ಬೆಂಗಳೂರು: ಯುಪಿಎ ರಾಷ್ಟ್ರಪತಿ ಅಭ್ಯರ್ಥಿ ಮೀರಾ ಕುಮಾರ್ ಅವರು ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಲಾಂಜ್‍ನಲ್ಲಿ ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿಯಾದರು. ಈ ವೇಳೆ ಮೀರಾ ಕುಮಾರ್‍ಗೆ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಸಚಿವ ಆಂಜನೇಯ, ಕಾಂಗ್ರೆಸ್ ನಾಯಕರಾದ ಮುನಿಯಪ್ಪ, ಬಿ.ಎಲ್.ಶಂಕರ್ ಸಾಥ್ ನೀಡಿದರು.
ಈ ವೇಳೆ ಮಾತನಾಡಿದ ದೇವೇಗೌಡ ಅವರು ರಾಷ್ಟ್ರಪತಿ ಚುನಾವಣೆ ಸೈದ್ಧಾಂತಿಕ ಹೋರಾಟವಾಗಿದೆ. 17 ಪಕ್ಷಗಳು ಮೀರಾಕುಮಾರ್ ಅವರಿಗೆ ಬೆಂಬಲ ಸೂಚಿಸಿವೆ. ಮತ್ತು ಜೆಡಿಎಸ್ ಕೂಡ ಬೆಂಬಲ ನೀಡಿದೆ. ಹಾಗಾಗಿ ಮೀರಾಕುಮಾರ್ ಅವರಿಗೆ ನಾನು ಸೂಚಕರಾಗಿ ಸಹಿ ಕೂಡಾ ಮಾಡಿದ್ದೇನೆ. ಜೆಡಿಎಸ್ ಶಕ್ತಿ ಎಷ್ಟಿದೆಯೋ ಅಷ್ಟು ಬೆಂಬಲ ಮೀರಾಕುಮಾರ್‍ಗೆ ನೀಡುತ್ತೇವೆ ಎಂದು ಹೇಳಿದರು.
ಹೆಚ್.ಡಿ.ದೇವೇಗೌಡ ಅವರನ್ನು ಭೇಟಿಯಾದ ಕೂಡಲೇ ಮಾತನಾಡಿದ ರಾಷ್ಟ್ರಪತಿ ಅಭ್ಯರ್ಥಿ ಮೀರಾಕುಮಾರ್ ಅವರು, ನನಗೆ ಈಗಾಗಲೇ ಜೆಡಿಎಸ್ ಬೆಂಬಲ ನೀಡಿದೆ. ಮಾಜಿ ಪ್ರಧಾನಿ ದೇವೇಗೌಡರು ನನಗೆ ಸೂಚಕರಾಗಿ ಸಹಿ ಮಾಡಿರೋದು ನನ್ನ ಪುಣ್ಯ. ಇವತ್ತು ಕೂಡ ದೇವೇಗೌಡರನ್ನ ಭೇಟಿಯಾಗಿ ಬೆಂಬಲ ಕೋರಿದ್ದೇನೆ ಎಂದು ತಿಳಿಸಿದರು.
Opposition Presidential candidate #MeiraKumar met Former PM HD Deve Gowda in Bengaluru pic.twitter.com/GhKImON2Fl
— ANI (@ANI) July 1, 2017