ಕಾಂಗ್ರೆಸ್ ಪಕ್ಷದಲ್ಲಿ ಇರುವ ನಾಯಕರು ನಕಲಿ ಗಾಂಧಿ ಕುಟುಂಬದ ರಬ್ಬರ್ ಸ್ಟಾಂಪ್: ಬಿಜೆಪಿ

Public TV
2 Min Read
congress flag

ಬೆಂಗಳೂರು: ಬಿಜೆಪಿ ರಾಷ್ಟ್ರಪತಿ ಸ್ಥಾನಕ್ಕೆ ಚುನಾಯಿಸುವ ವ್ಯಕ್ತಿಗಳು ರಬ್ಬರ್ ಸ್ಟಾಂಪ್ ಎಂದು ಕಾಂಗ್ರೆಸ್ ಒರಟು ವಾದ ಮಾಡುತ್ತಿದೆ. ಕಾಂಗ್ರೆಸ್ ಪಕ್ಷದಲ್ಲಿ ಇರುವ ನಾಯಕರು ನಕಲಿ ಗಾಂಧಿ ಕುಟುಂಬದ ರಬ್ಬರ್ ಸ್ಟಾಂಪ್ ಅಲ್ಲದೆ ಮತ್ತೇನು ಎಂದು ಬಿಜೆಪಿ ಟ್ವಿಟ್ಟರ್ ಮೂಲಕ ಕಾಂಗ್ರೆಸ್ ವಿರುದ್ಧ ಕಿಡಿಕಾರಿದೆ.

Draupadi Murmu

ಟ್ವೀಟ್‍ನಲ್ಲಿ ಏನಿದೆ?
ರಾಷ್ಟ್ರಪತಿ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಅವರನ್ನು ಕಣಕ್ಕಿಳಿಸಿರುವುದನ್ನೇ ಟೀಕಿಸುತ್ತಿರುವ ಕಾಂಗ್ರೆಸ್ ಹಾಗೂ ಅದರ ಅಂಗಪಕ್ಷಗಳು ಬಯಲಿನಲ್ಲಿ ಬಚ್ಚಿಟ್ಟುಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ. ಒಬ್ಬ ಬುಡಕಟ್ಟು ಸಮುದಾಯದ ಮಹಿಳೆ ರಾಷ್ಟ್ರದ ಅತ್ಯುನ್ನತ ಸ್ಥಾನಕ್ಕೆ ಏರುವುದನ್ನು ನಿಮಗೇಕೆ ಸಹಿಸಲಾಗುತ್ತಿಲ್ಲ? ದೇಶದ ಅತ್ಯುನ್ನತ ಪದವಿಗೆ ಏರುತ್ತಿರುವ ಮೊದಲ ಬುಡಕಟ್ಟು ಮಹಿಳೆಯಾಗಿ ದ್ರೌಪದಿ ಮುರ್ಮು ಅವರು ಗುರುತಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ: 2.5 ವರ್ಷಗಳಿಂದ ನಿಮ್ಮ ಮನೆಗೆ ನಮಗೆ ಪ್ರವೇಶವೇ ಇರಲಿಲ್ಲ, ಗೇಟ್‌ ಬಳಿ ಕಾಯಬೇಕಿತ್ತು: ಠಾಕ್ರೆಗೆ ಬಂಡಾಯ ಶಾಸಕನ ಪತ್ರ

ಬಿಜೆಪಿ ವಿರುದ್ಧ ಯೋಜಿತ ಪ್ರಚಾರ ನಡೆಸುತ್ತಿದ್ದ ಕಾಂಗ್ರೆಸ್ ಹಾಗೂ ಎಡಪಂಥೀಯ ಬುದ್ಧಿಜೀವಿಗಳಿಗೆ ಈಗ ಅಸ್ತಿತ್ವದ ಚಿಂತೆ ಮೂಡುತ್ತಿದೆಯೇ? ನಕಲಿಗಾಂಧಿಸ್ಟಾಂಪ್. ಮೆ ಲಡ್ಕಿ ಹೂ, ಲಡ್ ಸಕ್ತಿ ಹೂ ಎಂದು ಮಹಿಳೆಯರ ಪರವಾಗಿ ಹೂಂಕರಿಸಿದ್ದ ಕಾಂಗ್ರೆಸ್ ಪಕ್ಷ ಮಹಿಳೆಯರಿಗೆ ಆದ್ಯತೆಯೇ ನೀಡಲಿಲ್ಲ. ಬಿಜೆಪಿ ಮಹಿಳಾ ಸಬಲೀಕರಣಕ್ಕೆ ಬದ್ಧವಾಗಿದೆ, ಆ ಕಾರಣದಿಂದಲೇ ವನವಾಸಿ ನಾಯಕಿ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿಸಿದ್ದೇವೆ. ಈ ಬದ್ಧತೆ ವಿಪಕ್ಷಗಳಲ್ಲಿ ಸಾಧ್ಯವೇ?

