ನವದೆಹಲಿ: ದೇಶಾದ್ಯಂತ ರಾಷ್ಟ್ರಪತಿ ಚುನಾವಣೆಗೆ ಮತದಾನ ಮುಗಿದಿದೆ. ಬೆಳಗ್ಗೆ 10 ಗಂಟೆಗೆ ಶುರುವಾದ ವೋಟಿಂಗ್ ಸಂಜೆ 5 ಗಂಟೆಯವರೆಗೂ ನಡೀತು. ಒಟ್ಟು ಶೇಕಡಾ 99.18ರಷ್ಟು ಮತಗಳು ಚಲಾವಣೆ ಆದವು. ಸಂಸತ್ ಭವನದಲ್ಲಿ ಸಂಸದರು, ರಾಜ್ಯಗಳಲ್ಲಿ ಶಾಸನ ಸಭೆಗಳಲ್ಲಿ ಶಾಸಕರು ತಮ್ಮ ಹಕ್ಕು ಚಲಾಯಿಸಿದ್ರು.
Former Prime Minister and Congress MP Dr Manmohan Singh cast his vote for the Presidential election, today at the Parliament. pic.twitter.com/H6jl3O7hlb
— ANI (@ANI) July 18, 2022
Advertisement
ಸಂಸತ್ ಭವನದಲ್ಲಿ ಪ್ರಧಾನಿ ಮೋದಿ, ಸಚಿವರು, ಸಂಸದರು ವೋಟ್ ಹಾಕಿದ್ರು. ಕೋವಿಡ್ ಕಾರಣ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಆರ್‍ಕೆ ಸಿಂಗ್ ಪಿಪಿಇ ಕಿಟ್ ಧರಿಸಿ ಮತ ಚಲಾಯಿಸಿದ್ರು. ಮಾಜಿ ಪ್ರಧಾನಿಗಳಾದ ಮನಮೋಹನ್ ಸಿಂಗ್ ಮತ್ತು ಹೆಚ್‍ಡಿ ದೇವೇಗೌಡರು ವ್ಹೀಲ್ ಚೇರ್ನಲ್ಲಿ ಬಂದು ವೋಟ್ ಹಾಕಿದ್ರು. ಬಿಜೆಪಿಯ ಇಬ್ಬರು ಸೇರಿ 8 ಸಂಸದರು ಮತದಾನದಿಂದ ದೂರ ಉಳಿದ್ರು. ಇತ್ತ ಬೆಂಗಳೂರಿನ ವಿಧಾನಸೌಧದಲ್ಲಿ ಸಿಎಂ ಬೊಮ್ಮಾಯಿ, ಸಚಿವರು, ವಿಪಕ್ಷ ನಾಯಕರು, ಶಾಸಕರು ಮತ್ತು ಇಬ್ಬರು ಸಂಸದರು ಮತದಾನ ಮಾಡಿದ್ರು. ಜುಲೈ 21ರಂದು ಫಲಿತಾಂಶ ಪ್ರಕಟವಾಗಲಿದೆ. ಇದನ್ನೂ ಓದಿ: ದೇಶದಲ್ಲಿ ಮಂಕಿಪಾಕ್ಸ್ ಭೀತಿ – ಅಂತಾರಾಷ್ಟ್ರೀಯ ಪ್ರಯಾಣಿಕರ ತಪಾಸಣೆಗೆ ಕೇಂದ್ರ ಸೂಚನೆ
Advertisement
Advertisement
ಸದ್ಯದ ಲೆಕ್ಕಾಚಾರದ ಪ್ರಕಾರ ಎನ್‍ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ಶೇಕಡಾ 60ಕ್ಕೂ ಹೆಚ್ಚು ಮತ ಪಡೆದು ವಿಜಯಶಾಲಿ ಆಗಲಿದ್ದಾರೆ. ಮುರ್ಮು ಅವರಿಗೆ ಎನ್‍ಡಿಎ ಪಕ್ಷಗಳಲ್ಲದೇ, ಬಿಜೆಡಿ, ಟಿಡಿಪಿ, ವೈಎಸ್‍ಆರ್‍ಸಿಪಿ, ಜೆಡಿಎಸ್, ಬಿಎಸ್‍ಪಿ, ಅಕಾಲಿದಳ, ಶಿವಸೇನೆ, ಜೆಎಂಎಂ ಬೆಂಬಲ ನೀಡಿವೆ. ಅಲ್ಲದೇ ರಾಷ್ಟ್ರಪತಿ ಚುನಾವಣೆಯಲ್ಲಿ ವಿಪಕ್ಷಗಳ ಕೆಲ ಸದಸ್ಯರಿಂದ ಕ್ರಾಸ್ ವೋಟಿಂಗ್ ನಡೆದಿದೆ ಎನ್ನಲಾಗುತ್ತಿದೆ. ಟಿಎಂಸಿ 12 ಶಾಸಕರು ಮುರ್ಮುಗೆ ವೋಟ್ ಹಾಕಿದ್ದಾರೆ ಎನ್ನಲಾಗುತ್ತಿದೆ. ಐವರು ಕಾಂಗ್ರೆಸ್ ಶಾಸಕರು ಕೂಡ ಕ್ರಾಸ್ ವೋಟ್ ಮಾಡಿದ್ದಾರೆ ಎಂದು ಹೇಳಲಾಗಿದೆ. ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆ – ಮೊದಲ ಬಾರಿ ಸಾರ್ವಜನಿಕವಾಗಿ ವ್ಹೀಲ್ ಚೇರ್‌ನಲ್ಲಿ ಕಾಣಿಸಿಕೊಂಡ ಹೆಚ್‌ಡಿಡಿ
Advertisement
ತೆಲಂಗಾಣದ ಕಾಂಗ್ರೆಸ್ ಶಾಸಕಿ, ಮಾಜಿ ನಕ್ಸಲ್ ಸೀತಕ್ಕ ಅವರು ಮುರ್ಮುಗೆ ಮತ ಹಾಕಿದ್ರು. ನನ್ನ ಆತ್ಮಸಾಕ್ಷಿಗೆ ಅನುಗುಣವಾಗಿ ಮತ ಹಾಕಿದ್ದೇನೆ ಅಂದ್ರು. ಬುಡಕಟ್ಟು ಜನರೇ ಹೆಚ್ಚಿರುವ ಮುಲುಗು ಕ್ಷೇತ್ರವನ್ನು ಸೀತಕ್ಕ ಪ್ರತಿನಿಧಿಸ್ತಿದ್ದಾರೆ. ವಿಪಕ್ಷಗಳ ಅಭ್ಯರ್ಥಿ ಯಶವಂತ ಸಿನ್ಹಾಗೆ ಮೂರು ಲಕ್ಷದಷ್ಟು ಮತ ಬೀಳುವ ನಿರೀಕ್ಷೆ ಇದೆ. ಈ ಚುನಾವಣೆಯಲ್ಲಿಯೂ ಬಿಜೆಪಿ ಹಣ ಕೊಟ್ಟುಮತ ಖರೀದಿ ಮಾಡಿದೆ ಎಂದು ಯಶವಂತ ಸಿನ್ಹಾ ಗಂಭೀರ ಆರೋಪ ಮಾಡಿರೋದು ಗಮನಾರ್ಹ ವಿಚಾರ. ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆ- ವ್ಹೀಲ್ ಚೇರ್ನಲ್ಲಿ ಬಂದು ಮತ ಹಾಕಿದ ಮನಮೋಹನ್ ಸಿಂಗ್