ರಾಜ್ಯದ 21 ಅಧಿಕಾರಿಗಳಿಗೆ ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ

Public TV
1 Min Read
VSM MEDAL

ಬೆಂಗಳೂರು: ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ (VSM) ಮತ್ತು ಪ್ರಶಂಸನೀಯ ಪದಕ ಪಟ್ಟಿ ಪ್ರಕಟವಾಗಿದ್ದು, ಕರ್ನಾಟಕದ (Karnataka) 21 ಮಂದಿ ಅಧಿಕಾರಿಗಳ ಹೆಸರು ಪ್ರಕಟವಾಗಿದೆ.

3

ಎಡಿಜಿಪಿ ಸೌಮೇಂದು ಮುಖರ್ಜಿ, ಡಿವೈಎಸ್‌ಪಿ ಸುಧೀರ್ ಹೆಗ್ಡೆ ಅವರಿಗೆ ರಾಷ್ಟ್ರಪತಿಗಳ ಪ್ರಶಂಸನೀಯ ಪ್ರಶಸ್ತಿ ನೀಡಲಾಗುತ್ತದೆ. ಅಲ್ಲದೇ ಐಜಿಪಿ ರಮಣ್ ಗುಪ್ತಾ, ಐಜಿಪಿ ಪ್ರವೀಣ್ ಮಧುಕರ್ ಸೇರಿದಂತೆ ಕರ್ನಾಟಕದ 21 ಜನರ ಪಟ್ಟಿ ಬಿಡುಗಡೆಯಾಗಿದೆ. ಇದನ್ನೂ ಓದಿ: ಬಿಜೆಪಿ ಜೊತೆ ಸೀಟು ಹಂಚಿಕೆಗೂ ಮುನ್ನ ದಳಪತಿಗಳಿಂದ ಟೆಂಪಲ್ ರನ್

4

ವಿಶಿಷ್ಟ ಸೇವಾ ಪದಕ ಭಾರತೀಯ ಸಶಸ್ತ್ರ ಪಡೆಗಳಲ್ಲಿ ನೀಡುವ ಒಂದು ಪ್ರಶಸ್ತಿಯಾಗಿದೆ. ಭಾರತೀಯ ಸಶಸ್ತ್ರ ಪಡೆಗಳ ಯಾವುದೇ ಶ್ರೇಣಿಗಳ ಹುದ್ದೆ ಹೊಂದಿರುವವರ ಉನ್ನತ ರೀತಿಯ ವಿಶಿಷ್ಟ ಸೇವೆಯನ್ನು ಗುರುತಿಸಿ ಈ ಪದಕವನ್ನು ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು ಗಣರಾಜ್ಯೋತ್ಸವದ ಸಂದರ್ಭದಲ್ಲಿ ರಾಷ್ಟ್ರಪತಿಗಳು ನೀಡುತ್ತಾರೆ. ಇದನ್ನೂ ಓದಿ: ಬಿಟ್ ಕಾಯಿನ್ ಅಕ್ರಮ ಪ್ರಕರಣದಲ್ಲಿ ಮೊದಲ ಅರೆಸ್ಟ್- ಇಬ್ಬರ ಬಂಧನ

Share This Article