ಅಬ್ದುಲ್ ಕಲಾಂ, ರಾಮನಾಥ್ ಕೊವಿಂದ್ ಹಾಗೂ ದ್ರೌಪದಿ ಮುರ್ಮು ಎಲ್ಲರೂ ಎನ್‍ಡಿಎ ಆಯ್ಕೆ. ಇಂತಹ ಮಹನೀಯರ ಬಗ್ಗೆ ಯೋಚಿಸಲೂ ಕಾಂಗ್ರೆಸ್ ಪಕ್ಷಕ್ಕೆ ಸಾಧ್ಯವಾಗಿಲ್ಲ. ಎನ್‍ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರ ಆಯ್ಕೆಯನ್ನು ಕಾಂಗ್ರೆಸ್ ರಬ್ಬರ್ ಸ್ಟಾಂಪ್ ಎಂದಿರುವುದು ಅಕ್ಷಮ್ಯ. ಕಾಂಗ್ರೆಸ್ ನಕಲಿಗಾಂಧಿಸ್ಟಾಂಪ್ ಅಲ್ಲವೇ? ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವಿದ್ದಾಗ ಮೂರು ಬಾರಿ ರಾಷ್ಟ್ರಪತಿ ಚುನಾವಣೆ ನಡೆಸುವ ಅವಕಾಶ ಲಭಿಸಿದೆ. ಅಬ್ದುಲ್ ಕಲಾಂ – ಮುಸ್ಲಿಂ ಸಮುದಾಯ, ರಾಮನಾಥ್ ಕೋವಿಂದ್ – ದಲಿತ ಸಮುದಾಯ, ದ್ರೌಪದಿ ಮುರ್ಮು – ಬುಡಕಟ್ಟು ಮಹಿಳೆ. ಈ ಆಯ್ಕೆಗಳು ಕಾಂಗ್ರೆಸ್ ಪಕ್ಷಕ್ಕೆ ಏಕೆ ಕಹಿಯಾಗುತ್ತಿದೆ? ಇದನ್ನೂ ಓದಿ: ಪೊಲೀಸ್ ಠಾಣೆಗೆ ಬಂದು ಪೊಲೀಸರಿಗೆ ಚಾಕು ಇರಿದ

ಬಿಜೆಪಿ ರಾಷ್ಟ್ರಪತಿ ಸ್ಥಾನಕ್ಕೆ ಚುನಾಯಿಸುವ ವ್ಯಕ್ತಿಗಳು ರಬ್ಬರ್ ಸ್ಟಾಂಪ್ ಎಂದು ಕಾಂಗ್ರೆಸ್ ಒರಟು ವಾದ ಮಾಡುತ್ತಿದೆ. ಕಾಂಗ್ರೆಸ್ ಪಕ್ಷದಲ್ಲಿ ಇರುವ ನಾಯಕರು ನಕಲಿ ಗಾಂಧಿ ಕುಟುಂಬದ ರಬ್ಬರ್ ಸ್ಟಾಂಪ್ ಅಲ್ಲದೆ ಮತ್ತೇನು? ದೇಶದ ಮೇಲೆ ಇಂದಿರಾ ತುರ್ತು ಪರಿಸ್ಥಿತಿ ಹೇರಿದಾಗ ಆಗಿನ ರಾಷ್ಟ್ರಪತಿಗಳು ವರ್ತಿಸಿದ ರೀತಿಯನ್ನು ಒಮ್ಮೆ ನೆನಪಿಸಿಕೊಳ್ಳಿ. ಯಾರು ಯಾರನ್ನು ರಬ್ಬರ್ ಸ್ಟಾಂಪ್ ಮಾಡಿಕೊಂಡಿದ್ದರು ಎಂಬುದನ್ನು ಈ ಘಟನೆಯೊಂದರಿಂದಲೇ ತಿಳಿಯಬಹುದು. ಅಂದು ರಾಷ್ಟ್ರಪತಿಯನ್ನು ಹೇಗೆ ನಡೆಸಿಕೊಳ್ಳಲಾಯ್ತು ಎಂಬುದನ್ನು ನೆನಪಿಸಬೇಕೇ ಎಂದು ಬಿಜೆಪಿ ಪ್ರಶ್ನಿಸಿದೆ.

Live Tv

Share This Article
Leave a Comment

Leave a Reply

Your email address will not be published. Required fields are marked *