀನ್ ಕುಮಾರ್‌ಗೆ ಅಮೆರಿಕ ಗೌರವ

Public TV
By Public TV
31 minutes ago
Mangaluru Rain
Dakshina Kannada

ಮಂಗಳೂರಿನಲ್ಲಿ ಭಾರೀ ಮಳೆ – ಪಂಪ್‌ವೆಲ್ ಸರ್ಕಲ್ ಮತ್ತೆ ಮುಳುಗಡೆ

Public TV
By Public TV
44 minutes ago
ED 1
Bengaluru City

Exclusive | ವಾಲ್ಮೀಕಿ ಹಗರಣ: ಬಳ್ಳಾರಿ ಚುನಾವಣೆಗೆ 27 ಕೋಟಿ ಬಳಕೆಯಾಗಿದ್ದು ಹೇಗೆ? – 87 ಕೋಟಿ ಎಲ್ಲೆಲ್ಲಿ ಹಂಚಿಕೆಯಾಯ್ತು?

Public TV
By Public TV
49 minutes ago
Siddaramaiah 4
Districts

ನಮ್ಮ ನಿರೀಕ್ಷೆಗಳಿಗೆ ವಿರುದ್ಧವಾಗಿ ಕೆಲವು ಘಟನೆಗಳು ನಡೆಯುತ್ತವೆ – ಕಾಲ್ತುಳಿತ ಪ್ರಕರಣಕ್ಕೆ ಸಿಎಂ ಬೇಸರ

Public TV
By Public TV
1 hour ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?